ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ಹಾವಳಿ: ಬಿಬಿಎಂಪಿ ವಿರುದ್ಧ ಹೈಕೋರ್ಟ್ ಅಸಮಾಧಾನ

ನಿಯಮ ಉಲ್ಲಂಘಿಸಿ ರಾಜಕೀಯ ಪಕ್ಷಗಳ‌ ಪೋಸ್ಟರ್ ಹಾಕುತ್ತಿದ್ದರೂ ಕ್ರಮ‌ ಕೈಗೊಳ್ಳದೇ ಬಿಬಿಎಂಪಿ ಮೂಕಪ್ರೇಕ್ಷಕವಾಗಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು, ಫೆಬ್ರವರಿ 9: ಬೆಂಗಳೂರು ನಗರದಲ್ಲಿ ಮೀತಿ ಮೀರಿರುವ ಫ್ಲೆಕ್ಸ್, ಬ್ಯಾನರ್, ಪೋಸ್ಟರ್ ಹಾವಳಿಯ ವಿರುದ್ಧ ಹೈಕೋರ್ಟ್ ಮತ್ತೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ‌ ನಿಯಮ ಉಲ್ಲಂಘಿಸಿ ರಾಜಕೀಯ ಪಕ್ಷಗಳ‌ ಪೋಸ್ಟರ್ ಹಾಕುತ್ತಿದ್ದರೂ ಕ್ರಮ‌ ಕೈಗೊಳ್ಳದೇ ಬಿಬಿಎಂಪಿ ಮೂಕಪ್ರೇಕ್ಷಕವಾಗಿದೆ ಎಂದು ಪಾಲಿಕೆಯ ಉದಾಸೀನಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತಂತೆ ಮಾಯ್ಗೆಗೌಡ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಳೆ ಮತ್ತು ನ್ಯಾ. ಅಶೋಕ್ ಎಸ್.ಕಿಣಗಿ ಅವರಿದ್ದ ಪೀಠ ಬಿಬಿಎಂಪಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಪೀಠ, ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಹೋರ್ಡಿಂಗ್ಸ್ ಹಾಕಲಾಗಿದೆ. ಬಿಬಿಎಂಪಿ ಜಾಹಿರಾತು ಬೈ ಲಾ‌ಗಳ ಉಲ್ಲಂಘನೆಯಾಗಿದೆ. ಹೆಬ್ಬಾಳ ಫ್ಲೈ ಓವರ್ ಬಳಿ ದೊಡ್ಡ ಹೋರ್ಡಿಂಗ್ ಹಾಕಲಾಗಿದೆ ಎಂದು ಹೇಳಿತು.

Flex Banners And Posters Menace In Bengaluru City

ಜೊತೆಗೆ ಈ ಫೆಕ್ಸ್, ಬ್ಯಾನರ್‌ ಹೋರ್ಡಿಂಗ್‌ನಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಕಾಲಕಾಲಕ್ಕೆ ಅಕ್ರಮ ಜಾಹಿರಾತು ಫಲಕಗಳನ್ನು ಏಕೆ ತೆರವುಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿರುವ ನ್ಯಾಯಾಲಯ ನಿಯಮ ಉಲ್ಲಂಘಿಸಿದವರ ವಿರುದ್ಧ ಎಷ್ಟು ಎಫ್ಐಆರ್ ಹಾಕಿದ್ದೀರಿ ಎಂದು ಪ್ರಶ್ನಿಸಿದೆ.

ಈ ನಿಯಮ ಉಲ್ಲಂಘನೆಗೆ ಕಾರಣರಾದ ಅಧಿಕಾರಿಯನ್ನು ಹೊಣೆ ಮಾಡಿಲ್ಲ ಎಂದು ಪ್ರಶ್ನಿಸಿದ ನ್ಯಾಯಾಲಯ, ಆ ಬಗ್ಗೆ ಕೈಗೊಂಡ ಕ್ರಮದ ಮಾಹಿತಿ ನೀಡಲು ಬಿಬಿಎಂಪಿ, ಬಿಡಿಎಗೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 7ಕ್ಕೆ ನಿಗದಿಪಡಿಸಿದೆ.

