ಪೋಲಿ ವೆಬ್ ಸೈಟ್ ಗೆ ಗೆಳತಿ ಫೋನ್ ನಂಬರ್ ಹಾಕಿದ ವ್ಯಕ್ತಿ ಅಂದರ್
ಬೆಂಗಳೂರು, ಸೆಪ್ಟೆಂಬರ್ 4: ಸ್ನೇಹಿತೆಯ ಫೋನ್ ನಂಬರ್ ಪೋಲಿ ವೆಬ್ ಸೈಟ್ ನಲ್ಲಿ ಹಾಕಿ, ಆಕೆಯನ್ನು ಹಿಂಸೆ ಮಾಡಿದ ಆರೋಪದಲ್ಲಿ 36 ವರ್ಷದ ವ್ಯಕ್ತಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮೊದಲಿಗೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಕೇಳಿದ್ದ ಆತ, ಅದಕ್ಕೆ ಆಕೆ ಒಪ್ಪದಿದ್ದಾಗ ಹೀಗೆ ಮಾಡಿದ್ದಾನೆ.
ಮೊಹ್ಮದ್ ಮುದಾಸ್ಸಿರ್ ಬಂಧಿತ. ಇಂದಿರಾನಗರದ ನಿವಾಸಿ ಹಾಗೂ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿ. ಆತನ ಸ್ನೇಹಿತೆಗೆ 35 ವರ್ಷ ವಯಸ್ಸು. ಆಕೆ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿದ್ದಾರೆ. ಅವರ ವಾಟ್ಸಾಪ್ ಗೆ ಆಗಸ್ಟ್ 30ನೇ ಅಶ್ಲೀಲ ಸಂದೇಶಗಳು ಬರಲು ಆರಂಭಿಸಿವೆ.
ಮುದಾಸ್ಸಿರ್ ಕೋರಿಕೆಯನ್ನು ನಿರಾಕರಿಸಿದ್ದಕ್ಕೆ ತನ್ನದೊಂದು ನಕಲಿ ಪ್ರೊಫೈಲ್ ಸೃಷ್ಟಿಸಿ, ಮುದಾಸ್ಸಿರ್ ಹೀಗೆ ಮಾಡಿರಬಹುದು ಎಂಬ ಗುಮಾನಿ ಆಕೆಗೆ ಬಂದಿದೆ. ಆ ನಂತರ ಪೊಲೀಸರಿಗೆ ದೂರು ನೀಡಿದ ಮೇಲೆ ಆತನನ್ನು ಬಂಧಿಸಲಾಗಿದೆ.

ಲೈಂಗಿಕ ಕಿರುಕುಳದ ಪ್ರಕರಣ ದಾಖಲು
ಮತ್ತೊಂದು ಪ್ರಕರಣದಲ್ಲಿ ಜೀವನ್ ಬಿಮಾ ನಗರದ ಪೊಲೀಸರು ಮೆಡಿಕಲ್ ಶಾಪ್ ಉದ್ಯೋಗಿಯ ವಿರುದ್ಧ ಲೈಂಗಿಕ ಶೋಷಣೆ ಪ್ರಕರಣ ದಾಖಲಿಸಿದ್ದಾರೆ. ಫೇಸ್ ಬುಕ್ ಮೆಸೆಂಜರ್ ಮೂಲಕ ಇಪ್ಪತ್ತಾರು ವರ್ಷದ ಗೃಹಿಣಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದ ಆರೋಪ ಆತನ ಮೇಲಿದೆ.
ಆ ಮಹಿಳೆಯು ಆರೋಪಿ ಮಂಜುನಾಥ್ ಗೌಡನ ವಿರುದ್ಧ ದೂರು ನೀಡಿದ್ದಾರೆ. ಆಕೆ ಮನೆಯ ಬಳಿ ಮೆಡಿಕಲ್ ಶಾಪ್ ಗೆ ಹೋಗುತ್ತಾ ಆತನ ಪರಿಚಯ ಆಗಿತ್ತು. ಫೇಸ್ ಬುಕ್ ನಲ್ಲಿ ಆಕೆಯ ಗೆಳೆತನ ಮಾಡಿದ್ದ ಮಂಜುನಾಥ್ ಗೌಡ ಆ ನಂತರ ಅಶ್ಲೀಲ ಫೋಟೋಗಳನ್ನು ಕಳುಹಿಸಲು ಆರಂಭಿಸಿದ್ದ.












Click it and Unblock the Notifications