• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೀನಾ ಮೂಲದ ವಂಚಕ ಕಂಪನಿಗೆ ಇಡಿ ಶಾಕ್- 5.85 ಕೋಟಿ ವಶಕ್ಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03: ನಿರುದ್ಯೋಗಿ ಯುವಕರಿಗೆ ಪಾರ್ಟ್ ಟೈಂ ಕೆಲಸದ ಭರವಸೆ ನೀಡಿ ವಂಚನೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ ವಂಚಕ ಚೀನ ಮೂಲದ ಕಂಪನಿಗೆ ಶಾಕ್‌ ನೀಡಿದೆ. 12 ಕಡೆಗಳಲ್ಲಿ ದಾಳಿ ನಡೆಸಿದ್ದ ಇ.ಡಿಯಿಂದ 5.85 ಕೋಟಿ ರೂ ಜಪ್ತಿ ಮಾಡಲಾಗಿದೆ.

ಚೀನ ಮೂಲದ ವ್ಯಕ್ತಿಗಳು ಕೀಪ್ ಶೇರರ್ ಎಂಬ ಕಂಪನಿಯನ್ನು ತೆರೆಯಲ್ಪಟ್ಟಿದ್ದರು. ಈ ಕಂಪನಿಯ್ಲಿ ನಿರುದ್ಯೋಗಿ ಯುವಕರಿಗೆ ಕೆಲಸ ಕೊಡುವುದಾಗಿ ಆಮಿಷವನ್ನು ಒಡ್ಡಲಾಗಿತ್ತು. ನೂರಾರು ಯುವಕರು ಕೆಲಸದ ಆಸೆಗೆ ರಿಜಿಸ್ಟ್ರೇಷನ್ ಮಾಡಿದ್ದರು. ರಿಜಿಸ್ಟ್ರೇಷನ್ ಸಮಯದಲ್ಲಿ ಹಣವನ್ನು ಕಟ್ಟಬೇಕಿತ್ತು. ಕಂಪನಿಯು ಸಂಬಳದ ಆಸೆಯನ್ನು ತೋರಿಸಿ ಭಾರತೀಯರನ್ನೇ ಭಾಷಾಂತರ ಮಾಡಲು, ಎಚ್.ಆರ್, ನಿರ್ದೇಶಕರಾಗಿ ನೇಮಿಸಿತ್ತು. ನೇಮಕವಾದ ಮೂಲ ದಾಖಲೆಗಳನ್ನು ಪಡೆದು ಬ್ಯಾಂಕ್ ಖಾತೆಗಳನ್ನ ತೆರೆದಿತ್ತು. ಈ ವಂಚಕ ಪಂಪನಿಯ ವಿರುದ್ದ ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ದಾಖಲಾಗಿತ್ತು.

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ: ಬೆಂಗಳೂರಿನಲ್ಲಿ ಸೆ.22ಕ್ಕೆ ನಿರುದ್ಯೋಗಿ ಯುವಜನರ ಸಮಾವೇಶ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ: ಬೆಂಗಳೂರಿನಲ್ಲಿ ಸೆ.22ಕ್ಕೆ ನಿರುದ್ಯೋಗಿ ಯುವಜನರ ಸಮಾವೇಶ

ದೇಶಾದಾದ್ಯಂತ ಚೀನ ಮೂಲದ ಕೆಲವು ಆಪ್ ಗಳನ್ನು ಬಂದ್ ಮಾಡಲಾಗಿದೆ. ಆದರೂ ಕೆಲವು ಆಪ್‌ಗಳ ಮೂಲಕ ವಂಚನೆ ಮಾಡುವ ಹೊಸ ಹೊಸ ವಿಧಾನವನ್ನು ಕಂಡು ಹಿಡಿಯಲಾಗುತ್ತಿದೆ. ದೇಶದಲ್ಲಿದ್ದುಕೊಂಡು ದೇಶದ ನಿವಾಸಿಗಳ ಸಹಾಯವನ್ನು ಪಡೆದುಕೊಂಡು ಹಣವನ್ನು ಕದಿಯುವ ಮೂಲಕ ತಮ್ಮ ದೇಶಕ್ಕೆ ಹಣ ವರ್ಗಾಯಿಸುತ್ತಿದ್ದ ಜಾಲಕ್ಕೆ ಇಡಿ ಶಾಕ್ ಅಂತು ನೀಡಿದೆ.

