• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ದಕ್ಷಿಣದಲ್ಲಿ ಗೆಲುವಿನ ಅಂತರ ಹೆಚ್ಚಿಸುವುದೊಂದೇ ಗುರಿ ಎಂದ ಅಶೋಕ್

|

ಬೆಂಗಳೂರು, ಏ.10: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸುರಕ್ಷಿತವಾಗಿದೆ ಉಳಿದಿರುವುದು ಬಹು ಅಂತರದಿಂದ ಗೆಲ್ಲಿಸುವುದು ಮಾತ್ರ ಎಂದು ಬಿಜೆಪಿ ಮುಖಂಡ ಆರ್ ಅಶೋಕ್ ಹೇಳಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರೊಂದಿಗೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದರು.ಪಕ್ಷ ಯುವಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೇಜಸ್ವಿ ಸೂರ್ಯರನ್ನು ಅಭ್ಯರ್ಥಿಯನ್ನಾಗಿಸಿದ್ದು, ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಬೆಂಗಳೂರು ದಕ್ಷಿಣ ಲೋಕಾಸಭಾ ಕ್ಷೇತ್ರವು ಬಿಜೆಪಿಯ ಸುರಕ್ಷಿತವಾಗಿದ್ದು, ಈಗ ಉಳಿದಿರುವುದು ಬಹು ಅಂತರದಿಂದ ಗೆಲ್ಲಿಸಬೇಕಿರುವುದು ಎಂದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಆಸ್ತಿ ವಿವರ

ಚುನಾವಣಾ ಪ್ರಚಾರದ ಭಾಗವಾಗಿ ಜಯನಗರ ವಿಧಾನಸಭಾ ಕ್ಷೇತ್ರದ ಶಾಕಾಂಬರಿ, ಜೆ.ಪಿ.ನಗರ, ಸಾರಕ್ಕಿ ವಾರ್ಡ್ ಗಳಲ್ಲಿ ಪಾದಯಾತ್ರೆಯ ಮೂಲಕ ಮನೆ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಿದರು.

ಆರ್. ಅಶೋಕರವರಿಗೆ ಮಾಜಿ ಮೇಯರ್ ನಟರಾಜ್, ರಾಮಮೂರ್ತಿ, ಬಿಬಿಎಂಪಿ ಸದಸ್ಯರುಗಳಾದ ಲಕ್ಷ್ಮೀ ನಟರಾಜ್, ದೀಪಿಕಾ ಮಂಜುನಾಥ ರೆಡ್ಡಿ, ಮಾಲತಿ, ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಸಾಥ್ ನೀಡಿದರು.

ಬಿಕೆ ಹರಿಪ್ರಸಾದ್ 'ಹಾಲು' ಕುಡಿದಷ್ಟು ತೇಜಸ್ವಿ ಸೂರ್ಯ 'ನೀರು' ಕುಡಿದಿಲ್ಲ

ಜೆ.ಪಿ.ನಗರದ ಇಂದಿರಾ ಗಾಂಧಿ ವೃತ್ತದಿಂದ ಬೆಳಗ್ಗೆ 9:30 ಆರಂಭವಾದ ಚುನಾವಣಾ ಪ್ರಚಾರ ರ್ಯಾಲಿಯು ಶಾಕಾಂಬರಿ ನಗರ, ಸಾರಕ್ಕಿ ಮಾರ್ಗವಾಗಿ ಜೆಪಿನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಇನ್ನು, ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ರಾಮ್ ಮಾಧವ್ ರವರ ಜೊತೆ ನಡೆಯುವ ಸಂವಾದದಲ್ಲಿ ಭಾಗಿಯಾಗುವ ಪೂರ್ವ ನಿಯೋಜಿತ ಕಾರ್ಯಕ್ರಮದ ಕಾರಣದಿಂದಾಗಿ ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಈ ಪ್ರಚಾರ ರ್ಯಾಲಿಗೆ ಚಾಲನೆಯನ್ನು ನೀಡಿದ್ದರು.

English summary
Former minister R Ashok joined Roadshow with Tejasvi surya and opined that BJP is looking huge margin in Bengaluru south.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X