Get Updates
Get notified of breaking news, exclusive insights, and must-see stories!

ವೆರೈಟಿ ಫುಡ್ ತಿನ್ನೋ ಮನಸಾಗಿದ್ರೆ ಇಲ್ಲಿದೆ ಸಕತ್ ಆಫರ್: ಮಿಸ್ ಮಾಡ್ದೆ ಫ್ರೇಸರ್ ಟೌನ್‌ಗೆ ರೌಂಡ್ಸ್ ಹೋಗಿ

ಬೆಂಗಳೂರು, ಏಪ್ರಿಲ್. 10: ಸಂಜೆಯಾಗುತ್ತಿದ್ದಂತೆ ಏನಾದರೂ ಸ್ಪೆಷಲ್ ಆಗಿ ತಿನ್ನುವ ಮನಸಾಗಿದ್ದರೇ, ವೆರೈಟಿ ವೆರೈಟಿ ಫುಡ್ ಟ್ರೈ ಮಾಡಬೇಕು ಎಂಬ ಆಸೆಯಿದ್ದರೇ ತಕ್ಷಣ ನಮ್ಮ ಐಟಿ ಸಿಟಿ ಬೆಂಗಳೂರಿನ ಫ್ರೇಸರ್‌ ಟೌನ್‌ ಕಡೆ ರೌಂಡ್ಸ್ ಹೋಗಿ. ನಾನ್ ವೆಜ್ ಪ್ರಿಯರಿಗೆ ಸ್ವರ್ಗದ ಬಾಗಿಲು ತೆಗೆದಂತೆ ಇರುತ್ತದೆ. ಹಾಗಾಂತ ವೆಜ್ ಪ್ರಿಯರಿಗೆ ಏನು ಇಲ್ಲ ಅಂದ್ಕೊಬೇಡಿ.....

ಎಸ್... ಇದು ಪವಿತ್ರ ರಂಜಾನ್ ತಿಂಗಳು. ಮುಸ್ಲಿಂ ಬಾಂಧವರ ಈ ಹಬ್ಬವನ್ನು ಸ್ಪೆಷಲ್ ಫುಡ್‌ಗಳ ಜೊತೆಗೆ ನೀವು ಆಚರಿಸಬಹುದು. ಪವಿತ್ರ ರಂಜಾನ್ ತಿಂಗಳಲ್ಲಿ ಫ್ರೇಸರ್ ಟೌನ್‌ನ ಮಸೀದಿ ರಸ್ತೆ ಫುಡ್ ಕೋರ್ಟ್ ಆಹಾರ ಪ್ರಿಯರಿಗಾಗಿ ಸ್ವಾಗ ಕೋರುತ್ತಿದೆ. ಬಗೆ ಬಗೆಯ ತಿಂಡಿಗಳು, ಗಾಳಿಯಲ್ಲಿ ಇದ್ದಿಲಿನ ಹೊಗೆಯ ಸುವಾಸನೆ, ತಿಂಡಿಗಳ ಪರಿಮಳ, ಸ್ಟಾಲ್ ಕೀಪರ್‌ಗಳು ಕೂಗು ಧಾಟಿ ಎಲ್ಲವೂ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

Fraser Town’s Mosque Road becomes a foodies’ paradise now

ಫ್ರೇಸರ್ ಟೌನ್‌ನ ಮಸೀದಿ ರಸ್ತೆಯಲ್ಲಿ ಪ್ರತಿವರ್ಷ ರಂಜಾನ್ ವಿಶೇಷ ಆಹಾರ ಮೇಳ ನಡೆಯುತ್ತದೆ. ಮುಸ್ಲಿಂ ಪಾಕಪದ್ಧತಿಯ ಹಲವು ತಿನಿಸುಗಳು ನಿಮ್ಮ ನಾಲಿಗೆ ರುಚಿಯನ್ನು ಮತ್ತಷ್ಟು ಹೆಚ್ಚಾಗಿಸುತ್ತದೆ. ಎಲ್ಲಾ ಧರ್ಮಗಳು ಮತ್ತು ಹಿನ್ನೆಲೆಯ ಜನರು ಈ ಆಹಾರಗಳನ್ನು ಸಲಿಯಲು ನಗರದ ಪ್ರತಿಯೊಂದು ಭಾಗದಿಂದ ಜನ ಇಲ್ಲಿಗೆ ಬರುತ್ತಾರೆ. ಮಸೀದಿ ರಸ್ತೆಯು ಸಂಜೆಯ ವೇಳೆಗೆ ತುಂಬಿ ತುಳುಕುತ್ತದೆ.

