ಒರಾಯನ್ ಮಾಲ್‌ನಲ್ಲಿ ಸಾಕು ಪ್ರಾಣಿಗಳ ಫ್ಯಾಷನ್ ಶೋ
ಬೆಂಗಳೂರು, ಏಪ್ರಿಲ್ 01 : ಸದಾ ಒಂದಿಲ್ಲೊಂದು ಸಂಭ್ರಮ -ಸಡಗರದ ವಾತಾವರಣವನ್ನು ಗ್ರಾಹಕರಿಗೆ ನೀಡುತ್ತಾ ಬರುತ್ತಿರುವ ಒರಾಯನ್ ಈಸ್ಟ್ ಮಾಲ್ ಏಪ್ರಿಲ್ 2ರಂದು ಸಂಜೆ 4 ಗಂಟೆಯಿಂದ ಸಾಕು ಪ್ರಾಣಿಗಳ ಉತ್ಸವ ನಡೆಸಲಿದೆ.
ಈ ಉತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಒರಾಯನ್ ಮಾಲ್ ಕೇವಲ ಸಾಕು ಪ್ರಾಣಿಗಳಿಗಷ್ಟೇ ಅಲ್ಲ ಅವುಗಳ ಮಾಲೀಕರಿಗೂ ಮೋಜು ಮಸ್ತಿ ಮಾಡುವಂತಹ ಅವಕಾಶ ನೀಡುತ್ತಿದೆ. ನಿಮ್ಮ ಬಳಿಯೂ ಸಾಕು ನಾಯಿಯಿದ್ದರೆ ತೆಗೆದುಕೊಂಡು ಹೋಗಿ.[ಹಂತಕರ ಹೆಸರು ಉಲಿದು ಪ್ರಕರಣ ಬೇಧಿಸಿದ ಗಿಳಿರಾಯ]

ಇಲ್ಲಿಗೆ ಆಗಮಿಸುವ ಗ್ರಾಹಕರು ತಮ್ಮ ಬಳಿ ಸಾಕು ಪ್ರಾಣಿಗಳು ಇಲ್ಲವಲ್ಲ ಎಂದು ಚಿಂತಿಸುವಂತಿಲ್ಲ. ಇಲ್ಲಿರುವ ಸಾಕುಪ್ರಾಣಿಗಳ ಚಟುವಟಿಕೆಗಳನ್ನೇ ನೋಡಿ ಆನಂದಪಡಬಹುದು.
ಇಲ್ಲಿನ ಮತ್ತೊಂದು ವಿಶೇಷವೆಂದರೆ, ಸಾಕು ಪ್ರಾಣಿಗಳ ಫ್ಯಾಶನ್‌ಶೋ. ಹೆಚ್ಚು ಆಕರ್ಷಿಸುವ ಮುದ್ದಿನ ಸಾಕು ಪ್ರಾಣಿಗೆ ಬಹುಮಾನ ಗ್ಯಾರಂಟಿ. ಬಹುಮಾನ ಗೆಲ್ಲುವ ಸಾಕು ಪ್ರಾಣಿಗಳ ಮಾಲೀಕರಿಗೆ ಚಾಂಪಿಯನ್ ಪಟ್ಟ ಸಿಗಲಿದೆ. ನಾಯಿ, ಬೆಕ್ಕು, ಪಕ್ಷಿಗಳು ಮತ್ತು ಇತರೆ ಸಾಕು ಪ್ರಾಣಿಗಳು ಈ ಉತ್ಸವದಲ್ಲಿ ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.[ಬೆಕ್ಕುಗಳ ಪಾಲನೆ, ರಕ್ಷಣೆ ಕುರಿತ ವಿಚಾರ ಸಂಕಿರಣ]
ಕರ್ನಾಟಕ ಕೆನ್ನೆಲ್ ಕ್ಲಬ್‌ನ ಅಧ್ಯಕ್ಷ ರವಿಕುಮಾರ್, ಪಶು ವಿಜ್ಞಾನಗಳ ಸಹಾಯಕ ಪ್ರೊಫೆಸರ್ ಡಾ.ರವೀಂದ್ರ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿರುತ್ತಾರೆ. ಇಲ್ಲಿ ಪಾಲ್ಗೊಳ್ಳುವ ಎಲ್ಲಾ ಸ್ಪರ್ಧಿಗಳಿಗೆ ಒರಾಯನ್ ಮಾಲ್‌ನಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ.
ಈ ಸ್ಪರ್ಧೆಗಳಲ್ಲದೇ, ಸಾಕು ಪ್ರಾಣಿಗಳಿಗೆ ಇಷ್ಟವಾದ ತಿನಿಸುಗಳ ಮಳಿಗೆಗಳು, ಅಗತ್ಯವಾದ ವಸ್ತುಗಳ ಮತ್ತು ಅವುಗಳನ್ನು ಅಂದಗೊಳಿಸುವ ಸೇವೆಗಳೂ ಇಲ್ಲಿ ಲಭ್ಯವಾಗಲಿವೆ. ಇಲ್ಲಿ ಸಾಕು ಪ್ರಾಣಿಗಳ ಮಾಲೀಕರು ಶಾಪಿಂಗ್ ಮಾಡಲು ಅವಕಾಶವಿದೆ.
ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಮಾಲೀಕರು ದೂರವಾಣಿ ಸಂಖ್ಯೆ 9900234651ಗೆ ಕರೆ ಮಾಡಿ ಉಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.












Click it and Unblock the Notifications