ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಆರ್‌ಸಿಎಲ್‌ಗೂ ತಟ್ಟಿದ ಫ್ಲೆಕ್ಸ್ ನಿಷೇಧ ಬಿಸಿ, ಆದಾಯ ಖೋತಾ

|
Google Oneindia Kannada News

ಬೆಂಗಳೂರು, ಡಿಸೆಂಬರ್ 17: ಫ್ಲೆಕ್ಸ್ ನಿಷೇಧ ನೀತಿ ಇದೀಗ ಬಿಎಂಆರ್‌ಸಿಎಲ್‌ಗೂ ತಟ್ಟಿದೆ. ಇಷ್ಟು ದಿನ ನಮ್ಮ ಮೆಟ್ರೋ ಪಿಲ್ಲರ್‌ಗಳ ಮೇಲೆ ಅಳವಡಿಸಿರುವ ಜಾಹೀರಾತುಗಳನ್ನು ತೆರವುಗೊಳಿಸಲು ಬಿಬಿಎಂಪಿ ಸೂಚನೆ ನೀಡಿದೆ.

ನಮ್ಮ ಮೆಟ್ರೋಗೆ ಟೋಕನ್ ಆದಾಯ ಹೊರತುಪಡಿಸಿ, ಪಾರ್ಕಿಂಗ್ ಬಿಟ್ಟರೆ ಜಾಹೀರಾತು ಫಲಕಗಳಿಂದಲೇ ಹೆಚ್ಚು ಆದಾಯ ಬರುತ್ತಿತ್ತು. ಆದರೆ ಈಗ ಫ್ಲೆಕ್ಸ್ ನಿಷೇಧದಿಂದ ನಿಗಮಕ್ಕೆ ಮಾಸಿಕ 2 ಕೋಟಿ ರೂ ಆದಾಯ ನಷ್ಟವಾಗಿದೆ.

ಬೆಂಗಳೂರಿಗರಿಗೆ ಸಿಹಿ ಸುದ್ದಿ: ನೈಸ್ ರಸ್ತೆಯಲ್ಲೂ ಮೆಟ್ರೋ ಮಾರ್ಗ ಬೆಂಗಳೂರಿಗರಿಗೆ ಸಿಹಿ ಸುದ್ದಿ: ನೈಸ್ ರಸ್ತೆಯಲ್ಲೂ ಮೆಟ್ರೋ ಮಾರ್ಗ

2017-18ರಲ್ಲಿ ಟೋಕನ್ ಮಾರಾಟದಿಂದ 281 ಕೋಟಿ ರೂ ಮಳಿಗೆಗಳಿಗೆ ಬಾಡಿಗೆ, ಪಾರ್ಕಿಂಗ್ ಶುಲ್ಕ ಹೀಗೆ ಇತರೆ ಆದಾಯ ಮೂಲಗಳಿಂದ 13 ಕೋಟಿ ರೂ. ಹೀಗೆ ಒಟ್ಟು 337 ಕೋಟಿ ರೂ. ಆದಾಯ ಗಳಿಸಿತ್ತು.

Flex ban will affect on BMRCL income

ಕಳೆದ ಆರ್ಥಿಕ ವರ್ಷದಲ್ಲಿ ಮೆಟ್ರೋ ಕಾರ್ಯಾಚರಣೆ, ಸಿಬ್ಬಂದಿ ವೇತನ, ನಿರ್ವಹಣೆಗೆ ಒಟ್ಟು 264.10 ಕೋಟಿ ರೂ ಆಗಿದ್ದು, ನಿಗಮಕ್ಕೆ ಮಟ್ರೋ ಕಾರ್ಯಾಚರಣೆಯಿಂದ 73.11 ಕೋಟಿ ರೂ ಲಾಭ ಬಂದಿತ್ತು.

ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ

ಅಕ್ರಮ ಜಾಹೀರಾತು ಪ್ರದರ್ಶನ ತಡೆಗೆ ಸಮರ್ಪಕ ಜಾಹೀರಾತು ನೀತಿ ಜಾರಿಗೊಳಿಸುವಂತೆ ಹೈಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ, ಬಿಬಿಎಂಪಿ ನೂತನ ಜಾಹೀರಾತು ನೀತಿ ರೂಪಿಸಿದೆ. ನೀತಿ ಹಾಗೂ ಕರಡು ಬೈಲಾವನ್ನು ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿದೆ.

ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ? ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ?

ನಗರ ವ್ಯಾಪ್ತಿಯಲ್ಲಿ 1 ವರ್ಷದ ಅವಧಿಗೆ ಎಲ್ಲ ಬಗೆಯ ಜಾಹೀರಾತು ಪ್ರದರ್ಶನ ನಿಷೇಧಿಸಿ 2018ರ ಅ.ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

English summary
Flext ban will badly effect on BMRCL and it will loose nerly Rs 1-2 crore in their income.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X