ಸುಮಧುರ ಕನ್ನಡ ಚಿತ್ರ ಗೀತೆಗಳ 'ಗಾನಯಾನ'
ಬೆಂಗಳೂರು, ಮಾರ್ಚ್ 22: ಚಲನಚಿತ್ರ ರಂಗದ ಇತಿಹಾಸ ಬಿಂಬಿಸುವ ಸುಮಧುರ ಕನ್ನಡ ಚಲನಚಿತ್ರ ಗೀತೆಗಳ ಭಾವಯಾನ ಗಾನಯಾನ ಕಾರ್ಯಕ್ರಮ ಮಾ.23ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸರಸ್ ಕಮ್ಯುನಿಕೇಷನ್ ಸಂಸ್ಥೆಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಾನಯಾನದಲ್ಲಿ ಚಲನಚಿತ್ರ ಹಾಗೂ ಸಂಗೀತ ಕಲಾವಿದರಾದ ಮೋಹನ್, ಜೋಗಿ ಸುನಿತಾ, ಮಂಗಳ ರವಿ,ಶ್ರಾವ್ಯ ಆಚಾರ್, ಶ್ರೀನಿವಾಸ್ ಆಚಾರ್ ನಡೆಸಿಕೊಳ್ಳಲಿದ್ದಾರೆ .ಸಂಜೆ 6ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಕನ್ನಡ ನಾಡು-ನುಡಿ ಹಾಗೂ ನೆಲ-ಜಲ ಮತ್ತು ಚಲನಚಿತ್ರದ ಇತಿಹಾಸವನ್ನು ನೆನಪಿಸುವ ಕಾರ್ಯಕ್ರಮವಾಗಿದೆ. ಈ ಗಾನಯಾನ ಕಾರ್ಯಕ್ರಮ, ಮೈಸೂರು, ಮಂಗಳೂರು, ಮಡಿಕೇರಿ ಹೀಗೆ ರಾಜ್ಯದ ಹಲವಾರು ಭಾಗಗಳಲ್ಲಿ ನಡೆಸಲಾಗುತ್ತದೆ.












Click it and Unblock the Notifications