Get Updates
Get notified of breaking news, exclusive insights, and must-see stories!

ಬೆಂಗಳೂರಿನ ಆರ್‌ಟಿ ನಗರದಲ್ಲಿದೆ 'ಎಕ್ಸ್ ಗರ್ಲ್‌ಫ್ರೆಂಡ್ ಬಂಗಾರಪೇಟೆ ಚಾರ್ಟ್ಸ್': ಒಮ್ಮೆ ಭೇಟಿ ನೀಡಿ

ಬೆಂಗಳೂರು ಜನವರಿ 30: ಬೆಂಗಳೂರಿನಲ್ಲಿ ಸಂಜೆ ಆದರೆ ಸಾಕು ಚಾರ್ಟ್ ಅಂಗಡಿಗಳು ಓಪನ್ ಆಗಲು ಶುರು ಆಗುತ್ತವೆ. ಜನರನ್ನು ತಮ್ಮತ್ತ ಸೆಳೆಯಲು ಬಗೆ ಬಗೆಯ ಚಾರ್ಟ್‌ಗಳನ್ನು ಒದಗಿಸುತ್ತವೆ. ಶುಚಿ ರುಚಿಯೊಂದಿಗೆ ಗ್ರಾಹಕರಿಗೆ ವಿಶೇಷ ಹಾಗೂ ವಿನೂತನವಾದ ಖಾದ್ಯಗಳನ್ನು ಉಣಬಡಿಸುವಲ್ಲಿ ಈ ಚಾರ್ಟ್‌ ಸೆಂಟರ್‌ಗಳು ಇಂದಿಗೂ ಹಿಂದೆ ಉಳಿದಿಲ್ಲ. ಆದರೀಗ ಹೊಸ ವಿಚಾರ ಏನಪಾ ಅಂದರೆ ಚಾರ್ಟ್‌ ಸೆಂಟರ್‌ಗಳ ಹೆಸರಿನ ಮೂಲಕ ಗ್ರಾಹಕರನ್ನು ಸೆಳೆಯುವುದು ಕಂಡು ಬರುತ್ತಿದೆ.

ಹೌದು... ಬೆಂಗಳೂರಿನ ಆರ್‌ಟಿ ನಗರದಲ್ಲಿನ ಚಾರ್ಟ್‌ ಸೆಂಟರ್‌ವೊಂದರ ಹೆಸರು ನೋಡುಗರ ಗಮನ ಸೆಳೆದಿದೆ. ಇದರ ಹೆಸರು ಹೀಗಿದೆ- 'ಎಕ್ಸ್ ಗರ್ಲ್‌ಫ್ರೆಂಡ್ ಬಂಗಾರಪೇಟೆ ಚಾರ್ಟ್ಸ್'. ನಾವೆಲ್ಲಾ ಬಂಗಾರಪೇಟೆ ಚಾರ್ಟ್ ಹೆಸರು ಕೇಳಿದ್ದೇವೆ. ಆದರೆ ಇದ್ಯಾವುದಪ್ಪ ಎಕ್ಸ್ ಗರ್ಲ್‌ಫ್ರೆಂಡ್ ಬಂಗಾರಪೇಟೆ ಚಾರ್ಟ್ಸ್ ಅಂತ ನೆಟ್ಟಿಗರು ಕಣ್ಣು ಉಜ್ಜಿಕೊಂಡು ನೋಡಿದ್ದಾರೆ.

Ex Girlfriend Bangarapete Charts in RT Nagar, Bangalore: visit once

ಸಾಮಾಜಿಕ ಜಾಲತಾಣದಲ್ಲಿ ಈ ಹೆಸರು ಸಾಕಷ್ಟು ವೈರಲ್ ಆಗಿದ್ದು ಜನ ಬಿದ್ದು ಬಿದ್ದು ನಗಾಡಿದ್ದಾರೆ. ಜೊತೆಗೆ ತಮ್ಮ ಸ್ನೇಹಿತರಿಗೆ ಗೇಲಿ ಕೂಡ ಮಾಡಿದ್ದಾರೆ.

