ಮಾಜಿ ಮೇಯರ್ ಸಂಪತ್ ರಾಜ್ ಎಸ್ಕೇಪ್ ಚರಿತ್ರೆ !

ಬೆಂಗಳೂರು ನವೆಂಬರ್‌ 17: ಡಿ.ಜೆ ಹಳ್ಳಿ ಗಲಭೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ನಾಟಕವಾಡಿ ತಲೆ ಮರೆಸಿಕೊಂಡಿದ್ದ ಮಾಜಿ ಮೇಯರ್ ಸಂಪತ್ ರಾಜ್‌ರನ್ನು ಇಂದು ಮಧ್ಯಾಹ್ನ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದೆ. ಕಸ್ಟಡಿಗೆ ಪಡೆದ ಬಳಿಕ ಸಂಪತ್ ರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

ಸಂಪತ್ ರಾಜ್ ಗೆ ಆಶ್ರಯ ನೀಡಿದ ಆರೋಪದಡಿ ರಿಯಾಸುದ್ಧೀನ್ ರನ್ನು ಬಂಧನವಾಗುತ್ತಿದ್ದಂತೆ ಸಂಪತ್ ರಾಜ್ ಅವರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿದಿಂತೆ ಈಗಾಗಲೇ 50 ಪುಟಗಳ ಮಧ್ಯಂತರ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಬಂಧನದ ಭೀತಿಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂಪತ್ ರಾಜ್ ಅನಾರೋಗ್ಯ ನಾಟಕವಾಡಿ ತಲೆ ಮರೆಸಿಕೊಂಡಿದ್ದರು. ಸಿಸಿಬಿ ಪೊಲೀಸರು ಎಷ್ಟೇ ಹುಡುಕಿದ್ದರೂ ಆತನ ಸುಳಿವು ಸಿಕ್ಕಿರಲಿಲ್ಲ.

ಸಂಪತ್ ರಾಜ್ ಸಂಬಂಧಿಯನ್ನು ಇತ್ತೀಚೆಗೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದು, ಸಂಪತ್ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದರು. ಯಾವುದೇ ಮಾಹಿತಿ ನೀಡಿರಲಿಲ್ಲ. ತಲೆಮರೆಸಿಕೊಂಡಿದ್ದ ಸಂಪತ್ ರಾಜ್ ಬಂಧನವಾಗದ ಬಗ್ಗೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಜಾಮೀನು ಸಿಗುವುದು ಕೂಡ ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಿತ್ತು. ಸೋಮವಾರ ರಾತ್ರಿ ಬೆಂಗಳೂರಿನ ಸ್ನೇಹಿತನ ಮನೆಗೆ ಬಂದಾಗ ಸಂಪತ್ ರಾಜ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಸಂಪತ್ ರಾಜ್ ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿ ಬಳಿಕ ಅನಾರೋಗ್ಯ ನಾಟಕವಾಡಿ ತಲೆಮರೆಸಿಕೊಂಡಿದ್ದರು. ಸಂಪತ್ ಹೈ ಡ್ರಾಮಾ ದಿನಚರಿ ಹೀಗಿತ್ತು.

Ex Mayor Sampath Raj Escape Timeline

TIMELINE:

11/08/2020- ಡಿಜೆ ಹಳ್ಳಿ - ಕೆಜಿ ಹಳ್ಳಿ ಪೊಲೀಸ್ ಠಾಣೆ - ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮತ್ತು ನವೀನ್ ನಿವಾಸಕ್ಕೆ ಬೆಂಕಿ

18/08/2020: ಸಿಸಿಬಿ ಪೊಲೀಸರಿಂದ ಮಾಜಿ ಮೇಯರ್ ಸಂಪತ್ ರಾಜ್ ವಿಚಾರಣೆ

14/09/2020: ಮೊದಲ ಬಾರಿಗೆ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲು

3/10/2020: ಸಂಪತ್ ರಾಜ್ ಆಸ್ಪತ್ರೆಯಿಂದ ಡಿಸ್ಚಾರ್ಜ್

4/10/2020: ಎರಡನೇ ಬಾರಿಗೆ ಆಸ್ಪತ್ರೆ ಸೇರಿದ ಸಂಪತ್ ರಾಜ್

14/10/2020: ಎರಡನೇ ಬಾರಿ ಸಂಪತ್ ರಾಜ್ ಡಿಸ್ಚಾರ್ಜ್ ಆಗಿ ಜಾಮೀನು‌ ಅರ್ಜಿ ಸಲ್ಲಿಕೆ

16/10/2020: ಜಾಮೀನು ಅರ್ಜಿ ತಿರಸ್ಕೃತ ಹಿನ್ನೆಲೆ ಮತ್ತೆ ಆಸ್ಪತ್ರೆಗೆ ದಾಖಲು

17/10/2020: ಸಂಪತ್ ರಾಜ್ ಡಿಸ್ಚಾರ್ಜ್ ಬಗ್ಗೆ ಮಾಹಿತಿ ಕೋರಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ನೋಟೀಸ್ ಕೊಟ್ಟ ಸಿಸಿಬಿ.

23/10/2020: ಡಿಸ್ಚಾರ್ಜ್ ಆಗಿ ತಲೆ ಮರೆಸಿಕೊಂಡು ಸಂಪತ್ ರಾಜ್ ಪರಾರಿ

Recommended Video

      Nike ಬಿಟ್ಟು MPLಗೆ ಇನ್ಮುಂದೆ ಟೀಮ್ ಇಂಡಿಯಾದ ಉಡುಪುಗಳ ಜವಾಬ್ದಾರಿ | Oneindia Kannada

      16/11/2020: ಸಂಪತ್ ರಾಜ್ ಬಂಧನ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+