Infosys WFH: ಮನೆಯಿಂದ ಕೆಲಸ, ರಜೆ ಕಡಿತ ಇತರ ಇನ್ಫೋಸಿಸ್ ಹೊಸ ನಿಯಮಗಳು
ಬೆಂಗಳೂರು, ಮಾರ್ಚ್ 12: ಬೆಂಗಳೂರು ಮೂಲದ ಇನ್ಫೋಸಿಸ್ ಮತ್ತೆ ಸುದ್ದಿಯಲ್ಲಿದೆ. ಮಾರ್ಚ್ 10ರಿಂದಲೇ ಅನ್ವಯವಾಗುವಂತೆ ಮನೆಯಿಂದ ಕೆಲಸ ಮಾಡುವ ನಿಯಮದಲ್ಲಿ ಬದಲಾವಣೆಯನ್ನು ತಂದಿತ್ತು. ಈಗ ಉದ್ಯೋಗಿಗಳಿಗೆ ಮತ್ತೊಂದು ಸೂಚನೆಯನ್ನು ನೀಡಿದ್ದು, ಕಛೇರಿಯಿಂದ ಕಡ್ಡಾಯವಾಗಿ ಕೆಲಸ ಮಾಡಬೇಕು. ಮನೆಯಿಂದ ಕೆಲಸ ಮಾಡುವ ಆಯ್ಕೆಗೆ ಮ್ಯಾನೇಜರ್‌ಗಳ ಒಪ್ಪಿಗೆ ಕಡ್ಡಾಯವಾಗಿದೆ ಎಂದು ಹೇಳಿದೆ.
ಮನೆಯಿಂದ ಕೆಲಸ ಮಾಡುತ್ತಿದ್ದ ಇನ್ಫೋಸಿಸ್ ಉದ್ಯೋಗಿಗಳು ಇಷ್ಟು ದಿನ ಅಪ್ಲಿಕೇಶನ್ ಮೂಲಕ ಹಾಜರಾತಿ ದಾಖಲಿಸುತ್ತಿದ್ದರು. ಆದರೆ ಇನ್ನು ಮುಂದೆ ಅಪ್ಲಿಕೇಶನ್ ಉದ್ಯೋಗಿಯ ಹಾಜರಾತಿ ದಾಖಲು ಮಾಡಿಕೊಳ್ಳುವುದಿಲ್ಲ. ಕಡ್ಡಾಯವಾಗಿ ತಿಂಗಳಿನಲ್ಲಿ 10 ದಿನ ಕಛೇರಿಯಿಂದ ಕೆಲಸ ಮಾಡಬೇಕು ಎಂದು ಹೊಸ ಸೂಚನೆಯನ್ನು ಕೊಡಲಾಗಿದೆ.

ಒಂದು ವೇಳೆ ತಿಂಗಳಿನಲ್ಲಿ ಹೆಚ್ಚು ದಿನ ಮನೆಯಿಂದ ಕೆಲಸ ಮಾಡುವ ಆಯ್ಕೆ ಬೇಕಾಗಿದ್ದರೆ ಮ್ಯಾನೇಜರ್ ಒಪ್ಪಿಗೆ ಕಡ್ಡಾಯವಾಗಿದೆ. ಅಪ್ಲಿಕೇಶನ್ ಮೂಲಕ ಮನೆಯಿಂದ ಕೆಲಸ ಮಾಡುವ ಆಯ್ಕೆ ಮಾಡಿಕೊಳ್ಳುವುದನ್ನು ತತ್‌ಕ್ಷಣದಿಂದಲೇ ನಿಲ್ಲಿಸಲಾಗುತ್ತದೆ ಎಂದು ತಿಳಿಸಿದೆ.
ರಜೆಯಲ್ಲಿ ಕಡಿತ: ಇನ್ಫೋಸಿಸ್ ಉದ್ಯೋಗಿಗಳು ಕಡ್ಡಾಯವಾಗಿ ತಿಂಗಳಿನಲ್ಲಿ 10 ದಿನ ಕಛೇರಿಯಿಂದ ಕೆಲಸ ಮಾಡಬೇಕು. ಈ ನಿಯಮವನ್ನು ಉಲ್ಲಂಘನೆ ಮಾಡಿದರೆ ಉದ್ಯೋಗಿಗಳ ರಜೆಯಲ್ಲಿ ಕಡಿತ ಮಾಡಲಾಗುತ್ತದೆ ಎಂದು ಹೊಸ ಸೂಚನೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ.
ತಿಂಗಳಿನಲ್ಲಿ 10 ದಿನ ಕಡ್ಡಾಯವಾಗಿ ಉದ್ಯೋಗಿಗಳು ಕಛೇರಿಯಲ್ಲಿ ಹಾಜರಾತಿ ಪಂಚ್ ಮಾಡಬೇಕು. ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಆದಷ್ಟು ಕಡಿಮೆ ಮಾಡಿ, ತಿಂಗಳಿನಲ್ಲಿ ಲಭ್ಯವಿರುವ ಈ ಆಯ್ಕೆಗಿಂತ ಹೆಚ್ಚಿನ ದಿನಗಳನ್ನು ಕೇಳಬೇಡಿ ಎಂದು ಮಾಹಿತಿ ನೀಡಲಾಗಿದೆ ಎಂದು ಹಿರಿಯ ಉದ್ಯೋಗಿಯೊಬ್ಬರು ಮಾಧ್ಯಮದ ಜೊತೆ ಮಾತನಾಡಿದ್ದಾರೆ.
