• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚುನಾವಣಾ ಪ್ರಚಾರದ ವೇಳೆ ಕುಮಾರಸ್ವಾಮಿ ಕೆನ್ನೆಗೆ ಮುತ್ತು

|
   Lok Sabha Elections 2019 : ಮಗನ ಪರ ಮಂಡ್ಯದಲ್ಲಿ ಸಿಎಂ ಭರ್ಜರಿ ಪ್ರಚಾರ

   ಮಂಡ್ಯ, ಏ.12: ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ದಿನಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೂಡ ಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಕುಮಾರಸ್ವಾಮಿಗೆ ಮುತ್ತು ಕೊಟ್ಟಿರುವ ಘಟನೆಯೂ ನಡೆದಿದೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಕುಮಾರಸ್ವಾಮಿಯವರು ಗುರುವಾರ ರಾತ್ರಿವರೆಗೂ ನಿಖಿಲ್ ಪರ ಪ್ರಚಾರದಲ್ಲಿತೊಡಗಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಕುಮಾರಸ್ವಾಮಿಗೆ ಮುತ್ತು ಕೊಟ್ಟಿದ್ದಾರೆ. ಈ ಮೊದಲು ದರ್ಶನ್ ಅವರು ಸುಮಲತಾ ಅಂಬರೀಶ್ ಅವರ ಪರ ಪ್ರಚಾರ ಮಾಡುತ್ತಿರುವಾಗಲೂ ಅಭಿಮಾನಿಯೊಬ್ಬರು ದರ್ಶನ್ ಕೆನ್ನೆಗೆ ಮುತ್ತು ಕೊಟ್ಟಿದ್ದರು.

    ನಮ್ಮ ವಿರೋಧಿ ಅಭ್ಯರ್ಥಿಯಿಂದ ಕಾಟ

   ನಮ್ಮ ವಿರೋಧಿ ಅಭ್ಯರ್ಥಿಯಿಂದ ಕಾಟ

   ನಮ್ಮ ವಿರೋಧಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ದಿನದಿಂದ ಇಂದಿನವರೆಗೂ ಕಾಟ ಕೊಟ್ಟಿದ್ದಾರೆ. ಈಗ ಜಿಲ್ಲೆಯ ಜನರ ತೀರ್ಮಾನ ಅರಿತು ಅವರ ಬೆಂಬಲಿಗರ ಮೇಲೆ ಅವರೇ ಕಲ್ಲು ತೂರಾಟ ನಡೆಸಿ, ಕುಮಾರಣ್ಣನ ಕಡೆಯವರು ಹೊಡೆದರು ಎಂದು ಅನುಕಂಪ ಗಿಟ್ಟಿಸಲು ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಸಿಎಂ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

