ಬಿಎಸ್‌ವೈ ಸವಾಲಿಗೆ ಎಚ್ಡಿಕೆ ಪ್ರತಿ ಸವಾಲು, 80 ನಿಮಿಷದ ಆಡಿಯೋ ರಿಲೀಸ್
Recommended Video

ಬೆಂಗಳೂರು, ಫೆಬ್ರವರಿ 13: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಭಾಷಣೆಯುಳ್ಳ 3 ನಿಮಿಷಗಳ ಆಪರೇಷನ್ ಕಮಲ ಆಡಿಯೋ ಬಿಡುಗಡೆ ಮಾಡಿರುವ ಬೆನ್ನಲ್ಲೇ ಈಗ 80 ನಿಮಿಷಗಳುಳ್ಳ ಸಂಪೂರ್ಣ ಆಡಿಯೋವನ್ನು ಬಹಿರಂಗಪಡಿಸಿದ್ದಾರೆ.
ಗುರುಮಿಟ್ಕಲ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರ ಬಳಿ ಮಾತನಾಡಿದ ಸಂಪೂರ್ಣ ಸಂಭಾಷಣೆ ಇದೀಗ ಎಲ್ಲರ ಕೈ ತಲುಪಿದೆ. ಇದರಿಂದ ಆಪರೇಷನ್ ಕಮಲ ಹೇಗೆ ಮಾಡುತ್ತಾರೆ ಎನ್ನುವ ಸಂಪೂರ್ಣ ಮಾಹಿತಿ ತಿಳಿಯುತ್ತದೆ.
ಆಡಿಯೋದಲ್ಲಿರುವ ಸಂಭಾಷಣೆ ಕುರಿತು ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರಿಗೆ ಸವಾಲೊಡ್ಡಿದ್ದರು. ಇದು ಕೇವಲ 3 ನಿಮಿಷದ ಆಡಿಯೋ ಇದರಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಕಟ್ ಅಂಡ್ ಪೇಸ್ಟ್ ಮಾಡಿದ್ದೀರಾ ತಾಕತ್ತಿದ್ದರೆ ಪೂರ್ಣ ಆಡಿಯೋ ರಿಲೀಸ್ ಮಾಡಿ ಎಂದಿದ್ದರು.

ಸದನದಲ್ಲಿ ಇದಕ್ಕೆ ಉತ್ತರ ನೀಡಿರುವ ಕುಮಾರಸ್ವಾಮಿ ನಿಮಗೆ ಮೂರು ನಿಮಿಷದ ಆಡಿಯೋವನ್ನೇ ತಡೆದುಕೊಳ್ಳಲು ಆಗುತ್ತಿಲ್ಲ ಇನ್ನು 80 ನಿಮಿಷದ ಆಡಿಯೋ ಬಿಡುಗಡೆ ಮಾಡಿದರೆ ಏನು ಗತಿ ಎಂದು ವ್ಯಂಗ್ಯವಾಡಿದ್ದರು.
ಅದಕ್ಕೆ ಪ್ರತ್ಯುತ್ತರವಾಗಿ 40,40 ನಿಮಿಷಗಳುಳ್ಳ ಎರಡು ಆಡಿಯೋವನ್ನು ರಿಲೀಸ್ ಮಾಡಲಾಗಿದೆ. ಅದರಲ್ಲಿ ದೇವದುರ್ಗದ ಐಬಿ ಆಪರೇಷನ್ ಕಮಲದ ಸಂಪೂರ್ಣ ರಹಸ್ಯ ಬಯಲಾದಂತಾಗಿದೆ.
40,40 ನಿಮಿಷಗಳ ಎರಡು ಆಡಿಯೋ ಈ ಆಡಿಯೋದಲ್ಲಿ ಯಡಿಯೂರಪ್ಪ, ಶಿವನಗೌಡ, ಹಾಸನ ಶಾಸಕ ಪ್ರೀತಮ್ ಗೌಡ, ಶರಣಗೌಡ ಅವರೆಲ್ಲರ ಸಂಭಾಷಣೆ ಇರುವ ಆಡಿಯೋ ಇದಾಗಿದೆ.
ಶರಣಗೌಡನ ಜೊತೆ ನಿಮ್ಮ ತಂದೆಗೆ ರಾಜೀನಾಮೆ ನೀಡಲು ಹೇಳು, ನೀನು ಚುನಾವಣೆಗೆ ನಿಲ್ಲು, ನಮ್ಮ ಜೊತೆ ಈಗಾಗಲೇ ಮುಂಬೈನಲ್ಲಿ 10 ಶಾಸಕರಿದ್ದಾರೆ. ನಿನಗೆ ಅನುಮಾನವಿದ್ದರೆ ಒಮ್ಮೆ ಮುಂಬೈಗೆ ಹೋಗಿ ನೋಡಿಕೊಂಡು ಬಾ ಆಮೇಲೆ ಮಾತನಾಡು, ನಿಮಗೆ ಫೈನಾನ್ಸಿಯಲ್ ಸೆಟಲ್‌ಮೆಂಟ್ ಎಲ್ಲಾ ವಿಜಯೇಂದ್ರ ನೋಡಿಕೊಳ್ಳುತ್ತಾರೆ.
80 ನಿಮಿಷ ಆಡಿಯೋದಲ್ಲಿ ಆಪರೇಷನ್ ಕಮಲ ಹೇಗೆ ನಡೆಯುತ್ತದೆ ಎನ್ನುವುದನ್ನು ವಿವರವಾಗಿ ತಿಳಿಯುತ್ತದೆ. ಯಡಿಯೂರಪ್ಪ ಮಾತನಾಡುವುದು ಬಳಿಕ ಫೈನಾನ್ಸಿಯಲ್ ಬಗ್ಗೆ ವಿಜಯೇಂದ್ರ ನೋಡಿಕೊಳ್ಳುವುದು, ಹೇಗೆ ಮಾಡ್ತಿದಾರೆ, ಅದರಲ್ಲಿ ಹಾಸನ ಶಾಸಕ ಪ್ರೀತಮ್ ಗೌಡ ಕೂಡ ದೇವೇಗೌಡರ ಬಗ್ಗೆ ಮಾತನಾಡುವ ಸಂಭಾಷಣೆಯೂ ಕೂಡ ಇದೆ.











Click it and Unblock the Notifications