ಈಗ ಉದ್ಯೋಗಿಗಳು ಬಳಕೆ ಮಾಡುತ್ತಿರುವ ಅಪ್ಲಿಕೇಶನ್‌ನಲ್ಲಿ ಉದ್ಯೋಗಿಗಳಿಗೆ ಎಷ್ಟು ದಿನಗಳ ಕಾಲದ ಮನೆಯಿಂದ ಕೆಲಸ ಮಾಡುವ ಆಯ್ಕೆ ಲಭ್ಯವಿದೆ ಎಂಬ ಮಾಹಿತಿ ಸಿಗುವಂತೆ ಮಾಡಲಾಗಿದೆ. ಹೆಚ್ಚುವರಿ ದಿನಗಳಿಗಾಗಿ ಅಪ್ಲಿಕೇಶನ್ ಮೂಲಕ ಆಯ್ಕೆ ಮಾಡಲು ಅವಕಾಶವೇ ಇರುವುದಿಲ್ಲ ಎಂದು ಇನ್ಫೋಸಿಸ್ ತಿಳಿಸಿದೆ.
ಹೆಚ್ಚುವರಿ ದಿನದ ಮನೆಯಿಂದ ಕೆಲಸ ಮಾಡುವ ಆಯ್ಕೆ ಬೇಕಾದರೆ ಉದ್ಯೋಗಿ ಮ್ಯಾನೇಜರ್ ಮೂಲಕ ಅನುಮತಿ ಪಡೆಯಬೇಕಿದೆ. ಕಛೇರಿಯಿಂದ ಕೆಲಸ ಮಾಡುವ ದಿನಗಳನ್ನು ಹೆಚ್ಚಿಗೆ ಮಾಡಿಕೊಳ್ಳಿ ಎಂದು ಇನ್ಫೋಸಿಸ್ ಉದ್ಯೋಗಿಗಳಿಗೆ ಸಂದೇಶವನ್ನು ರವಾನಿಸಿದೆ.
ಇನ್ಫೋಸಿಸ್ ಸುಮಾರು 3,23,000 ಉದ್ಯೋಗಿಗಳನ್ನು ಹೊಂದಿದೆ. ಈಗ ಹೆಚ್ಚಿನ ಮನೆಯಿಂದ ಕೆಲಸ ಮಾಡುವ ಆಯ್ಕೆಗಾಗಿ ಮ್ಯಾನೇಜರ್ ಒಪ್ಪಿಗೆ ಕಡ್ಡಾಯವಾದ ಕಾರಣ ಮ್ಯಾನೇಜರ್ ಮತ್ತು ಉದ್ಯೋಗಿಗಳ ನಡುವಿನ ಸಂಬಂಧ ಚೆನ್ನಾಗಿದ್ದರೆ ಮಾತ್ರ ಅನುಮತಿ ಸಿಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಾರ್ಚ್ 10ರ ಸೋಮವಾರದಿಂದಲೇ ಅನ್ವಯವಾಗುವಂತೆ ತಿಂಗಳಿನಲ್ಲಿ 10 ದಿನ ಕಛೇರಿಯಿಂದ ಕೆಲಸ ಮಾಡಬೇಕು. ಹಿರಿಯ ಉದ್ಯೋಗಿಗಳು ಸೇರಿದಂತೆ ಎಲ್ಲರೂ ತಿಂಗಳಿನಲ್ಲಿ ಕನಿಷ್ಠ 10 ದಿನ ಕಛೇರಿಗೆ ಬರಬೇಕು ಎಂದು ಇನ್ಫೋಸಿಸ್ ಕಳೆದ ವಾರ ಹೇಳಿತ್ತು.
ಇನ್ಫೋಸಿಸ್ 2024ರಲ್ಲಿಯೇ ಹಲವು ಕಂಪನಿಗಳು ಉದ್ಯೋಗಿಗಳಿಗೆ ವಾರದಲ್ಲಿ 3 ದಿನ ಕಛೇರಿಗೆ ಬರಬೇಕು ಎಂದು ಹೇಳಿತ್ತು. ಬೆಂಗಳೂರು ನಗರದ ಹಲವು ಐಟಿ ಉದ್ಯೋಗಿಗಳು ಈ ಮಾದರಿ ಅನುಸರಿಸುತ್ತಿದ್ದಾರೆ. ಈಗ ಇನ್ಫೋಸಿಸ್ ತಿಂಗಳಿನಲ್ಲಿ 10 ದಿನ ಕಛೇರಿಯಿಂದ ಕೆಲಸ ಮಾಡಬೇಕು ಎಂದು ಸೂಚನೆ ಕೊಟ್ಟಿದೆ.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ












Click it and Unblock the Notifications