ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಜಿರಾಫೆ ಆಗಮನ
ಬೆಂಗಳೂರು, ಏಪ್ರಿಲ್ 04: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ವಿಶೇಷ ಅತಿಥಿ ಜಿರಾಫೆ ಆಗಮನವಾಗಿದೆ. ಇದರಿಂದ ಇಡೀ ಉದ್ಯಾನವನಕ್ಕೆ ಮತ್ತಷ್ಟು ಮೆರೆಗು ಬಂದಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಿಂದ ಎರಡೂವರೆ ವರ್ಷ ವಯಸ್ಸಿನ ಹೆಣ್ಣು ಜಿರಾಫೆ ಗೌರಿಯನ್ನು ತರಿಸಿಕೊಂಡಿದೆ.
ಸುಮಾರು 200ಕಿ.ಮೀ ಸಂಚರಿಸಿ ಉದ್ಯಾನಕ್ಕೆ ಬಂದಿದೆ. ಉದ್ಯಾನವನದ ಮುಖ್ಯದ್ವಾರದ ಎಡಭಾಗದಲ್ಲಿ ಸುಮಾರು ಎರಡೂವರೆ ಎಕರೆ ವಿಸ್ತೀರ್ಣದ ಬಯಲು ಆಲಯದಲ್ಲಿ ಜಿರಾಫೆ ಬಿಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗೌರಿಯು 13.5ಅಡಿ ಎತ್ತರವಿದ್ದು, 2015 ರ ಡಿಸೆಂಬರ್ 19ರಂದು ಜನಿಸಿತ್ತು.

ಸುತ್ತಲು ಕಂದಕದ ಜೊತೆಗೆ ಬೇಲಿ ಹಾಕಲಾಗಿದೆ. ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಸುಮಾರು 40 ಅಡಿ ಎತ್ತರದ ಹೊಲ್ಡಿಂಗ್ ರೂಮ್ ಸಹ ನಿರ್ಮಾಣ ಮಾಡಿ ಶುಚಿಗೊಳಿಸಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ನಾಲ್ಕು ಅಧಿಕಾರಿಗಳು ಜಿರಾಫೆಯನ್ನು ತರಲು ಸತತ ಪ್ರಯತ್ನ ನಡೆಸುತ್ತ ಬಂದಿದ್ದರು.
ಮೈಸೂರು, ಆಂಧ್ರಪ್ರದೇಶ ಅಲ್ಲದೇ ವಿದೇಶದಿಂದಲೂ ಜಿರಾಫೆ ತರುವ ಪ್ರಯತ್ನ ನಡೆಸಿ ವಿಫಲವಾಗಿದ್ದರು. ವಿದೇಶದಿಂದ ಜಿರಾಫೆ ತರಲು ವಿಮಾನದ ವೆಚ್ಚವೇ ಸುಮಾರು 1 ಕೋಟಿ ರೂ. ತಗಲುತಿತ್ತು. ಇದರಿಂದ ವಿದೇಶದಿಂದ ತರುವ ಪ್ರಯತ್ನ ವಿಫಲವಾಯಿತು.
ಸದ್ಯ ಮೃಗಾಲಯ ಪ್ರಾಧಿಕಾರಕ್ಕೆ ರವಿ ಸದಸ್ಯ ಕಾರ್ಯದರ್ಶಿಯಾದ ಬಳಿಕ ಜಿರಾಫೆ ತರುವ ಹಾದಿ ಸುಲಭವಾಯಿತು. ಕಳೆದ ಮೂರು ತಿಂಗಳ ಹಿಂದೆಯೇ ಮೈಸೂರು ಮೃಗಾಲಯದಿಂದ ಜಿರಾಫೆ ನೀಡುವ ಹಸಿರು ನಿಶಾನೆ ಸಿಕ್ಕ ಬಳಿಕ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಇಬ್ಬರ ಸಿಬ್ಬಂದಿಯನ್ನು ಮೈಸೂರು ಮೈಗಾಲಯಕ್ಕೆ ಕಳುಹಿಸಿ ಅವರಿಗೆ ತರಬೇತಿ ನೀಡಿ ಪ್ರಾಣಿ ಜೊತೆ ಬೆರೆಯುವಂತೆ ಮಾಡಲಾಗಿದೆ.
ಬಬ್ಲಿ ಮತ್ತು ಮೇರಿ ಎಂಬ ಎರಡು ಜಿರಾಫೆಗಳನ್ನು ಮೈಸೂರಿನಿಂದ ಬನ್ನೇರುಘಟ್ಟಕ್ಕೆ ನೀಡಲು ಅನುಮತಿ ನೀಡಲಾಗಿದೆ. ಸದ್ಯ ಬಬ್ಬಿ ಜಿರಾಫೆ ತರಿಸಿಕೊಳ್ಳಲಾಗುತ್ತಿದೆ. ನಂತರ ಕೆಲ ದಿನಗಳ ಬಳಿಕ ಮೇರಿಯನ್ನು ತರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಉದ್ಯಾನವನದ ವೈದ್ಯಾಧಿಕಾರಿ ಉಮಾಶಂಕರ್ ಮಾತನಾಡಿ, ನಮ್ಮಲ್ಲಿದ್ದ ಶಂಕರ ಮತ್ತು ಬಸವ ಎಂಬ ಇಬ್ಬರನ್ನು ಮೈಸೂರಿಗೆ ಕಳುಹಿಸಿ ತರಬೇತಿ ಕೊಡಿಸಲಾಗಿದೆ. ಹಾಗೆ ಇಲ್ಲಿಗೆ ಬರುತ್ತಿರುವ ಪ್ರಾಣಿಗಳೊಂದಿಗೆ ಅವರು ಹೊಂದಿಕೊಂಡಿದ್ದಾರೆ. ಇದರಿಂದ ಪ್ರಾಣಿಗೆ ಹೊಸ ಜಾಗವಾದರೂ ಜಿರಾಫೆ ಪಾಲಕರು ಮಾತ್ರ ಹಳಬರಾಗಿರುತ್ತಾರೆ ಎಂದರು.
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್












Click it and Unblock the Notifications