ಬೆಂಗಳೂರು ಮೂಲದ ಕೆಲ ಖಾತೆಗಳಿಂದ ವರ್ಗ

ಬೆಂಗಳೂರು ಮೂಲದ ಕೆಲ ಖಾತೆಗಳಿಂದ ವರ್ಗ

ಕೀಪ್ ಶೇರರ್ ಎಂಬ ಕಂಪನಿ ವಾಟ್ಸ್ಯಾಪ್, ಟೆಲಿಗ್ರಾಂ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗದ ಭರವಸೆ ನೀಡುತ್ತಿದ್ದರು. ಕೀಪ್ ಶೇರರ್ ಹೆಸರಿನ ಆ್ಯಪ್ ಮೂಲಕ ಯುವಕರನ್ನು ನೊಂದಣಿ ಮಾಡಿಸುತ್ತಿತ್ತು. ರಿಜಿಸ್ಟ್ರೇಷನ್ ಶುಲ್ಕವಾಗಿ ಹಣವನ್ನು ಪಡೆದುಕೊಳ್ಳುತ್ತಿದ್ದರು. ಬಳಿಕ ಸೆಲೆಬ್ರಿಟಿ ವಿಡಿಯೋ ಲೈಕ್, ಶೇರ್ ಮಾಡುವ ಕೆಲಸ ನೀಡುತ್ತಿತ್ತು. ಪ್ರತಿಯಾಗಿ ವಿಡಿಯೋಗೆ 20ರೂನಂತೆ ಆರಂಭದಲ್ಲಿ ಹಣ ನೀಡಲಾಗುತ್ತಿತ್ತು. ಕೆಲವೇ ದಿನಗಳಲ್ಲಿ ಕೀಪ್ ಶೇರರ್ ಗೂಗಲ್ ಪ್ಲೇ ಸ್ಟೋರ್ ನಿಂದ ಕಾಣೆಯಾಗಿತ್ತು. ಬಳಕೆದಾರರಿಂದ ಪಡೆದ ಹಣವನ್ನು ಬೆಂಗಳೂರು ಮೂಲದ ಕೆಲ ಖಾತೆಗಳಿಂದ ವರ್ಗಾಯಿಸಲಾಗಿತ್ತು.

 ಜನ ಚೀನಾ ಹಾಗೂ ತೈವಾನ್ ಮೂಲದವರ ಬಂಧನ

ಜನ ಚೀನಾ ಹಾಗೂ ತೈವಾನ್ ಮೂಲದವರ ಬಂಧನ

ಚೈನಾ ಮೂಲದ ಖಾತೆಗಳಿಗೆ ಕ್ರಿಪ್ಟೋ ರೂಪದಲ್ಲಿ ಕಂಪನಿ ಹಣ ವರ್ಗಾಯಿಸಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು 92 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. 92 ಪೈಕಿ ಪ್ರಮುಖ 6 ಜನ ಚೀನಾ ಹಾಗೂ ತೈವಾನ್ ಮೂಲದವರಾಗಿದ್ದರು. ವಿದೇಶಿ ವರ್ಗಾವಣೆ ಪತ್ತೆಯಾದ ಬಳಿಕ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ತನಿಖೆಯನ್ನು ನಡೆಸಿತ್ತು.