    ನಿಖಿಲ್ ಗೆಲ್ಲಿಸಲು ಮಂಡ್ಯದಲ್ಲಿ ಅಭಿವೃದ್ಧಿಗೆ ಚಾಲನೆ ಕೊಟ್ಟಿಲ್ಲ

   ನಿಖಿಲ್ ಗೆಲ್ಲಿಸಲು ಮಂಡ್ಯದಲ್ಲಿ ಅಭಿವೃದ್ಧಿಗೆ ಚಾಲನೆ ಕೊಟ್ಟಿಲ್ಲ

   ಇದಕ್ಕೂ ಮೊದಲು ಮದ್ದೂರಿನಲ್ಲಿ ಮಾತನಾಡಿದ ಸಿಎಂ. ನಿಖಿಲ್ ಗೆಲ್ಲಿಸಲು ಮಂಡ್ಯದಲ್ಲಿ ಅಭಿವೃದ್ಧಿಗೆ ಚಾಲನೆ ಕೊಟ್ಟಿಲ್ಲ. ನನಗೆ ಕುತಂತ್ರದ ರಾಜಕಾರಣ ಮಾಡಿ ಅಭ್ಯಾಸವಿಲ್ಲ. ನಮ್ಮ ಎದುರಾಳಿಗಳು ಅವರ ಕೆಲಸಗಾರರಿಗೆ ಸೈಟು, ಹಣ ಕೊಡುತ್ತೇವೆ ಎಂದು ಮಾತನಾಡುವುದನ್ನು ಕೇಳಿದ್ದೇನೆ. ಒಂದು ಮುಖ ನೋಡಿದ್ದೀರಿ, ಇನ್ನೊಂದು ಮುಖ ತೋರಿಸುತ್ತೇವೆ ಎಂದು ಹೇಳುವುದನ್ನು ಗಮನಿಸಿದ್ದೇನೆ. ಅವರು ಬಂದಾಗ ತಾಯಂದಿರು ಕೇಳಿ. ಅದೇನು ಇನ್ನೊಂದು ಮುಖ ತೋರಿಸುತ್ತೇನರ ಅಂದ್ರಲ್ಲ ತೋರಿಸಿ ಎಂದು ಕೇಳಿ ಹೇಳುವ ಮೂಲಕ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕಾಲೆಳೆದರು.

   ಅವರೇ ಕಲ್ಲು ತೂರಿ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಕುಮಾರಸ್ವಾಮಿ

    ನಾನು ಕೂಡ ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ

   ನಾನು ಕೂಡ ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ

   ನಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ, ಆಗ ನೀವು ನನಗೆ ಆಶೀರ್ವಾದ ಮಾಡಿದ್ರಿ. ಇಂದು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ನನಗೆ ಅವಕಾಶ ಕೊಟ್ಟ ರೀತಿ, ಅವನಿಗೂ ಅವಕಾಶ ಕೊಡಿ. ಈಗ ಮಂಡ್ಯ ಜಿಲ್ಲೆಯ ರೈತರ ಬಗ್ಗೆ ಮಾತನಾಡುವವರು ಯಾರಾದ್ರು ಮನೆಗೆ ಬಂದು ಸಾಂತ್ವನ ಹೇಳಿದ್ದಾರ ಯೋಚನೆ ಮಾಡಿ. ನಾನು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ತೊಂದರೆ ಕೊಟ್ಟಿಲ್ಲ.

   ದಾರಿ ಮಧ್ಯೆ ಕಾರು ನಿಲ್ಲಿಸಿ ಮಹಿಳೆಯ ಕಷ್ಟ ಕೇಳಿದ ಕುಮಾರಸ್ವಾಮಿ

    ಎಲ್ಲರ ಸಮಸ್ಯೆಗೂ ಸ್ಪಂದಿಸಿದ್ದೇನೆ

   ಎಲ್ಲರ ಸಮಸ್ಯೆಗೂ ಸ್ಪಂದಿಸಿದ್ದೇನೆ

   ಯಾರೇ ಬಂದು ಸಮಸ್ಯೆ ಹೇಳಿಕೊಂಡರೂ ಸ್ಪಂದಿಸಿದ್ದೇನೆ. ನೀವು ಸತ್ತರೆ ನಾವು ಬರಬೇಕು. ನಾವು ಸತ್ತರೆ ನೀವು ಬರಬೇಕು. ಚುನಾವಣೆ ಮುಗಿದ ನಂತರ ಅವರು ನಿಮ್ಮ ಕೈಗೆ ಸಿಗುವುದಿಲ್ಲ, ನನ್ನ ಸ್ನೇಹಿತ ಅಂಬರೀಶ್ ಬದುಕಿದ್ದಾಗಲೇ ನಿಮ್ಮ ಕಷ್ಟಕ್ಕೆ ಸ್ಪಂದಿಸದ ಅಭ್ಯರ್ಥಿ ಈಗ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತಾರಾ ಎಂದು ಸುಮಲತಾ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.

   'ಮೋದಿ' ಮುಖ ನೋಡಿ ಎಂದು ಮತ ಕೇಳುತ್ತಿದ್ದಾರೆ, ಇಂತವರನ್ನು ನಂಬಬಹುದೇ?'

   English summary
   JDS fan kissed Chief Minister HD kumaraswamy in Election campaign at Mandya on Thursday Night.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X