ಫ್ರೇಸರ್ ಟೌನ್‌ನ ಮಸೀದಿ ರಸ್ತೆಯು ಕಳೆದ ಒಂದು ದಶಕದಲ್ಲಿ ಹತ್ತಿರದ ಶಿವಾಜಿನಗರದಿಂದ ಮುಸ್ಲಿಂ ಪಾಕಶಾಲೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಪಾಕಪದ್ಧತಿಯ ಆಹಾರಗಳನ್ನು ಜನ ಹುಡುಕುತ್ತಿದ್ದರು. ರಂಜಾನ್ ತಿಂಗಳಲ್ಲಿ ಸಣ್ಣ ಬಿಡಾರಗಳಲ್ಲಿ ಮಾರಾಟ ಆರಂಭವಾಯಿತು, ಬಳಿಕ ಅದರಲ್ಲಿ ವಿಶೇಷ ರಂಜಾನ್ ಖಾದ್ಯಗಳು ಉದಾಹರಣೆಗೆ, ಬೈದಾ ರೊಟ್ಟಿ (ಮಾಂಸ ಮತ್ತು ಮೊಟ್ಟೆಗಳಿಂದ ತುಂಬಿದ ಚಪ್ಪಟೆ ರೊಟ್ಟಿ), ಜೊತೆಗೆ ಈರುಳ್ಳಿ ಮತ್ತು ಕೀಮಾ ಸಮೋಸಾಗಳು ಬಹಳ ಮಾರಾಟವಾಗುತ್ತಿದ್ದವು.

ಚಿಕ್ಕದಾಗಿ ಆರಂಭವಾದ ಈ ಫುಡ್ ಸ್ಟ್ರೀಟ್ ಜನಪ್ರಿಯವಾಗತೊಡಗಿತ್ತು. ಇದು ಇತರ ಮಾರಾಟಗಾರರನ್ನು ಪ್ರೇರೆಪಿಸಿತು. ಹೀಗಾಗಿ ಮಸೀದಿ ರಸ್ತೆಯ ಫುಟ್‌ಪಾತ್‌ಗಳಲ್ಲಿ ರಂಜಾನ್ ಹಬ್ಬದ ಸಮಯದಲ್ಲಿ ಅಂಗಡಿಗಳನ್ನು ತೆರೆದು ಮಾರಾಟ ಮಾಡಲು ಪ್ರಾರಂಭಿಸಿದರು. ಪ್ರತಿ ದಿನ ಮಾರಾಟಗಾರರು ಮಧ್ಯಾಹ್ನ ಅಂಗಡಿಗಳನ್ನು ಆರಂಭಿಸುತ್ತಾರೆ. ಸಂಜೆಯ ಪ್ರಾರ್ಥನೆ ಮುಗಿದ ನಂತರ ಈ ಬೀದಿಯ ಜನರಿಂದ ತುಂಬಲು ಆರಂಭವಾಗುತ್ತದೆ.

Fraser Town’s Mosque Road becomes a foodies’ paradise now

ಆರಂಭದಲ್ಲಿ ಕೇವಲ ಉಪವಾಸವನ್ನು ಮುರಿಯುವ ಸ್ಥಳೀಯ ಮುಸ್ಲಿಮರು ಗ್ರಾಹಕರಾಗಿದ್ದರು. ಬಳಿಕ ಇದು ರಾಜ್ಯಾದ್ಯಂತ ಈ ಮಾತು ಹರಡಿ, ಬೆಂಗಳೂರಿನ ಆಹಾರಪ್ರೇಮಿಗಳ ಸ್ಥಳವಾಗಿ ಮಾರ್ಪಟ್ಟಿದೆ. ಈ ಸ್ಥಳ ದೇಶಾದ್ಯಂತ ವಿವಿಧ ಮುಸ್ಲಿಂ ಸಮುದಾಯಗಳ ಪಾಕಪದ್ಧತಿಗಳನ್ನು ಪ್ರತಿನಿಧಿಸಲಾಗುತ್ತದೆ. ಉತ್ತರ ಭಾರತದ ಆಹಾರವನ್ನು ಪಾಯಾ ಸೂಪ್, ನಿಹಾರಿ ಮತ್ತು ಬಹುಸಂಖ್ಯೆಯ ಕಬಾಬ್‌ಗಳಂತಹ ಭಕ್ಷ್ಯಗಳಿಂದ ಪ್ರತಿನಿಧಿಸಿದರೆ, ಹೈದರಾಬಾದಿನ ಪ್ರಭಾವವು ಶ್ರೀಮಂತ ಹಲೀಮ್ ಮತ್ತು ಸಾಂಪ್ರದಾಯಿಕ ಪತ್ತರ್ ಕಾ ಘೋಷ್ (ಬಿಸಿಮಾಡಿದ ಗ್ರಾನೈಟ್ ಚಪ್ಪಡಿಯ ಮೇಲೆ ಬೇಯಿಸಿದ ಮಾಂಸ) ರೂಪದಲ್ಲಿ ಕಂಡುಬರುತ್ತದೆ.

