ಮಲ್ಲೇಶ್ವರದ ಆಸ್ಪತ್ರೆಯಲ್ಲಿ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರ

ಬೆಂಗಳೂರು ಫೆಬ್ರವರಿ 10: ಸೀಳು ತುಟಿ, ಸೀಳು ಮೇಲು ದವಡೆ, ಸುಟ್ಟ ಗಾಯಗಳು ಇರುವವರಿಗೆ ಉಚಿತವಾಗಿ ಚಿಕಿತ್ಸೆ ಪಡೆಯಲು ಮತ್ತೊಂದು ಅವಕಾಶ ಒದಗಿ ಬಂದಿದೆ. ಫ್ರೆಂಡ್ಸ್ ವೆಲ್‍ಫೇರ್ ಆರ್ಗನೈಸೇಷನ್ 25 ನೇ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ಬೆಂಗಳೂರಿನಲ್ಲಿ ಆಯೋಜಿಸುತ್ತಿದೆ.

ಸ್ವಯಂ ಸೇವಾ ಸಂಸ್ಥೆಯಾದ ಫ್ರೆಂಡ್ಸ್ ವೆಲ್‍ಫೇರ್ ಆರ್ಗನೈಸೇಷನ್ ಕಳೆದ 24 ವರ್ಷಗಳಿಂದ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ.

ಜರ್ಮನಿಯ ನುರಿತ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞರ ತಂಡ ಮಲ್ಲೇಶ್ವರಂ ನ ವೇಗಾಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ಪ್ಲಾಸ್ಟಿಕ್ ಸರ್ಜರಿ ನಡೆಸಲಿದೆ. ಸೀಳು ತುಟಿ, ಸೀಳು ಮೇಲ್ದವಡೆ, ಸುಟ್ಟಗಾಯಗಳಿಮದ ಚರ್ಮಕ್ಕೆ ಆಗಿರುವ ಹಾನಿಯನ್ನು ಈ ಪ್ಲಾಸ್ಟಿಕ್ ಸರ್ಜರಿ ಶಿಬಿರದಲ್ಲಿ ಸರಿಪಡಿಸಲಾಗುವುದು.

FWO 25th Free Plastic Surgery camp Bengaluru

ಮಲ್ಲೇಶ್ವರಂ 18 ನೇ ಕ್ರಾಸ್‍ನಲ್ಲಿರುವ (ಬಸ್‍ಸ್ಟಾಪ್ ಎದುರು) ವೇಗಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯಲಿರುವ ಈ ಶಿಬಿರಕ್ಕೆ ಬಂದು ಸಾರ್ವಜನಿಕರು ತಮ್ಮ ಸೀಳು ತುಟಿಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳು ತಮ್ಮ ಜತೆ ಕಡ್ಡಾಯವಾಗಿ ಕುಟುಂಬ ಸದಸ್ಯರು ಅಥವಾ ಸಂಬಂಧಿಕರನ್ನು ಕರೆದುಕೊಂಡು ಬರಬೇಕು.

ಈ ಶಿಬಿರದ ವಿವರಗಳು ಇಂತಿವೆ:-
ಪರೀಕ್ಷಾ/ತಪಾಸಣೆ ದಿನ: 9 ನೇ ಫೆಬ್ರವರಿ 2019 ರಿಂದ 13 ನೇ ಫೆಬ್ರವರಿ ಸಮಯ ಬೆಳಗ್ಗೆ 8.30 ರಿಂದ.
ಸ್ಥಳ: ವೇಗಸ್ ಸೂಪರ್ ವಿಶೇಷ ಆಸ್ಪತ್ರೆ
18 ನೇ ಕ್ರಾಸ್, ಬಸ್ ನಿಲ್ದಾಣದ ಹತ್ತಿರ ಮಲ್ಲೇಶ್ವರಂ ಬೆಂಗಳೂರು- 560003.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+