ಮತ ಹಾಕುವ ಮುನ್ನ ತಿಳಿಯಲೇಬೇಕಾದ ಸಂಗತಿ

ಬೆಂಗಳೂರು, ಏ. 16 : ಗುರುವಾರ ಮತದಾನ ಮಾಡಲು ಜನರು ಸಿದ್ಧರಾಗುತ್ತಿದ್ದಾರೆ. ಕರ್ನಾಟಕದಲ್ಲಿ ಮೊದಲ ಬಾರಿಗೆ 'ವೋಟರ್‌ ವೆರಿಫೈಯೇಬಲ್‌ ಪೇಪರ್‌ ಟ್ರಯಲ್‌' ವ್ಯವಸ್ಥೆಯನ್ನು ಲೋಕಸಭೆ ಚುನಾವಣೆಯಲ್ಲಿ ಪರಿಚಯಿಸಲಾಗಿದೆ. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ನೀವು ಈ ವ್ಯವಸ್ಥೆಯನ್ನು ಕಾಣಬಹುದಾಗಿದೆ.

ಈಗಾಗಲೇ ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ವೋಟರ್‌ ವೆರಿಫೈಯೇಬಲ್‌ ಪೇಪರ್‌ ಟ್ರಯಲ್‌ (ವಿವಿಪ್ಯಾಟ್‌) ಯಂತ್ರದ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿ. ಸಿದ್ಧಪಡಿಸಿರುವ ಈ ಪ್ರಿಂಟಿಂಗ್‌ ಉಪಕರಣವನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಮತಗಟ್ಟೆಗಳಲ್ಲಿ ಬ್ಯಾಲೆಟ್‌ ಯೂನಿಟ್‌ ಜತೆಗೆ ಇರಿಸಲಾಗುತ್ತದೆ.

ಚುಣಾವಣಾ ಆಯೋಗ ಬೆಂಗಳೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬ್ಯಾನರ್ ಗಳನ್ನು ಹಾಕುವ ಮೂಲಕ ಜನರಿಗೆ ವಿವಿಪ್ಯಾಟ್ ಯಂತ್ರದ ಬಗ್ಗೆ ಮಾಹಿತಿ ನೀಡುತ್ತಿದೆ. ಮತಯಂತ್ರದಲ್ಲಿ ತಾನು ಚಲಾಯಿಸಿದ ಮತ ಇನ್ಯಾರಿಗೋ ಹೋಗಬಹುದು ಎಂಬ ಸಂಶಯ ನಿವಾರಣೆಗಾಗಿ ಚುನಾವಣಾ ಆಯೋಗ ಮೊದಲ ಬಾರಿಗೆ ಈ ವ್ಯವಸ್ಥೆ ಜಾರಿಗೆ ತಂದಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಬಳಕೆಯಾಗಲಿದೆ. [ನಿಮ್ಮಮತಗಟ್ಟೆ ತಿಳಿಯಬೇಕೆ ಎಸ್ಎಂಎಸ್ ಮಾಡಿ]

ವಿವಿಪ್ಯಾಟ್‌ ಯಂತ್ರ ಬಳಸುತ್ತಿದ್ದರೂ ಮತದಾರರಿಗೆ ಯಾವುದೇ ಗೊಂದಲ ಬೇಡ. ಹಿಂದಿನಂತೆಯೇ ಮತಯಂತ್ರದಲ್ಲಿ ಗುಂಡಿ ಒತ್ತಿದರೆ ಸಾಕು. ಆದರೆ, ನೀವು ಚಲಾಯಿಸಿದ ಮತ ಸರಿಯಾಗಿ ದಾಖಲಾಗಿದೆಯೇ ಎಂಬುದನ್ನು ಯಂತ್ರದ ಮೂಲಕ ವೀಕ್ಷಿಸಬಹುದು. ಅದು ಕೇವಲ 7 ಸೆಕೆಂಡ್ ಗಳ ಕಾಲ ನಿಮಗೆ ಕಾಣಿಸುತ್ತದೆ.

ಏನಿದು ವಿವಿಪ್ಯಾಟ್

ಏನಿದು ವಿವಿಪ್ಯಾಟ್

ನೀವು ಚಲಾಯಿಸಿದ ಮತ ಸರಿಯಾಗಿ ದಾಖಲಾಗಿದೆಯೇ ಎಂಬುದನ್ನು ವಿವಿಪ್ಯಾಟ್ ಯಂತ್ರದ ಮೂಲಕ ವೀಕ್ಷಿಸಬಹುದು. ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಜೊತೆ ಇರುವ ಈ ಯಂತ್ರ ನಿಮಗೆ ನಿಮ್ಮ ಮತ ಚಲಾವಣೆ ಆದ ನಂತರ ಒಂದು ಸ್ಲಿಪ್ ಅನ್ನು ಮುದ್ರಿಸಿ ನೀಡುತ್ತದೆ. ಆದರೆ, ಅದನ್ನು ನೀವು 7 ಸೆಕೆಂಡ್ ಗಳ ಕಾಲ ವೀಕ್ಷಿಸಬಹುದು. ಆ ಸ್ಲಿಪ್ ನಿಮ್ಮ ಕೈಗೆ ದೊರೆಯುವುದಿಲ್ಲ.

