ಬೆಂಗಳೂರಿನ ಜಕ್ಕೂರು ಕಾಂಪ್ಲೆಕ್ಸ್‌ನಲ್ಲಿ ಬೆಂಕಿ: ವಿಡಿಯೋ
ಬೆಂಗಳೂರು ಫೆಬ್ರವರಿ 7: ಬೆಂಗಳೂರಿನ ಜಕ್ಕೂರು ಏರೋಡ್ರೋಮ್ ಬಳಿಯ ಎನ್‌ಸಿಸಿ ಅರ್ಬನ್ ವಿಂಡ್ಸರ್ ಕಾಂಪ್ಲೆಕ್ಸ್‌ನ 8ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. 4 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದೆ. ಹೊಗೆ ಸಂಪೂರ್ಣವಾಗಿ ಕಾಂಪ್ಲೆಕ್ಸ್‌ಅನ್ನು ಆವರಿಸಿದೆ.

ಸಂಜೆ ಕಾಂಪ್ಲೆಕ್ಸ್‌ನ 8ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಆಕಾಶದೆತ್ತರಿಗೆ ಹೊಗೆ ಕಾಣಿಸಿಕೊಂಡಿದೆ. ಕಾಂಪ್ಲೆಕ್ಸ್‌ನಲ್ಲಿದ್ದವರ ರಕ್ಷಣೆ ಕಾರ್ತಯದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ತೊಡಗಿದ್ದು, ಯಾವುದೇ ಸಾವುಗಳ ಬಗ್ಗೆ ವರದಿಯಾಗಿಲ್ಲ. ದಟ್ಟ ಹೊಗೆಯಿಂದಾಗಿ ಸ್ಥಳೀಯರು ಆತಂಕಗೊಂಡಿದ್ದಾರೆ. ಸುತ್ತಮುತ್ತಲಿನ ಮಗಳಿಗೆ ಹಾಗೂ ಮನೆಳಿಂದ ಜನ ಹೊರಬಂದಿದ್ದಾರೆ. ಪೊಲೀಸರು ಸ್ಥಾಳಕ್ಕಾಗಮಿಸಿದ್ದು ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
Fire reported in the 8th floor of NCC Urban Windsor complex near the Jakkur aerodrome in Bengaluru. 4 fire tenders have been rushed to the spot. Smoke has fully engulfed a floor. More details awaited. pic.twitter.com/L0E0jtbIPK
— Deepak Bopanna (@dpkBopanna) February 7, 2023












Click it and Unblock the Notifications