Bengaluru Second Airport: ಬೆಂಗಳೂರು ಎರಡನೇ ಏರ್‌ಪೋರ್ಟ್ ನಿರ್ಮಾಣ ಜಾಗದ ಬಗ್ಗೆ ಜಿ.ಪರಮೇಶ್ವರ್ ಸುಳಿವು
Bengaluru Second Airport: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಿಂದ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಇನ್ನು ಇಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಟರ್ಮಿನಲ್ 2 ಅನ್ನು ತೆರೆಯಲಾಯಿತು. ಆದರೂ ಕೂಡ ಪ್ರಯಾಣಿಕರ ಸಂಖ್ಯೆ ಮಾತ್ರ ಕಡಿಮೆಯಾಗದೆ, ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣ ಎರಡು ಟರ್ಮಿನಲ್‌ಗಳನ್ನು ಒಳಗೊಂಡಿದೆ. ಆದರೂ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಲೇ ಇದೆ. ಇದನ್ನು ನಿಯಂತ್ರಣ ಮಾಡಲು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಜಾಗ ಹುಡುಕಾಟದ ಕೆಲಸ ನಡೆಯುತ್ತಲೇ ಇದೆ. ಇದೀಗ ಈ ಬಗ್ಗೆ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಮೊದಲಿನಿಂದಲೂ ಕೂಡ ಬೆಂಗಳೂರಿನ ಬಳಿಯಿರುವ ತುಮಕೂರು ಜಿಲ್ಲೆಯಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆನ್ನುವ ಕೂಗು ಕೇಳಿ ಬಂದಿತ್ತು. ಅಲ್ಲದೆ, ಈಗಾಗಲೇ ಹಲವೆಡೆ ಜಾಗ ಗುರುತಿಸಲಾಗಿದ್ದು, ಇದರ ನಡುವೆಯೇ ದಾಬಾಸ್ ಪೇಟೆಯಲ್ಲಿ ನಿರ್ಮಾಣ ಮಾಡಲಾಗುತ್ತದೆ ಎನ್ನುವ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ಇನ್ನು ಈ ಬಗ್ಗೆ ಸಂತನರಸಪುರದಲ್ಲಿ ಮಾತನಾಡಿದ ಸಚಿವ ಜಿ.ಪರಮೇಶ್ವರ್ ಅವರು, ತುಮಕೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಬಗ್ಗೆ ಚರ್ಚೆ ಆಗಿಲ್ಲ. ದಾಬಸ್ ಪೇಟೆ, ನೆಲಮಂಗಲ ಬಳಿ ನಿರ್ಮಾಣ ಮಾಡಲು ಚರ್ಚೆ ನಡೆಯುತ್ತಿದೆ ಎಂದು ಸುಳಿವು ನೀಡಿದರು.
ಬೆಂಗಳೂರು ಜನಸಂಖ್ಯೆ: ವರ್ಲ್ಡ್ ಪಾಪ್ಯುಲೇಶನ್ ವರದಿ ಪ್ರಕಾರ, ಬೆಂಗಳೂರು ನಗರದ ಜನಸಂಖ್ಯೆಯು 2024ರಲ್ಲಿ 1,40,08,300 ಎಂದು ಅಂದಾಜಿಸಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ, ಬೆಂಗಳೂರಿನ ಜನಸಂಖ್ಯೆಯು 1950ರಲ್ಲಿ ಕೇವಲ 7,45,999 ಆಗಿತ್ತು. ಇದು ದಶಕಗಳಲ್ಲಿ ಆಗಿರುವ ಗಮನಾರ್ಹ ಜನಸಂಖ್ಯಾ ಬೆಳವಣಿಗೆಯನ್ನು ತೋರಿಸುತ್ತದೆ.
ಅಷ್ಟೇ ಅಲ್ಲದೆ, ವರ್ಲ್ಡ್ ಪಾಪ್ಯುಲೇಶನ್ ವರದಿ ಪ್ರಕಾರ, ನಗರದ ಜನಸಂಖ್ಯೆಯು 2025ರ ವೇಳೆಗೆ 18 ಮಿಲಿಯನ್ ತಲುಪಬಹುದು ಎಂದು ಎನ್ನಲಾಗುತ್ತಿದೆ.
ಎಂಬಿ ಪಾಟೀಲ್ ಹೇಳಿದ್ದೇನು?: ಬೆಂಗಳೂರು ಬೆಂಗಳೂರಿಗರ ತವರು ಮಾತ್ರ ಅಲ್ಲ. ಇದು ಉತ್ತರ ಪ್ರದೇಶ, ಉತ್ತರ ಭಾರತ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಅದರಾಚೆಗಿನ ವ್ಯಕ್ತಿಗಳನ್ನು ಆಕರ್ಷಿಸುತ್ತಲೇ ಇದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಅನೇಕ ಯುವಕರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಇಲ್ಲಿಗೆ ಬರುತ್ತಾರೆ. ನಾವು ವಲಸಿಗರಲ್ಲಿ ಹೆಚ್ಚಳವನ್ನು ಗಮನಿಸುತ್ತಿದ್ದೇವೆ. ಇದು ನಮ್ಮ ಮೂಲಸೌಕರ್ಯಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ಸಚಿವ ಎಂಬಿ ಪಾಟೀಲ್ ಎಂದು ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಸಂಚಾರ ದಟ್ಟಣೆ ಇಲ್ಲಷ್ಟೇ ಅಲ್ಲ, ಬೇರೆ ಬೇರೆ ನಗರಗಳಲ್ಲೂ ಇವೆ. ಇತ್ತೀಚೆಗೆ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ಯಾನ್ ಫ್ರಾನ್ಸಿಸ್ಕೋ ಹೋಗಿದ್ದರು. ಅಲ್ಲಿ ಅವರಿಗೆ ಕಾನ್ಸುಲ್ ಜನರಲ್ ನಿವಾಸಕ್ಕೆ ಡಿನ್ನರ್ ಹೋಗುವುದಕ್ಕೆ ಒಂದೂ ಮುಕ್ಕಾಲು ಗಂಟೆ ಬೇಕಾಯಿತು. ಆದರೂ ಅಲ್ಲಿನ ಜನ ಅದರ ಬಗ್ಗೆ ದೂರುವುದಿಲ್ಲ ಎಂದು ಸಂಚಾರ ದಟ್ಟಣೆ ಸಮಸ್ಯೆ ಹೊರಗೂ ಇದೆ ಎಂಬ ಹೋಲಿಕೆ ನೀಡಿದರು.












Click it and Unblock the Notifications