ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಅಗ್ನಿ ಅವಘಡ
ಬೆಂಗಳೂರು, ಮೇ 29: ನಗರದ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಮುಂಭಾಗದ ಬುರಿಟೋ ಬಾಯ್ಡ್ ಎನ್ನುವ ಪಿಜ್ಜಾ-ಕೆಫೆಯಲ್ಲಿ ಘಟನೆ ನಡೆದಿದೆ.
ಅಡುಗೆ ತಯಾರಿಸುವ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಿಚನ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ವಿಮಾನ ನಿಲ್ದಾಣದಲ್ಲಿ ಹೊಗೆಯನ್ನು ನೋಡಿ ಪ್ರಯಾಣಿಕರು ಕೆಲ ಕಾಲ ಆತಂಕಕ್ಕೀಡಾಗಿದ್ದರು ಬಳಿಕ ಆಗಿರುವ ಘಟನೆ ಬಗ್ಗೆ ಎಲ್ಲರಿಗೂ ವಿವರಿಸಿ ಭಯಪಡದಂತೆ ನಿಲ್ದಾಣ ಸಿಬ್ಬಂದಿಗಳು ಧೈರ್ಯ ತುಂಬಿದರು.

ಇತ್ತೀಚೆಗೆ ಟರ್ಮಿನಲ್ ಮುಂಭಾಗ ವ್ಯಾಪಾರ ವಹಿವಾಟಿನ ಕೇಂದ್ರವಾಗಿ ಮಾರ್ಪಾಡಾಗಿದ್ದು, ಸಾಕಷ್ಟು ಶಾಪಿಂಗ್ ಸೆಂಟರ್ ಹೋಟೆಲ್ ಕೆಫೆಗಳು ತಲೆ ಎತ್ತಿವೆ. ಶಾಪಿಂಗ್ ಸೆಂಟರ್‍ಗಳು ಒಂದಕ್ಕೊಂದು ಹೊಂದಿಕೊಂಡಿದ್ದು ಒಂದರಿಂದ ಒಂದಕ್ಕೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ. ಕೆಐಎಎಲ್ ನ ಆಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications