BMTC ವತಿಯಿಂದ ಉಚಿತ ಡ್ರೈವಿಂಗ್ ತರಬೇತಿ: ಆಸಕ್ತರು ಏನು ಮಾಡಬೇಕು?

ಬೆಂಗಳೂರು, ಫೆಬ್ರವರಿ 15: ಬೆಂಗಳೂರಿನಲ್ಲಿ ಡ್ರೈವಿಂಗ್‌ ತರಬೇತಿ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಕಾರು ಹಾಗೂ ಬಸ್‌ ಚಾಲನೆಯ ಮೇಲೆ ಆಸಕ್ತಿ ಇದ್ದರೂ ಡ್ರೈವಿಂಗ್‌ ಕ್ಲಾಸ್‌ನ ದುಬಾರಿ ಶುಲ್ಕಕ್ಕೆ ಬೇಸತ್ತು ಹಿಂದೇಟು ಹಾಕುತ್ತಿದ್ದಾರೆ. ಇಂತವರಿಗಾಗಿ ಬಿಎಂಟಿಸಿ ಸುವರ್ಣಾವಕಾಶ ನೀಡುತ್ತಿದ್ದು, ಚಾಲಕ ವೃತ್ತಿಯ ಮೇಲೆ ಆಸಕ್ತಿ ಇರುವ ಯುವಕ ಯುವತಿಯರಿಗಾಗಿ ಬಿಎಂಟಿಸಿ ಉಚಿತ ತರಬೇತಿ ನೀಡಲು ಮುಂದಾಗಿದೆ.

ಬಿಎಂಟಿಸಿಯಿಂದ ಆಸಕ್ತಿ ಇರುವ ಯುವಕ ಯುವತಿಯರಿಗಾಗಿ ಮೂವತ್ತು ದಿನ ಉಚಿತ ಬಸ್ಸು ಹಾಗೂ ಕಾರಿನ ಡ್ರೈವಿಂಗ್ ತರಬೇತಿ ನಡೆಸಲು ಮುಂದಾಗಿದೆ. ಅಲ್ಲದೇ ಮೂವತ್ತು ದಿನ ತರಬೇತಿ ಮುಗಿದ ನಂತರ ಕಲಿಕೆ ಅನುಗುಣವಾಗಿ ಪರೀಕ್ಷೆ ನಡೆಸಿ ಬಿಎಂಟಿಸಿಯಿಂದಲೇ ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಕೂಡ ಮಾಡಿಸಿಕೊಡುವುದುದಾಗಿ ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Free Driving Class For Youth By BMTC In Bengaluru

ಬೆಂಗಳೂರಿನ ವಡ್ಡರಹಳ್ಳಿಯ 22 ಎಕರೆ ಪ್ರದೇಶದಲ್ಲಿ ಉಚಿತ ಬಸ್ಸು ಹಾಗೂ ಕಾರಿನ ತರಬೇತಿ ನಡೆಯಲಿದ್ದು, ಯುವತಿಯರಿಗೆ ಕೂಡ ಚಾಲನಾ ತರಬೇತಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ. ಬಡ ಹಾಗೂ ಮಧ್ಯಮ ವರ್ಗದ ಯುವ ಜನತೆ ಡ್ರೈವಿಂಗ್‌ ತರಬೇತಿ ಪಡೆಯುವ ದೃಷ್ಟಿಯಿಂದ ಸಾರಿಗೆ ಇಲಾಖೆ ಈ ನೂತನ ಹೆಜ್ಜೆ ಇಡುತ್ತಿದೆ.

ಬಿಪಿಎಲ್ ಕಾರ್ಡ್ ಹೊಂದಿರುವ ಯುವಕ, ಯುವತಿಯರು ತರಬೇತಿ ಪಡೆಯಬಹುದು. ಬೇರೆ ಊರಿನಿಂದ ಬೆಂಗಳೂರಿಗೆ ಬಂದು ಈ ತರಗತಿ ಪಡೆಯುವವರಿಗೆ ಬಿಎಂಟಿಸಿ ಸಂಸ್ಥೆ ವತಿಯಿಂದಲೇ ಊಟ-ವಸತಿ ವ್ಯವಸ್ಥೆ ಕೂಡ ಇರಲಿದೆ. ಬಿಎಂಟಿಸಿಯಲ್ಲಿ 25 ವರ್ಷಗಳ ಅನುಭವವಿರುವ ಗೋಲ್ಡ್ ಮತ್ತು ಸಿಲ್ವರ್ ಮೆಡಲ್ ಪಡೆದಿರುವ ಮಹಿಳಾ ಮತ್ತು ಪುರುಷ ಚಾಲಕರು ಯುವಕ ಯುವತಿಯರಿಗೆ ಡ್ರೈವಿಂಗ್ ತರಬೇತಿ ತೆಗೆದುಕೊಳ್ಳುತ್ತಾರೆ. ಮೂವತ್ತು ದಿನ ತರಬೇತಿ ಮುಗಿದ ನಂತರ ಡ್ರೈವಿಂಗ್‌ ಪರೀಕ್ಷೆ ನಂತರ ನೆಲಮಂಗಲ ಆರ್‌ಟಿಓದಲ್ಲಿ ಡಿಎಲ್ ನೀಡಲಾಗುತ್ತದೆ.

ಉಚಿತ ಡ್ರೈವಿಂಗ್‌ ತರಬೇತಿ ಪಡೆಯಲು ಆಸಕ್ತರು ಏನು ಮಾಡಬೇಕು..?

ಬಿಎಂಟಿಸಿಯ ಈ ಉಚಿತ ತರಬೇತಿಗೆ ಸೇರಲು ಯುವಕ ಯುವತಿಯರು ಶಾಂತಿನಗರದ ಬಿಎಂಟಿಸಿಯ ಮುಖ್ಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ನಿಮ್ಮ ವಿಳಾಸ ಹಾಗೂ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಬಿಎಂಟಿಸಿ ಅಧಿಕಾರಿಗಳು ಸಂಪರ್ಕಿಸಿ ಮುಂದಿನ ಮಾಹಿತಿ ನೀಡುತ್ತಾರೆ.

2023-24 ನೇ ಸಾಲಿನಲ್ಲಿ 970 ಯುವಕ ಯುವತಿಯರಿಗೆ ಡ್ರೈವಿಂಗ್ ತರಬೇತಿ ನೀಡಲು ಸಾರಿಗೆ ಇಲಾಖೆ ಅನುಮತಿ ನೀಡಿದ್ದು, ಈಗಾಗಲೇ ಮೊದಲ ಬ್ಯಾಚ್‌ನಲ್ಲಿ ಜನವರಿಯಲ್ಲಿ 104 ಮಂದಿ ಉಚಿತ ತರಬೇತಿ ಪಡೆದು ಡಿಎಲ್ ಪಡೆದುಕೊಂಡಿದ್ದಾರೆ. ಸದ್ಯ ಎರಡನೇ ಬ್ಯಾಚ್‌ನಲ್ಲಿ 34 ಜನರು ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ಬ್ಯಾಚ್‌ಗೆ ಸೇರಬೇಕು ಎಂದುಕೊಂಡವದು ಕೂಡಲೇ ಅರ್ಜಿ ಸಲ್ಲಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+