• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್ ನಿಯಮ ಉಲ್ಲಂಘಿಸಿದರೆ 5 ಸಾವಿರದಿಂದ 1 ಲಕ್ಷದ ತನಕ ದಂಡ!

|

ಬೆಂಗಳೂರು, ಡಿಸೆಂಬರ್ 6 : ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡದಿದ್ದರೆ ಭಾರಿ ಮೊತ್ತದ ದಂಡ ವಿಧಿಸುವ ನಿಯಮಗಳನ್ನು ಬಿಬಿಎಂಪಿ ಜಾರಿಗೆ ತಂದಿದೆ. 5 ಸಾವಿರದಿಂದ 1 ಲಕ್ಷ ರೂ. ತನಕ ದಂಡ ವಿಧಿಸಲು ಹೊಸ ನಿಯಮದಲ್ಲಿ ಅವಕಾಶವಿದೆ.

ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ 2020ರ ಸೆಕ್ಷನ್ 4, 15 ಹಾಗೂ 17ರ ಅನ್ವಯ ದಂಡವನ್ನು ಹಾಕಲಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವ ಸಂಬಂಧ ಈ ನಿಯಮ ಜಾರಿಗೆ ತರಲಾಗಿದೆ.

ಗೋವಾದಲ್ಲಿ ಮಾಸ್ಕ್ ಧರಿಸದಿದ್ದರೆ ಪ್ರವಾಸಿಗರ ಫೋಟೋ ಕ್ಲಿಕ್!

ಕಲ್ಯಾಣ ಮಂಟಪ, ಹೋಟೆಲ್, ಚಿತ್ರಮಂದಿರ, ಮಾಲ್, ಅಂಗಡಿ, ಕಾರ್ಯಮ್ರಕಮಗಳ ಸಂಯೋಜಕರಿಗೆ ದಂಡವನ್ನು ಹಾಕಲಾಗುತ್ತದೆ. ಈ ನಿಯಮಗಳ ಅನಿಷ್ಠಾನದ ಹೊಣೆಯನ್ನು ವಾರ್ಡ್‌ಗಳಲ್ಲಿರುವ ಮಾರ್ಷಲ್‌ಗಳ ಮೂಲಕ ನಿರ್ವಹಣೆ ಮಾಡಲಾಗುತ್ತದೆ.

ಎಲ್ಲಿ,ಯಾವಾಗ, ಹೇಗೆ ಮಾಸ್ಕ್ ಧರಿಸಬೇಕು?: WHO ಹೊಸ ಮಾರ್ಗಸೂಚಿ

ಆರೋಗ್ಯ ನಿರೀಕ್ಷಕರು, ಮಾರ್ಷಲ್‌ಗಳಿಗೆ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ. ಆದ್ದರಿಂದ, ಇನ್ನು ಮುಂದೆ ಕಾರ್ಯಕ್ರಮ ಆಯೋಜಕರು, ಕಲ್ಯಾಣ ಮಂಟಪ, ಹೋಟೆಲ್‌ಗಳ ಮಾಲೀಕರು ಜನರು ಕೋವಿಡ್ ನಿಯಮ ಪಾಲನೆ ಮಾಡುವಂತೆ ನೋಡಿಕೊಳ್ಳಬೇಕು.

ಕೋವಿಡ್; ಟೀ ಅಂಗಡಿ ಮಾಲೀಕನಿಂದ ಉಚಿತ ಮಾಸ್ಕ್ ವಿತರಣೆ

5 ಸಾವಿರ ರೂ.ಗಳ ತನಕ ದಂಡ

5 ಸಾವಿರ ರೂ.ಗಳ ತನಕ ದಂಡ

ಸ್ವಸಹಾಯ ಪದ್ಧತಿ ಹೋಟೆಲ್, ದರ್ಶಿನಿ, ಆಹಾರ ಮಳಿಗೆ, ಅಂಗಡಿ, ಬೀದಿ ಬದಿಯ ಆಹಾರ ಮಳಿಗೆಗಳು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡದಿದ್ದಲ್ಲಿ 5 ಸಾವಿರ ರೂ. ತನಕ ದಂಡವನ್ನು ವಿಧಿಸಲು ಅವಕಾಶವಿದೆ.

ಹೆಚ್ಚು ದಂಡ ಮೊತ್ತ

ಹೆಚ್ಚು ದಂಡ ಮೊತ್ತ

ರೆಸ್ಟೋರೆಂಟ್ (ಎಸಿ ರಹಿತ), ಪಾರ್ಟಿ ಹಾಲ್, ಅಂಗಡಿ, ಖಾಸಗಿ ಬಸ್ ನಿಲ್ದಾಣ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ 25 ಸಾವಿರ ರೂ. ತನಕ ದಂಡ ಹಾಕಲಾಗುತ್ತದೆ.

ರೆಸ್ಟೋರೆಂಟ್ (ಎಸಿ), ಪಾರ್ಟಿ ಹಾಲ್, ಮಳಿಗೆ, ಡಿಪಾರ್ಟ್‌ಮೆಂಟ್ ಸ್ಟೋರ್, ಬಹುಮಾದರಿ ಬ್ರಾಂಡ್ಸ್ ಮಳಿಗೆ, ಚಿತ್ರಮಂದಿರ, ಮಲ್ಟಿಫೆಕ್ಸ್, ಶಾಪಿಂಗ್ ಮಾಲ್‌ಗಳಿಗೆ 50 ಸಾವಿರ ರೂ. ತನಕ ದಂಡ ವಿಧಿಸಲು ಅವಕಾಶವಿದೆ.

50 ಸಾವಿರ ರೂ. ದಂಡ ಯಾರಿಗೆ?

50 ಸಾವಿರ ರೂ. ದಂಡ ಯಾರಿಗೆ?

ಸಾರ್ವಜನಿಕ ಸಭೆ, ಸಮಾರಂಭ, ಕಾರ್ಯಕ್ರಮ, ಜಾಥಾಗಳ ಆಯೋಜಕರಿಗೆ 50 ಸಾವಿರ ರೂ. ತನಕ ದಂಡ ವಿಧಿಸಲು ಅವಕಾಶವಿದೆ.

ತ್ರಿ ಸ್ಟಾರ್ ಮತ್ತು ಅದಕ್ಕಿಂತ ಹೆಚ್ಚಿನ ಸ್ಟಾರ್‌ ಹೋಟೆಲ್, 500ಕ್ಕಿಂತ ಹೆಚ್ಚಿನ ಆಸನ ವ್ಯವಸ್ಥೆ ಹೊಂದಿರುವ ಕಲ್ಯಾಣ ಮಂಟಪ, ಸಮುದಾಯ ಭವನಗಳಿಗೆ 1,00,000 ತನಕ ದಂಡ ವಿಧಿಸಲು ಅವಕಾಶವಿದೆ.

  Dhoni ನಂತರ ಭಾರತ ಸಿಕ್ಕ ಸೂಪರ್ Finisher Hardik Pandya | Oneindia Kannada
  ಬೆಂಗಳೂರಲ್ಲಿ ಕೋವಿಡ್ ಪರಿಸ್ಥಿತಿ

  ಬೆಂಗಳೂರಲ್ಲಿ ಕೋವಿಡ್ ಪರಿಸ್ಥಿತಿ

  ಶನಿವಾರ ಬೆಂಗಳೂರು ನಗರದಲ್ಲಿ 709 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 3,73,291ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,185.

  English summary
  The Bruhat Bengaluru Mahanagara Palike (BBMP) fine up to 1 lakh for choultry, hotel, mall, cinema hall if they fail to follow COVID 19 protocols.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X