ಮತದಾನದ ಜಾಗೃತಿ ಮೂಡಿಸಿದ ದ್ರಾವಿಡ್ ಗೆ ಮತದಾನದ ಹಕ್ಕಿಲ್ಲ
ಬೆಂಗಳೂರು, ಏಪ್ರಿಲ್ 14: ಟೀಂ ಇಂಡಿಯಾದ ಮಾಜಿ ನಾಯಕ, ಕರ್ನಾಟಕ ಚುನಾವಣೆ ಆಯೋಗದ ಐಕಾನ್ ಮತ್ತು ರಾಯಭಾರಿಯಾಗಿದ್ದ ರಾಹುಲ್ದ್ರಾವಿಡ್ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಾಗದಂಥ ಪರಿಸ್ಥಿತಿ ಎದುರಾಗಿದೆ. ಇಂದಿರಾನಗರ ನಿವಾಸಿಗಳಾಗಿದ್ದ ದ್ರಾವಿಡ್ ಅವರ ಕುಟುಂಬಕ್ಕೂ ಕೂಡ ಮತದಾನದ ಹಕ್ಕು ಕೈತಪ್ಪಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕಿರುವ ದ್ರಾವಿಡ್ ಕುಟುಂಬದವರ ಹೆಸರು ಮತದಾನದ ಪಟ್ಟಿಯಿಂದ ಡಿಲೀಟ್ ಆಗಿದ್ದು, ಮತ್ತೆ ಸೇರಿಸಲು ಆಗದಂಥ ಪರಿಸ್ಥಿತಿ ಎದುರಾಗಿದೆ.

ಏನು ಕಾರಣ: ಇಂದಿರಾನಗರದಲ್ಲಿದ್ದ ರಾಹುಲ್ ಕುಟುಂಬ ಈಗ ಅಶ್ವತ್ಥ್‌ನಗರದ ನಿವಾಸಿಗಳಾಗಿದ್ದಾರೆ. ವಿಳಾಸ ಬದಲಾವಣೆಗಾಗಿ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ಸರಿಯಾದ ವೇಳೆಗೆ ಫಾರ್ಮ್ 6 ಅನ್ನು ಸಲ್ಲಿಸಬೇಕಿತ್ತು. ಆದರೆ, ನಿಗದಿತ ವೇಳೆಯಲ್ಲಿ ಅರ್ಜಿ ಸಲ್ಲಿಸದ ಕಾರಣ ಮತದಾನ ಪಟ್ಟಿಯಿಂದ ರಾಹುಲ್ ದ್ರಾವಿಡ್ ಹೆಸರು ಮತ್ತೆ ಸೇರ್ಪಡೆಯಾಗಿಲ್ಲ.
ಬೆಂಗಳೂರಿನ ಸೆಂಟ್ರಲ್ ಲೋಕಸಭಾ ಕ್ಷೇತ್ರದ ಶಾಂತಿನಗರ ವಿಧಾನಸಭಾ ವಿಭಾಗದ ಇಂದಿರಾನಗರದ 12ನೇ ಮುಖ್ಯರಸ್ತೆ ನಿವಾಸಿಯಾಗಿದ್ದರು. ಅಶ್ವಥ್ ನಗರಕ್ಕೆ ಮನೆ ಶಿಫ್ಟ್ ಆದ ಬಳಿಕ ದ್ರಾವಿಡ್ ಸಹೋದರ ವಿಜಯ್ ಫಾರ್ಮ್ 7ನ್ನು ಇಂದಿರಾನಗರದ ಮತದಾನದ ಅಧಿಕಾರಿಗಳಿಗೆ ನೀಡಿದ್ದರು.
ನಂತರ ಇಂದಿರಾನಗರದ ಮತದಾರರ ಪಟ್ಟಿಯಿಂದ ದ್ರಾವಿಡ್ ಕುಟುಂಬದ ಹೆಸರನ್ನು ಅಳಿಸಲಾಗಿದೆ. ಮಾ. 16ರೊಳಗೆ ಮತದಾರರ ಹೆಸರು ಸೇರಿಸಲು ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು ಆದರೆ, ನಿಗದಿತ ವೇಳೆಯಲ್ಲಿ ವಿಳಾಸ ಬದಲಾವಣೆ ಅರ್ಜಿ ಸಲ್ಲಿಸಿಲ್ಲ ಎಂದು ದೊಮ್ಮಲೂರು ವಿಭಾಗದ ಅಧಿಕಾರಿ ಹೇಳಿದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications