• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಮುಖಂಡ ಎನ್.ಎಸ್. ವಿನಯ್ ನಿರ್ಮಾಣದಲ್ಲಿ ನೂತನ ಕನ್ನಡ ಚಲನಚಿತ್ರ

By Nayana Bj
|

ಬೆಂಗಳೂರು, ಡಿಸೆಂಬರ್ 20 : ಬಿಜೆಪಿ ಮುಖಂಡ ಎನ್.ಎಸ್. ವಿನಯ್ ಅವರ ನಿರ್ದೇಶನದಲ್ಲಿ ' ಮೂರು ಬಿಟ್ಟವರು ಊರಿಗೆ ದೊಡ್ಡವರು' ಕನ್ನಡ ಚಲನಚಿತ್ರ ಮೂಡಿಬರಲಿದೆ. ಶೀರ್ಷಿಕೆಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಸ್ತು ಎಂದಿದೆ.

ಈಶ್ವರಪ್ಪ ಪಿಎ ಅಪಹರಣ ಯತ್ನ ಕೇಸ್, ಚಾರ್ಜ್ ಶೀಟ್ ಸಲ್ಲಿಕೆಈಶ್ವರಪ್ಪ ಪಿಎ ಅಪಹರಣ ಯತ್ನ ಕೇಸ್, ಚಾರ್ಜ್ ಶೀಟ್ ಸಲ್ಲಿಕೆ

ಕಥಾ ನಾಯಕ ವಿನಯ್ ಒಬ್ಬ ರಾಜಕೀಯ ವ್ಯಕ್ತಿಯ ಜತೆಗೆ ಕೆಲಸ ಮಾಡಿಕೊಂಡಿರುತ್ತಾನೆ. ಕ್ರಮೇಣ ರಾಜಕೀಯದ ಎಲ್ಲಾ ಪಟ್ಟುಗಳನ್ನು ಕಲಿತುಕೊಳ್ಳುತ್ತಾನೆ.

ಇದನ್ನು ಅರಿತ ಇತರೆ ರಾಜಕೀಯ ನಾಯಕರು ಇವನನ್ನು ಹೀಗೆ ಬಿಟ್ಟರೆ ಮುಂದೆ ದೊಡ್ಡ ನಾಯಕನಾಗುತ್ತಾನೆ ಎಂದು ತಿಳಿದು ಒಂದು ದಿನ ಅವನನ್ನು ಸಾಯಿಸಲು ಪ್ರಯತ್ನಿಸುತ್ತಾರೆ.

ಅದೃಷ್ಟ ವಶಾತ್ ಅಪಾಯದಿಂದ ಪಾರಾದ ವಿನಯ್ ತನ್ನ ಚಾಣಾಕ್ಷ ಬುದ್ಧಿಯಿಂದ ಅವರ ಜತೆಗೆ ಇದ್ದ ಅವರನ್ನೆಲ್ಲಾ ರಾಜಕೀಯದಿಂದಲೇ ನಿವೃತ್ತಿ ಯಾಗುವಂತೆ ಮಾಡಿ, ಮುಂದೆ ಒಳ್ಳೆಯ ಸಮಾಜಮುಖಿ ನಾಯಕನಾಗಿ ಜನ ಸೇವೆಯಲ್ಲಿ ತೊಡಗುತ್ತಾನೆ ಇದು ಕಥೆಯ ಸಾರಾಂಶವಾಗಿದೆ.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಡಿ.18ರಂದು 'ಮೂರು ಬಿಟ್ಟವರು ಊರಿಗೆ ದೊಡ್ಡವರು' ಶೀರ್ಷಿಕೆಯಲ್ಲಿ ಚಿತ್ರ ನೋಂದಾಯಿಸಿದ್ದಾರೆ.

ಈಶ್ವರಪ್ಪ ಪಿಎ ಅಪಹರಣ ಯತ್ನ, ಎನ್.ಆರ್.ಸಂತೋಷ್ ವಿಚಾರಣೆಈಶ್ವರಪ್ಪ ಪಿಎ ಅಪಹರಣ ಯತ್ನ, ಎನ್.ಆರ್.ಸಂತೋಷ್ ವಿಚಾರಣೆ

ಕನ್ನಡ ಚಲನಚಿತ್ರದ ಪೂರ್ಣ ಕಥೆ ಸ್ವಂತವಾಗಿದ್ದು ಬೇರೆ ಭಾಷೆಯವರು ಬರೆದ ನಾಟಕ, ಕಥೆ, ಕಾದಂಬರಿ, ಚಲನಚಿತ್ರ ಅಥವಾ ಬೇರೆ ಯಾವುದೇ ಭಾಷೆಯ ಸಾಹಿತ್ಯ ರೂಪಾಂತರ ಅಥವಾ ಭಾಷಾಂತರ ಅಲ್ಲವೆಂದು ತಿಳಿಸಿದ್ದಾರೆ ವಿನಯ್ ತಿಳಿಸಿದ್ದಾರೆ.

ಮೆ. ಶೋಭ ರಾಜಕೀಯ ಪ್ರೊಡಕ್ಷನ್ ಸಂಸ್ಥೆಯ ಹೆಸರಿನಲ್ಲಿ ಸಂಸ್ಥೆಯನ್ನು ನೋಂದಣಿ ಮಾಡಲಾಗಿದೆ. ಮುಂದಿನ ಒಂದು ವರ್ಷದವರೆಗೆ ಹೆಸರು ಚಾಲ್ತಿಯಲ್ಲಿರಲಿದೆ. ಈ ಚಲನಚಿತ್ರಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಸ್ತು ಎಂದಿದೆ.

English summary
BJP leader and KS Eshwarappa follower NS Vinay, who filed FIR against NR Santosh, personala assistant of BJP state president BS Yeddyurappa in now making Kannada movie called 'Mooru bittavaru oorige doddavaru'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X