'ಏರೋ ಇಂಡಿಯಾ-2023' ವೈಮಾನಿಕ ಪ್ರದರ್ಶನದ ಜಾಹೀರಾತು ಫಲಕಕ್ಕೆ ಹೈಕೋರ್ಟ್ ಅನುಮತಿ

ನಗರದ ಯಲಹಂಕ ಐಎಎಫ್ ವಾಯುನೆಲೆಯಲ್ಲಿ ಇದೇ ಫೆ.೧೩13ರಿಂದ ಐದು ದಿನಗಳ ಕಾಲ ನಡೆಯಲಿರುವ 'ಏರೋ ಇಂಡಿಯಾ-2023' ವೈಮಾನಿಕ ಪ್ರದರ್ಶನದ ನಿಮಿತ್ತ ನಗರದ ಹಲವೆಡೆ ತಾತ್ಕಾಲಿಕ ಹೋರ್ಡಿಂಗ್ಸ್‌ ಅಳವಡಿಸಲು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್) ಬಿಬಿಎಂಪಿ ಅನುಮತಿ ನೀಡಬಹುದು ಎಂದು ಹೈಕೋರ್ಟ್ ಕಳೆದ ವಿಚಾರಣೆ ವೇಳೆ ಸ್ಪಷ್ಟಪಡಿಸಿದೆ.

ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ನಗರದಲ್ಲಿ ಅನಧಿಕೃತ ಜಾಹೀರಾತು ಫಲಕ ಅಳವಡಿಕೆ ತಡೆಯುವ ವಿಚಾರದಲ್ಲಿ ಹೈಕೋರ್ಟ್ ಈ ಹಿಂದೆ ನೀಡಿರುವ ನಿರ್ದೇಶನಗಳನ್ನು ಜಾರಿಗೆ ತರುವಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರವಾದ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ನ್ಯಾಯಪೀಠ ಇದೇ ವೇಳೆ ಸೂಚಿಸಿದೆ.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ನಗರದ ಯಲಹಂಕ ಐಎಎಫ್ ವಾಯುನೆಲೆಯಲ್ಲಿ ಫೆ.13ರಿಂದ 17ರವರೆಗೆ 'ಏರೋ ಇಂಡಿಯಾ-2023' ವೈಮಾನಿಕ ಪ್ರದರ್ಶನ ನಡೆಯಲಿದೆ. ಇದು ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದೆ. ಭಾರತದ ವಿವಿಧ ರಾಜ್ಯ ಮತ್ತು ಜಗತ್ತಿನ ಹಲವು ರಾಷ್ಟ್ರಗಳಿಂದ ಜನ ಬೆಂಗಳೂರು ನಗರಕ್ಕೆ ಪ್ರದರ್ಶನಕ್ಕೆ ಆಗಮಲಿಸಿದ್ದಾರೆ. ಹೀಗಾಗಿ, ಅವರಿಗೆ ಸೂಕ್ತ ಮಾಹಿತಿ ಹಾಗೂ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಹೋರ್ಡಿಂಗ್, ಸೂಚನಾಫಲಕ ಮತ್ತು ಮಾರ್ಗ ನಕ್ಷೆ ಅಳವಡಿಸಲು ಅನುಮತಿ ನೀಡುವಂತೆ ಎಚ್‌ಎಎಲ್ ಬಿಬಿಎಂಪಿಗೆ ಮನವಿ ನೀಡಿದೆ. ಏರ್ ಶೋ ಮುಗಿದ ಕೂಡಲೇ ಅವುಗಳನ್ನು ತೆರವುಗೊಳಿಸುವುದಾಗಿಯೂ ತಿಳಿಸಿದೆ ಎಂದು ವಿವರಿಸಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, 'ಏರೋ ಇಂಡಿಯಾ-2023' ಸಂಬಂಧಿಸಿದ ಜಾಹೀರಾತು ಫಲಕ ಪ್ರದರ್ಶಿಸಲು ಎಚ್‌ಎಲ್‌ಗೆ ಅನುಮತಿ ನೀಡಲು ಬಿಬಿಎಂಪಿಗೆ ಅವಕಾಶ ಕಲ್ಪಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+