ನಿಮ್ಮ ಮತ ಯಾರಿಗೆ ಎಂದು ತಿಳಿಯಬಹುದು

ನಿಮ್ಮ ಮತ ಯಾರಿಗೆ ಎಂದು ತಿಳಿಯಬಹುದು

ಮತದಾರರು ಮತಯಂತ್ರದಲ್ಲಿ ಅಭ್ಯರ್ಥಿಯ ಹೆಸರಿನ ಮುಂದಿನ ಗುಂಡಿಯನ್ನು ಒತ್ತಿದಾಗ ಬೀಪ್‌ ಶಬ್ದದ ಜತೆಗೆ ಪಕ್ಕದ ವಿವಿಪ್ಯಾಟ್‌ನಲ್ಲಿ ಯಾರಿಗೆ ಮತ ಚಲಾಯಿಸಲಾಗಿದೆ ಎಂಬ ದೃಶ್ಯ ಮತ್ತು ಮುದ್ರಿತ ಚೀಟಿ ಕಾಣಿಸಿಕೊಳ್ಳುತ್ತದೆ. ಕೇವಲ 7 ಸೆಕೆಂಡ್‌ ಇದನ್ನು ವೀಕ್ಷಿಸಬಹುದಾಗಿದ್ದು, ಮುದ್ರಿತ ಚೀಟಿ ಯಂತ್ರದಲ್ಲೇ ಸಂಗ್ರಹವಾಗುತ್ತದೆ.

ಬಹಿರಂಗ ಪಡಿಸುವಂತಿಲ್ಲ

ಬಹಿರಂಗ ಪಡಿಸುವಂತಿಲ್ಲ

ವಿವಿಪ್ಯಾಟ್ ಪ್ರಿಂಟಿಂಗ್‌ ಡಿವೈಸ್‌ನಲ್ಲಿ ಹೆಚ್ಚಿನ ಗುಣಮಟ್ಟದ ಥರ್ಮಲ್‌ ಪೇಪರ್‌ ಬಳಸುವುದರಿಂದ 5 ವರ್ಷ ಮುದ್ರಿತ ಚೀಟಿ ಸುರಕ್ಷಿತವಾಗಿರಲಿದೆ. ಜತೆಗೆ ವಿವಿಪ್ಯಾಟ್‌ ಪ್ರಿಂಟಿಂಗ್‌ ಡಿವೈಸ್‌ಗಳನ್ನೂ ಸ್ಟ್ರಾಂಗ್‌ ರೂಂನಲ್ಲೇ ಇರಿಸಲಾಗುತ್ತದೆ. ಈ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲ.

 ಬೆಂಗಳೂರು ದಕ್ಷಿಣದಲ್ಲಿ ಮಾತ್ರ ಪ್ರಯೋಗ

ಬೆಂಗಳೂರು ದಕ್ಷಿಣದಲ್ಲಿ ಮಾತ್ರ ಪ್ರಯೋಗ

1925 ಅಂದರೆ ಕಡಿಮೆ ಮತಗಟ್ಟೆ ಹೊಂದಿರುವ ಕರ್ನಾಟಕದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ವಿವಿಪ್ಯಾಟ್ ಯಂತ್ರವನ್ನು ಬಳಕೆ ಮಾಡಲಾಗುತ್ತಿದೆ. ಉಳಿದಂತೆ ಬಿಹಾರದ ಪಟನಾಸಾಹಿಬ್‌, ಛತ್ತೀಸ್‌ಗಢದ ರಾಯ್‌ಪುರ, ಗುಜರಾತ್‌ನ ಗಾಂಧಿನಗರ, ತಮಿಳುನಾಡಿನ ಚೆನ್ನೈ ಸೆಂಟ್ರಲ್‌, ಉತ್ತರಪ್ರದೇಶದ ಲಕ್ನೋ, ಪಶ್ಚಿಮ ಬಂಗಾಳದ ಜಾಧವಪುರ್‌ ಕ್ಷೇತ್ರಗಳಲ್ಲಿ ವಿವಿಪ್ಯಾಟ್‌ ಬಳಸಲಾಗುತ್ತಿದೆ.

ಮೂರು ತಿಂಗಳ ಕಠಿಣ ಸಜೆ

ಮೂರು ತಿಂಗಳ ಕಠಿಣ ಸಜೆ

ಮತದಾನ ಕೇಂದ್ರದಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಮತದಾರ ವಿವಿಪ್ಯಾಟ್‌ನಲ್ಲಿ ಮತ ದಾಖಲಾದ ದೃಶ್ಯ ಸೆರೆಹಿಡಿಯಲು ಮುಂದಾದರೆ ಗೌಪ್ಯ ಮತದಾನ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಸ್ಥಳದಲ್ಲೇ ಪೊಲೀಸರು ಅವರನ್ನು ಬಂಧಿಸಲಿದ್ದಾರೆ. ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+