ನರೇಂದ್ರ ಮೋದಿ ಸಂಪುಟವನ್ನು ನೀವೇ ರಚಿಸಿ

ಬೆಂಗಳೂರು, ಮೇ 22 : "ಪ್ರತಿ ಸುದ್ದಿ ವಾಹಿನಿಗಳು ಕೇಂದ್ರ ಸರಕಾರದ ಸಂಪುಟದಲ್ಲಿ ಯಾರ್ಯಾರಿರಬೇಕೆಂದು ಈಗಾಗಲೆ ನಿರ್ಧರಿಸಿವೆ. ಆದರೆ, ಪ್ರಧಾನಿಯಾಗಿ ನಾನೇ ಇನ್ನೂ ನನ್ನ ಕ್ಯಾಬಿನೆಟ್ ರಚಿಸಬೇಕಿದೆ" ಎಂದು ಗುಜರಾತ್ ತೊರೆದು ಭಾರತದ ಚುಕ್ಕಾಣಿ ಹಿಡಿಯಲು ಹೊರಟಿರುವ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.

ದೇಶದ 15ನೇ ಪ್ರಧಾನಿಯಾಗಿ ಮೇ 26ರಂದು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿರುವ ನರೇಂದ್ರ ಮೋದಿ ಅವರ ಈ ಮಾತಲ್ಲಿ ವ್ಯಂಗ್ಯ ಅಡಗಿದೆ. ಆದರೆ, ಮಾಧ್ಯಮಗಳ ಕೆಲಸವೇ ಅದು. ಬೇರೆ ಸರಕಾರವಾಗಿದ್ದರೆ ಇಷ್ಟೊಂದು ಕ್ರಿಯಾಶೀಲತೆಯಿಂದ ಮಾದ್ಯಮಗಳು ಮೋದಿ ಸಂಪುಟವನ್ನು ಊಹಿಸುತ್ತಿದ್ದವೋ ಇಲ್ಲವೋ. ಆದರೆ, ಮಾಧ್ಯಮಗಳು ಮೋದಿ ಕೆಲಸವನ್ನು ಸಾಕಷ್ಟು ಸರಳವಾಗಿಸಿವೆ.

Form your own dream cabinet of Narendra Modi

ಎಲ್ಲರ ಊಹೆಯನ್ನು ಮೀರಿ ಅತ್ಯಂತ ಸ್ಪಷ್ಟ ಬಹುಮತ ಪಡೆದು ಇಡೀ ಜಗತ್ತಿನ ಗಮನ ಸೆಳೆದಿರುವ ನರೇಂದ್ರ ಮೋದಿ ಅವರು ಯಾವ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲಿದ್ದಾರೆ, ಯಾವ ಘಟಾನುಘಟಿಗಳಿಗೆ ಅತ್ಯಂತ ಮಹತ್ವದ ಸ್ಥಾನಗಳಾದ ಹಣಕಾಸು, ಗೃಹ, ರಕ್ಷಣೆ ಮತ್ತು ವಿದೇಶಾಂಗ ಸಚಿವ ಸ್ಥಾನ ಒಲಿಯಲಿವೆ ಎಂಬುದರ ಬಗ್ಗೆ ಎಂದೂ ನಡೆಯದಂತಹ ಚರ್ಚೆಗಳು ನಡೆಯುತ್ತಿವೆ. [ಮೋದಿಗೆ ಯಡಿಯೂರಪ್ಪ ಪತ್ರ]

ಎಲ್ಲಕ್ಕಿಂತ ಹೆಚ್ಚಾಗಿ, ಕರ್ನಾಟಕದಿಂದ ಆಯ್ಕೆಯಾಗಿರುವ 17 ಸಂಸದರಲ್ಲಿ ಯಾರಿಗೆ ಯಾವ ಖಾತೆ ಬಳುವಳಿಯಾಗಿ ಸಿಗಲಿದೆ ಎಂಬುದರತ್ತ ಕರ್ನಾಟಕದ ಜನತೆಯ ಚಿತ್ತ ಹರಿದಿದೆ. ಆದರೆ, ಯಾವುದೇ ಖಾತೆಗಾಗಿ ಯಾರೇ ಆಗಲಿ ಲಾಬಿ ಮಾಡಬಾರದು ಎಂದು ನರೇಂದ್ರ ಮೋದಿ ಅವರು ಕಟ್ಟುನಿಟ್ಟಾಗಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಎಲ್ಲರೂ ಗಪ್ ಚಿಪ್, ಎಲ್ಲವೂ ಗುಪ್ತಗುಪ್ತವಾಗಿದೆ. [ಸಂಪುಟದಲ್ಲಿ ಯಾರ್ಯಾರಿಗೆ ಸಿಗಲಿದೆ ಸ್ಥಾನ?]

ಮಾಧ್ಯಮಗಳೇನೇ ಊಹಿಸಲಿ, ಮೋದಿಯವರು ಇಂಥವರಿಗೆ ಇಂಥದೇ ಖಾತೆ ನೀಡಬೇಕು ಎಂದು ಲೆಕ್ಕಾಚಾರ ಹಾಕಿಕೊಂಡಿರಲಿ, ಓದುಗರೆ ನಿಮ್ಮ ಊಹೆಯ ಪ್ರಕಾರ, ಮೋದಿ ಸಂಪುಟದಲ್ಲಿ ಯಾರಿಗೆ ಪ್ರಾಶಸ್ತ್ಯ ನೀಡಬೇಕು, ಯಾರನ್ನು ಹಾಕಿಕೊಂಡರೆ ದೇಶ ಸುಭಿಕ್ಷವಾಗಬಹುದು, ಎಂಥವರನ್ನು ಕೈಬಿಟ್ಟರೆ ಭಾರತ ಭ್ರಷ್ಟಾಚಾರದಿಂದ ಮುಕ್ತವಾಗಬಹುದು?

ನರೇಂದ್ರ ಮೋದಿ ಸಂಪುಟವನ್ನು ನೀವೇ ರಚಿಸಿ. ಕನಸಿನ ಸಂಪುಟ ಹೇಗಿರಬೇಕು ನೀವೇ ಊಹಿಸಿ. ಇದು ನರೇಂದ್ರ ಮೋದಿ ಸಂಪುಟವಾದರೂ ಸಂಸದರನ್ನು ಆಯ್ಕೆ ಮಾಡಿದವರು ನೀವೇ ತಾನೆ? ಯಾರಿಗೆ ಸಂಪುಟದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಸಿಗಲಿದೆ, ಯಾರು ಮೂಲೆಗುಂಪಾಗಲಿದ್ದಾರೆ ನೀವೇ ಊಹಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+