ಇ.ಡಿಯಿಂದ 5.85 ಕೋಟಿ ರೂ ಜಪ್ತಿ

ಇ.ಡಿಯಿಂದ 5.85 ಕೋಟಿ ರೂ ಜಪ್ತಿ

ಚೀನ ಮೂಲಕದ ಕಂಪನಿಯ ವಿರುದ್ದ ಇಡಿ ತನಿಖೆಯನ್ನು ಕೈಗೊಂಡಿತ್ತು. ಅಕ್ರಮ ವಿದೇಶಿ ಹಣ ವರ್ಗಾವಣೆ ಪ್ರಕರಣದ ತನಿಖೆ ಚುರುಕುಗೊಂಡಿತ್ತು. ತನಿಖೆಯಲ್ಲಿ ಕಂಪನಿಯ ಮೋಸದ ಜಾಲ ಬಯಲಾಗಿತ್ತು. ಇದರಿಂದಾಗಿ ನಿರುದ್ಯೋಗಿ ಯುವಕರಿಗೆ ಪಾರ್ಟ್ ಟೈಂ ಕೆಲಸದ ಭರವಸೆ ನೀಡಿ ವಂಚನೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ ವಂಚಕ ಚೀನ ಮೂಲದ ಕಂಪನಿಗೆ ಶಾಕ್‌ ನೀಡಿದೆ. 12 ಕಡೆಗಳಲ್ಲಿ ದಾಳಿ ನಡೆಸಿದ್ದ ಇ.ಡಿಯಿಂದ 5.85 ಕೋಟಿ ರೂ ಜಪ್ತಿ ಮಾಡಲಾಗಿದೆ.

ದಕ್ಷಿಣ ವಿಭಾಗದ ಸೈಬರ್ ಪೊಲೀಸರು ಉತ್ತಮ ಕಾರ್ಯ

ದಕ್ಷಿಣ ವಿಭಾಗದ ಸೈಬರ್ ಪೊಲೀಸರು ಉತ್ತಮ ಕಾರ್ಯ

ದೇಶಾದಾದ್ಯಂತ ಚೀನಾ ಮೂಲದ ಕೆಲವು ಆಪ್ ಗಳನ್ನು ಬಂದ್ ಮಾಡಲಾಗಿದೆ. ಆದರೂ ಕೆಲವು ಆಪ್‌ಗಳ ಮೂಲಕ ವಂಚನೆ ಮಾಡುವ ಹೊಸ ಹೊಸ ವಿಧಾನವನ್ನು ಕಂಡು ಹಿಡಿಯಲಾಗುತ್ತಿದೆ. ದೇಶದಲ್ಲಿದ್ದುಕೊಂಡು ದೇಶದ ನಿವಾಸಿಗಳ ಸಹಾಯವನ್ನು ಪಡೆದುಕೊಂಡು ಹಣವನ್ನು ಕದಿಯೋ ಮೂಲಕ ತಮ್ಮ ದೇಶಕ್ಕೆ ಹಣ ವರ್ಗಾಯಿಸುತ್ತಿದ್ದ ಜಾಲಕ್ಕೆ ಇಡಿ ಶಾಕ್ ಅಂತು ನೀಡಿದೆ. ಇಡಿ ತನಿಖೆಯನ್ನು ಮುಂದುವರೆಸಿದ್ದು ಮತ್ತಷ್ಟು ವಂಚಕ ಕಂಪನಿಗಳು ಸಿಕ್ಕಿಬೀಳುವ ಸಾಧ್ಯತೆಗಳಿವೆ. ಅದೇನಾದರು ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಪೊಲೀಸರು ಉತ್ತಮ ಕಾರ್ಯವನ್ನು ಮಾಡಿ ಇ.ಡಿಗೆ ಪ್ರಕರಣ ನೀಡಿದ್ದರ ಫಲವಂತು ಸಿಕ್ಕಿದೆ.

English summary
Fraud related case by promising part-time job to unemployed youth The Enforcement Directorate has given a shock to the fraudulent China-based company. 5.85 crore was seized from ED who raided 12 places, Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X