ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್ ಅಂತ್ಯಕ್ಕೆ ಬೈಯಪ್ಪನಹಳ್ಳಿ ರೈಲು ನಿಲ್ದಾಣ ವಿಸ್ತರಣೆ ಪೂರ್ಣ

By Nayana
|
Google Oneindia Kannada News

ಬೆಂಗಳೂರು, ಮೇ 1: ಬೈಯಪ್ಪನಹಳ್ಳಿ ರೈಲು ನಿಲ್ದಾಣದ 1ನೇ ಹಾಗೂ 2ನೇ ಪ್ಲಾಟ್‌ಫಾರಂ ವಿಸ್ತರಣೆ ಕಾಮಗಾರಿ ಜೂನ್ ಮಾಸಾಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಅತಿ ಉದ್ದದ ರೈಲುಗಳ ನಿಲುಗಡೆ ಈ ನಿಲ್ದಾಣದಲ್ಲಿ ಶೀಘ್ರ ಸಾಧ್ಯವಾಗಲಿದೆ.

ಸದ್ಯ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಕೇವಲ 19 ಕೋಚ್‌ಗಳುಳ್ಳ ರೈಲು ನಿಲುಗಡೆ ಸಾಧ್ಯವಿದೆ. ಇದರಿಂದ ಅನೇಕ ಸಂದರ್ಭಗಳಲ್ಲಿ ಈ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಸಾಧ್ಯವಾಗುತ್ತಿಲ್ಲ. ಪ್ಲಾಟ್ ಫಾರಂ ವಿಸ್ತರಣೆ ಬಳಿಕ ಇಲ್ಲಿ 24 ಕೋಚ್‌ಗಳವರೆಗಿನ ರೈಲುಗಳ ನಿಲುಗಡೆ ಸಾಧ್ಯವಾಗಲಿದೆ. ಕಾಮಗಾರಿ ಕೂಡ ಭರದಿಂದ ಸಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ಕಾಣೆಯಾದ ಮಕ್ಕಳನ್ನು ಹುಡುಕಲು ನೂತನ ಆ್ಯಪ್ ರೈಲ್ವೆ ನಿಲ್ದಾಣದಲ್ಲಿ ಕಾಣೆಯಾದ ಮಕ್ಕಳನ್ನು ಹುಡುಕಲು ನೂತನ ಆ್ಯಪ್

ಅತಿ ಉದ್ದದ ರೈಲುಗಳು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ನಿಲುಗಡೆಯಾದರೆ ನಿತ್ಯ ಹೆಚ್ಚುವರಿಯಾಗಿ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ವಿಶೇಷವಾಗಿ ಎಲ್ಲ ರೈಲುಗಳ ಪ್ರಯಾಣಿಕರೂ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಆರ್‌ಎಸ್) ಕೇಂದ್ರ ರೈಲು ನಿಲ್ದಾಣ ಕ್ಕೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.

express trains will stop at Baiyappanahalli station, Soon,

ಸದ್ಯ ಕೆಆರ್‌ಎಸ್ ನಿಲ್ದಾಣದಿಂದ ಎರ್ನಾಕುಲಂಗೆ ತೆರಳುವ ಎರಡು ರೈಲುಗಳನ್ನು ಬಾಣಸವಾಡಿಗೆ ಸ್ಥಳಾಂತರಿಸಲಾಗಿದ್ದು, ಅದೇ ನಿಲ್ದಾಣದಿಂದ ಎರ್ನಾಕುಲಂಗೆ ತೆರಳು ಎರಡು ರೈಲುಗಳು ಕಾರ್ಯಾಚರಣೆ ನಡೆಸಲಿವೆ. ಅಲ್ಲದೇ ಬೈಯಪ್ಪನಹಳ್ಳಿ ನಿಲ್ದಾಣ ವಿಸ್ತರಣೆ ಬಳಿಕ ಬೆಂಗಳೂರು- ಚೆನ್ನೈ ಸೂಪರ್ಫಾಸ್ಟ್ ರೈಲು, ಬಂಗಾರಪೇಟೆ- ಬೆಂಗಳೂರು, ಲಾಲ್‌ಬಾಗ್ ಎಕ್ಸ್‌ಪ್ರೆಸ್, ಸಂಘಮಿತ್ರ ಸೂಪರ್ ಫಾಸ್ಟ್, ತಿರುಪತಿ ಬೆಂಗಳೂರ ಟ್ರೈ ವೀಕ್ಲಿ ರೈಲುಗಳ ನಿಲುಗಡೆಗೂ ಅನುಕೂಲವಾಗಲಿದೆ.

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವೆ ಮೆಮು ರೈಲು ಸಂಚಾರಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವೆ ಮೆಮು ರೈಲು ಸಂಚಾರ

ಸದ್ಯ ಕೆಆರ್‌ಎಸ್ ಮತ್ತು ಯಶವಂತಪುರ ಟರ್ಮಿನಲ್‌ಗಳು ಮಾತ್ರ ರೈಲುಗಳ ಪ್ರಮುಖ ಕಾರ್ಯಾಚರಣೆ ಬಿಂದುಗಳಾಗಿದ್ದು, ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ 24 ಕೋಚ್‌ಗಳ ರೈಲು ನಿಲುಗಡೆ ಸಾಧ್ಯವಾದರೆ ಮೂರನೇ ಟರ್ಮಿನಲ್ ಆಗಿ ಪರಿವರ್ತನೆಯಾಗಲಿದೆ. ಬೈಯಪ್ಪನಹಳ್ಳಿ ನಿಲ್ದಾಣದಿಂದ 3 ಕಿಮೀ ದೂರದನಲ್ಲಿ ಮೂರನೇ ಕೋಚ್ ಟರ್ಮಿನಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದರಿಂದ ಬೆಂಗಳೂರು ಕೇಂದ್ರ ರೈಲು ನಿಲ್ದಾಣದ ಮೇಲಿನ ಒತ್ತಡವನ್ನು ಸಾಕಷ್ಟು ಕಡಿಮೆ ಮಾಡಬಹುದಾಗಿದೆ.

English summary
With expansion work of Baiyappanahalli railway station’s platform nos. 1 and 2 expected to be completed by June-end, long-distance trains will soon halt there. At present, only trains with a maximum of 19 coaches stop at Baiyappanahalli because of its short platforms.At present, passenger trains halt at Baiyappanahalli
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X