ಮಹಿಳೆಗೆ ಎಚ್ಐವಿ ರಕ್ತ ನೀಡಿದ ಆಸ್ಪತ್ರೆ ವಿರುದ್ಧ ಎಫ್ಐಆರ್
ಬೆಂಗಳೂರು, ಡಿಸೆಂಬರ್ 20: ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರಿಗೆ ಎಚ್ ಐವಿ ಸೋಂಕಿರುವ ರಕ್ತವನ್ನು ನೀಡಿದ ಆರೋಪದ ಮೇಲೆ ಖಾಸಗಿ ಆಸ್ಪತ್ರೆಯ 14 ಮಂದಿ ಸಿಬ್ಬಂದಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.
ಸದಾಶಿವ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಯಲ್ಲಿ 2014ರಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರಿಗೆ ಸೋಂಕು ಇರುವ ರಕ್ತ ನೀಡಿದ ಆರೋಪ ಹೊತ್ತಿರುವ ಆಸ್ಪತ್ರೆಯ 14 ಮಂದಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಐಪಿಸಿ ಸೆಕ್ಷನ್ 120ಬಿ, 320, 336 ಹಾಗೂ 338 ರ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವ ನಗರ ಠಾಣೆ ಪೊಲೀಸರು, ಎಲ್ಲರ ಮೇಲೆ ಎಫ್ ಐಆರ್ ಹಾಕಿದ್ದಾರೆ.ಆಸ್ಪತ್ರೆಯಲ್ಲಿನ ಲೋಪದ ಮೇಲೆ 7 ಎಸಿಎಂಎಂ ಕೋರ್ಟಿಗೆ ದೂರು ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸದಾಶಿವ ನಗರ ಪೊಲೀಸರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.












Click it and Unblock the Notifications