ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾನುವಾರ ಹಾಗೂ ರಾತ್ರಿ ವೇಳೆಯೂ ಸಂಚರಿಸಲಿದೆ ಕೆಎಸ್ಆರ್‌ಟಿಸಿ

|
Google Oneindia Kannada News

ಬೆಂಗಳೂರು, ಜುಲೈ 31: ಭಾರತದಲ್ಲಿ ಅನ್‌ಲಾಕ್‌ 3 ಪ್ರಾರಂಭವಾಗುತ್ತಿದ್ದು, ಲಾಕ್‌ಡೌನ್‌ ನಿಯಮಗಳಲ್ಲಿ ಮತ್ತಷ್ಟು ವಿನಾಯಿತಿ ಸಿಕ್ಕಿದೆ. ಕೇಂದ್ರ ಸರ್ಕಾರ ಮಾರ್ಗಸೂಚಿ ಬೆನ್ನಲ್ಲೆ ರಾಜ್ಯ ಸರ್ಕಾರವೂ ಮಾರ್ಗಸೂಚಿ ಪ್ರಕಟಿಸಿತ್ತು.

ಅನ್‌ಲಾಕ್‌ 3 ಮಾರ್ಗಸೂಚಿಯಲ್ಲಿ ಭಾನುವಾರದ ಲಾಕ್‌ಡೌನ್ ಮತ್ತು ರಾತ್ರಿ ವೇಳೆ ಜಾರಿಯಲ್ಲಿರುತ್ತಿದ್ದ ಕರ್ಫ್ಯೂ ರದ್ದು ಮಾಡಿದೆ. ಆಗಸ್ಟ್ 1 ರಿಂದ ರಾತ್ರಿ ಕರ್ಫ್ಯೂ ಇರಲ್ಲ. ಬಾನುವಾರದ ಲಾಕ್‌ಡೌನ್ ಸಹ ಇರಲ್ಲ.

ಅನ್ ಲಾಕ್-3.0 ಮಾರ್ಗಸೂಚಿ ಬಿಡುಗಡೆ: ಪ್ರಮುಖ ಅಂಶಗಳು ಇಲ್ಲಿವೆಅನ್ ಲಾಕ್-3.0 ಮಾರ್ಗಸೂಚಿ ಬಿಡುಗಡೆ: ಪ್ರಮುಖ ಅಂಶಗಳು ಇಲ್ಲಿವೆ

ಈ ಹಿನ್ನೆಲೆಯಲ್ಲಿ ಕೆಎಸ್ಆರ್ ಟಿಸಿ ಬಸ್ ಸಂಚಾರದಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ಭಾನುವಾರ ಮತ್ತು ರಾತ್ರಿ ಕರ್ಫ್ಯೂ ಸಮಯದಲ್ಲಿ ಬಸ್ ಸಂಚಾರ ಮಾಡುತ್ತಿರಲಿಲ್ಲ. ಆದ್ರೆ, ಆಗಸ್ಟ್ 1 ರಿಂದ ಭಾನುವಾರ ಹಾಗೂ ರಾತ್ರಿ ಸಮಯದಲ್ಲೂ ಕೆಎಸ್ಆರ್ ಟಿಸಿ ಬಸ್ ಸಂಚರಿಸಲಿದೆ.

From August 1st, Ksrtc Buses Will Travel On Sunday And Night Time Also.

ಈ ಕುರಿತು ಕೆಎಸ್ಆರ್ ಟಿಸಿ ಆಡಳಿತ ಮಂಡಳಿ ಅಧಿಕೃತಗೊಳಿಸಿದ್ದು, 'ರಾಜ್ಯಾದ್ಯಂತ ಭಾನುವಾರಗಳಂದು ಜಾರಿಯಲ್ಲಿದ್ದ ಲಾಕ್ ಡೌನ್ ಹಾಗೂ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ವಿಧಿಸಿದ್ದ ಕರ್ಫ್ಯೂವನ್ನು ದಿನಾಂಕ 01.08.2020 ರಿಂದ‌ ಜಾರಿಗೆ ಬರುವಂತೆ ಘನ ಸರ್ಕಾರವು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ‌ನಿಗಮದ ಸಾರಿಗೆಗಳನ್ನು ವಾರದ ಎಲ್ಲಾ ದಿನಗಳಂದು ಹಾಗೂ ರಾತ್ರಿ ಸಾರಿಗೆಗಳನ್ನು ಯಥಾಸ್ಥಿತಿ ಕಾರ್ಯಾಚರಣೆ ಮಾಡಲಾಗುವುದು' ಎಂದು ಪ್ರಕಟಿಸಿದೆ.

English summary
Unlock 3 Guidelines: From august 1st, KSRTC Buses Will travel on Sunday and Night time also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X