ವೈರಲ್ ಆದ ಚಾರ್ಟ್‌ ಸೆಂಟರ್‌ ಬೋರ್ಟ್ನಲ್ಲಿ ಏನಿದೆ:-

''ಶ್ರೀ ಲಕ್ಷ್ಮೀ ನರಸಿಂಹ

ಮೊಬೈಲ್ ನಂಬರ್: 8296401831, 9108964912

ಎಕ್ಸ್ ಗರ್ಲ್‌ಫ್ರೆಂಡ್ ಬಂಗಾರಪೇಟೆ ಚಾರ್ಟ್

Ex Girlfriend Bangarapete Charts

#563,Satish complec 1st main 1st block, R.T. Nagar Bangalore-560032''

ಏನೆಲ್ಲಾ ಸಿಗುತ್ತದೆ?

ಆರ್‌ ನಗರದ ಎಕ್ಸ್ ಗರ್ಲ್‌ಫ್ರೆಂಡ್ ಬಂಗಾರಪೇಟೆ ಚಾರ್ಟ್ಸ್ ನಲ್ಲಿ ಪಾನಿ ಪುರಿ, ಮಸಾಲ ಪೂರಿ, ದಹಿ ಪೂರಿ, ನಿಪ್ಪಟ್ಟು ಮಸಾಲ, ಸೇವ್ ಪುರಿ, ಬೇಲ್ ಪುರಿ, ಚಿಪ್ಸ್‌ ಮಸಾಲ ಇಲ್ಲಿ ಲಭ್ಯವಿದೆ. ದಹಿ ಪುರಿ ಒಂದು ಪ್ಲೇಟ್‌ಗೆ 50 ರೂಪಾಯಿ ಬೆಲೆ ಇದ್ದರೆ, ಉಳಿದ ಎಲ್ಲಾ ಚಾರ್ಟ್‌ಗೆ 40 ರೂಪಾಯಿ ಪ್ಲೇಟ್‌ಗೆ ದೊರೆಯುತ್ತದೆ.

Ex Girlfriend Bangarapete Charts in RT Nagar, Bangalore: visit once

ಈ ಹೆಸರು ನೋಡಿದ ಜನ ಮುಸುಮುಸು ನಗಾಡಿದ್ದಾರೆ. ಈ ಹೆಸರು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಹೆಸರಿನಿಂದ ಗ್ರಾಹಕರನ್ನು ಆಕರ್ಷಿಸುವುದು ತುಂಬಾ ವಿರಳ. ಆದರೆ ಈ ರೀತಿ ವಿಭಿನ್ನವಾಗಿ ಗ್ರಾಹಕರನ್ನು ಆಕರ್ಷಿಸುವುದು ಒಂದು ಕಲೆ ಎನ್ನದೇ ಬೇರೇನು ಅಲ್ಲ. ಇದನ್ನು ನೋಡಿದ ಜನ ಹೊಟ್ಟೆ ಹುಣ್ಣಾಗಿಸುವಷ್ಟು ನಗಾಡಿದ್ದಾರೆ. ಜೊತೆಗೆ ಯಾರು ಈ ಚಾರ್ಟ್‌ ಸೆಂಟರ್‌ಗೆ ಹೋಗುತ್ತಿರೋ ಅವರು ಎಕ್ಸ್ ಗರ್ಲ್‌ಫ್ರೆಂಡ್ ಜೊತೆಗೆ ಹೋಗಿ ಅಂತ ಗೇಲಿ ಮಾಡಿದ್ದಾರೆ.

ಇನ್ನೂ ಕೆಲವರು ಇಲ್ಲಿಗೆ ಹೋದವರೆಲ್ಲರೂ ಎಕ್ಸ್ ಗರ್ಲ್‌ಫ್ರೆಂಡ್ ಜೊತೆ ಹೋದಂತೆ ಭಾವಿಸಲಾಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇದು ನಿಜನಾ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ನೋಡುಗರ ನಗಪಾಟಲೆಗೆ ಗುರಿಯಾಗಿದೆ. ಈ ಕಾಮಿಡಿ ಹೆಸರಿನ ಚಾರ್ಟ್‌ ಸೆಂಟರ್‌ಗೆ ನೀವು ಕೂಡ ಭೇಟಿ ಕೊಡಿ. ಆದರೆ ಜೊತೆಗೆ ನಿಮ್ಮ ಗರ್ಲ್‌ಫ್ರೆಂಡ್ ಅನ್ನು ಕರೆದುಕೊಂಡು ಹೋಗಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+