ಕೇರಳದ ಪ್ರಭಾವದಿಮದ ಮೀನಿನ ಭಕ್ಷ್ಯಗಳು, ಪೊರೊಟಾ ಮತ್ತು ಬಿರಿಯಾನಿಗಳು ಇರುತ್ತವೆ. ಇನ್ನು, ಒಂಟೆ ಕಬಾಬ್ ಕೂಡ ಇಲ್ಲಿ ಹೆಚ್ಚು ಪ್ರಸಿದ್ಧಿ. ಚಿಕನ್ ಮಟನ್, ಬಿಫ್ ಶವರ್ಮಾಗಳು, ಸಹಜವಾಗಿ, ಮಾಂಸಾಹಾರಿ ತಿಂಡಿಗಳು ಹೆಚ್ಚಾಗಿರುತ್ತವೆ. ಹಾಗಂತ ಸಸ್ಯಹಾರಿಗಳಿಗೆ ಏನು ಇಲ್ಲ ಎನ್ನುವಂತಿಲ್ಲ. ಅವರಿಗಾಗಿ ಸಿಹಿತಿಂಡಿಗಳಾದ ಕಾಶ್ಮೀರಿ ಜಾಮುನು, ಕೀರ್, ಸ್ವಿಟ್ ಲಸ್ಸಿ, ಖೋವಾ ನಾನ್ ಮತ್ತು ಫಿರ್ನಿ, ರೋಲಿಂಗ್ ಐಸ್‌ಕ್ರೀಮ್ ಹಾಗೆಯೇ ಬಗೆಬಗೆಯ ಶರಬತ್‌ಗಳು ಮತ್ತು ಫಲೂದಾಗಳು ಇವೆ.

ಆಹಾರಗಳ ಜೊತೆಗೆ ಈ ರಸ್ತೆಯಲ್ಲಿ ಫ್ರೇಸರ್ ಟೌನ್‌ನ ಹಿಂದಿನ ಅವಶೇಷಗಳ ಬಗ್ಗೆಯೂ ಗಮನ ಹರಿಸಬೇಕು. ಹಾಜೀ ಸರ್ ಇಸ್ಮಾಯಿಲ್ ಸೇಟ್ ಮಸೀದಿಯು ಹೆಚ್ಚು ಪ್ರಸಿದ್ಧಿ. ಇನ್ನು, ಆಹಾರ ಮೇಳದ ಹಿನ್ನೆಲೆ ಜನಜಂಗುಳೀ ಹೆಚ್ಚಾಗಿದೆ. ಹಬ್ಬ ಮುಗಿಯುವವರೆಗೂ ಪ್ರತಿ ದಿನ ವಿವಿಧ ಆಹಾರವನ್ನು ಟ್ರೈ ಮಾಡಬಹುದು. ಹೋಗುವ ತಿಂಡಿಪ್ರಿಯರು ತಮ್ಮ ವಾಹನಗಳನ್ನು ಸರಿಯಾದ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಬೇಕು. ಜನರು ಹೆಚ್ಚಿರುವ ಕಾರಣ ಟ್ರಾಫೀಕ್ ಜಾಮ್ ಇದ್ದೆ ಇರುತ್ತದೆ. ಆದರೆ, ಒಳ್ಳೆ ಫುಡ್ ಟೆಸ್ಟ್ ಮಾಡೋಕೆ ಸ್ವಲ್ಪ ಕಾಯುವುದರಲ್ಲಿ ನಷ್ಟವಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+