Breaking:ಬೆಂಗಳೂರು ಗಣೇಶೋತ್ಸವ: ಚಾಮರಾಜಪೇಟೆಯಲ್ಲಿ ಪೊಲೀಸರ ರೂಟ್ ಮಾರ್ಚ್
ಬೆಂಗಳೂರು, ಆಗಸ್ಟ್ 29: ಗಣೇಶ ಹಬ್ಬದ ಕಾರಣ ಬೆಂಗಳೂರು ನಗರ ಪೊಲೀಸರು ಸೂಕ್ಷ್ಮ ಏರಿಯಾಗಳಲ್ಲಿ ವಿಶೇಷ ಬಂದೋಬಸ್ತ್ ಮಾಡಿಕೊಂಡಿದ್ದು, ಕೆಲ ಏರಿಯಾಗಳಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡಿದರೆ ಹುಷಾರ್ ಎಂಬ ಎಚ್ಚರಿಕೆ ರವಾನಿಸಿದ್ದಾರೆ.
ನಗರದ ಕೆಲ ಕಡೆ ಗಣೇಶನ ಪೆಂಡಾಲ್‌ನಲ್ಲಿ ಸಾವರ್ಕರ್ ಫೋಟೋ ಇಡುವ ಕುರಿತಂತೆ ಪರ ವಿರೋಧದ ಚರ್ಚೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಮಾಜದ ಶಾಂತಿ ಸೌಹಾರ್ದತೆ ಕಪಾಡುವ ಹಿನ್ನೆಲೆ ಪೊಲೀಸರು ಮುಂಜಾಗ್ರತೆ ವಹಿಸಿದ್ದಾರೆ. ಬೆಂಗಳೂರಿನ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದ್ದಾರೆ.

ಬೆಂಗಳೂರು ನಗರದ ಪಶ್ಚಿಮ ವಿಭಾಗದ ಜೆಜೆಆರ್ ನಗರ ಠಾಣಾ ವ್ಯಾಪ್ತಿಯಲ್ಲಿ ರೂಟ್‌ಮಾರ್ಚ್ ನಡೆಸಿದ್ದು. ಕಿಡಿಗಡಿಗಳಿಗೆ ಬಾಲ ಬಿಚ್ಚದಂತೆ ಪೊಲೀಸರು ಮೆಸೇಜ್ ಪಾಸ್ ಮಾಡಿದ್ದಾರೆ. ರೂಟ್ ಮಾರ್ಚ್ ಗೂ ಮುನ್ನ ಎಲ್ಲಾ ಸಮುದಾಯದ ಮುಖಂಡರಗಳ ಜೊತೆಗೆ ಪೊಲೀಸರು ಶಾಂತಿ ಸಭೆ ನಡೆಸಿದ್ದಾರೆ
ಜೆಜೆ ನಗರ ವ್ಯಾಪ್ತಿಯಲ್ಲಿ ರೂಟ್ ಮಾರ್ಚ್ ನಡೆಸಿದ್ದು ಜನರಲ್ಲಿ ಅರಿವು ಮೂಡಿಸುವ ಉದ್ಧೇಶದಿಂದ ನಡೆದ ರೂಟ್ ಮಾರ್ಚ್‌ನಲ್ಲಿ ಪಶ್ಚಿಮ ವಿಭಾಗದ ಹತ್ತಕ್ಕೂ ಹೆಚ್ಚು ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು, ಸಿಎಆರ್‌ಡಿ ಸ್ಕ್ವಾಡ್, ಕೆಎಸ್‌ಆರ್‌ಪಿ ಸೇರಿ ಸುಮಾರು ಮುನ್ನೂರಕ್ಕೂ ಹೆಚ್ಚು ಅಧಿಕಾರಿ ಮತ್ತು ಈ ವೇಳೆ ಭಾಗಿಯಾಗಿದ್ದರು. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಜಗಜೀವನ್‌ರಾಮ್‌ನಗರ, ಪಾದರಾಯನಪುರ, ಗೋರಿಪಾಳ್ಯದ ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಯಿತು.

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ:
ಇನ್ನು ಚಾಮರಾಜಪೇಟೆ ಮೈದಾನದಲ್ಲಿ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಗಿತ್ತಿದೆ. ಕೆಲವು ಕಠಿಣ ನಿಯಮಗಳ ಅನುಸಾರ ಗಣೇಶೋತ್ಸವ ಮಾಡಲು ಅನುಮತಿಯನ್ನು ನೀಡಲಾಗಿದೆ. ಈದ್ಗಾ ಮೈದಾನ ಅಂತಲೂ ಕರೆಯುವ ಮೈದಾನದಲ್ಲಿ ಗಣೇಶೋತ್ಸವ ಮೊದಲ ಸಲ ನಡೆಸುವ ಹಿನ್ನೆಲೆ ಅಹಿತಕರ ಘಟನೆ ನಡೆಯದಂತೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.












Click it and Unblock the Notifications