ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು!, ವಿಡಿಯೋ ನೋಡಿ
ಕಾರು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುತ್ತಿದ್ದಾಗ ಅದರಿಂದ ಹೊಗೆ ಬರಲು ಆರಂಭಿಸಿ ಬಳಿಕ ಬೆಂಕಿ ಹೊತ್ತಿಕೊಂಡಿದೆ.
ಬೆಂಗಳೂರು, ಫೆಬ್ರವರಿ. 24: ಸಿಲಿಕಾನ್ ಸಿಟಿಯ ಕ್ವೀನ್ಸ್ ರಸ್ತೆಯಲ್ಲಿ ರಾತ್ರಿ ಹತ್ತೂವರೆ ಸುಮಾರಿಗೆ ಕಾರೊಂದು ಧಗಧಗನೆ ಹೊತ್ತಿ ಉರಿದಿದೆ. ರಾತ್ರಿ ವೇಳೆಯಲ್ಲಿ ಫೋರ್ಡ್ ಫಿಯೆಸ್ಟಾ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.

ಕಾರಿನ ಮಾಲೀಕ ಮುಖ್ತಾರ್ ಅಹ್ಮದ್ ಬರ್ತ್ ಡೇ ಪಾರ್ಟಿಗಾಗಿ ಇಬ್ಬರು ಮಕ್ಕಳು ಸೇರಿದಂತೆ 4 ಜನರನ್ನು ಕಾರಿನಲ್ಲಿ ಕರೆತಂದಿದ್ದರು.
Ford Fiesta car catches fire on Queen's Rd at 10.05 pm.Owner Mukthar Ahmed had just dropped 4 ppl, incl 2 children, in the car for a bday party & was parking it on rd when smoke emanated from it. He tried to pour water on it but it did not help @XpressBengaluru @NewIndianXpress pic.twitter.com/wXPfpctLMT
— S. Lalitha (@Lolita_TNIE) February 24, 2023
ಕಾರು ಮಾಲೀಕ ಮುಖ್ತಾರ್ ಅಹ್ಮದ್ ಅವರು ಇಬ್ಬರು ಮಕ್ಕಳನ್ನು ಒಳಗೊಂಡಂತೆ 4 ಜನರನ್ನು ರಾತ್ರಿ ಪಾರ್ಟಿಗಾಗಿ ಕಾರಿನಲ್ಲಿ ಕರೆತಂದಿದ್ದರು. ಅವರನ್ನು ಕಾರ್ಯಕ್ರಮದ ಸ್ಥಳದ ಬಳಿ ನಿಲ್ಲಿಸಿ, ಕಾರನ್ನು ಪಾರ್ಕಿಂಗ್ ಮಾಡುತ್ತಿದ್ದಾಗ ಅದರಲ್ಲಿ ಹೊಗೆ ಕಾಣಿಸಿಕೊಂಡಿದೆ. ಹೊಗೆ ನೀಡಿ ಅದರ ಮೇಲೆ ನೀರು ಸುರಿಯಲು ಮುಖ್ತಾರ್ ಅಹ್ಮದ್ ಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಅವರು ಕಾರನ್ನು ಬಿಟ್ಟು ಹೊರಗೆ ಬಂದಿದ್ದಾರೆ. ತಕ್ಷಣವೇ ಬೆಂಕಿ ಆವರಿಸಿಕೊಂಡಿದೆ. ತಮ್ಮ ಕುಟುಂಬ ಬನಶಂಕರಿಯಿಂದ ಕ್ವೀನ್ಸ್ ರಸ್ತೆಯಲ್ಲಿ ಬರ್ತ್ ಡೇ ಪಾರ್ಟಿಗಾಗಿ ಬಂದಿದ್ದಾಗಿ ಉದ್ಯಮಿ ಮುಖ್ತಾರ್ ಅಹ್ಮದ್ ತಿಳಿಸಿದ್ದಾರೆ. ಘಟನೆಯಿಂದ ಜನ ಭಯಭೀತರಾಗಿದ್ದು, ಹಲವು ಮಂದಿ ತಮ್ಮ ವಾಹನಗಳೀಂದ ಇಳಿದು ದೂರದಲ್ಲಿ ನಿಂತು ಸುಟ್ಟು ಹೋಗುತ್ತಿರುವ ಕಾರನ್ನು ನೋಡಿದ್ದಾರೆ. ಇದರಿಂದ ಎರಡೂ ಬದಿಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಬಂದು ಬೆಂಕಿಯನ್ನು ನಂದಿಸಿದೆ. ಆದರೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.












Click it and Unblock the Notifications