ಸರ್ಕಾರಿ ಕಚೇರಿಗಳ ಎದುರು ಆರಂಭವಾಗಲಿವೆ ಎಲೆಕ್ಟ್ರಿಕ್ ಚಾರ್ಜಿಂಗ್ ಘಟಕ
ಬೆಂಗಳೂರು, ಜನವರಿ 26: ಬೆಂಗಳೂರಲ್ಲಿ ದಿನೇ ದಿನೇ ವಾಯುಮಾಲಿನ್ಯ ಹೆಚ್ಚಾಗಿ ರೋಗಗಳನ್ನು ಹೆಚ್ಚು ಮಾಡುತ್ತಿದೆ. ಹಾಗಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಬಳಸಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ.
ಇದೀಗ ಬೆಂಗಳೂರಿನಲ್ಲಿರುವ ಸರ್ಕಾರಿ ಸಂಸ್ಥೆಗಳಲ್ಲಿ ಎಲೆಕ್ಟ್ರಿಕ್ವಾಹನಗಳ ಬಳಕೆಯನ್ನು ಉತ್ತೇಜಿಸುವ ಸಲುಆಗಿ ಪ್ರಮುಖ ಕಚೇರಿಗಳಲ್ಲಿ 100 ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲು ಬೆಸ್ಕಾಂ ಟೆಂಡರ್ ಆಹ್ವಾನಿಸಿದೆ.
ಬಿಡಿ, ಬಿಎಂಟಿಸಿ, ಬಿಬಿಎಂಪಿ, ಮೆಟ್ರೋ ಹಾಗೂ ಜಲಮಂಡಳಿ ಕಚೇರಿಗಳಲ್ಲಿ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ಕಚೇರಿಯಲ್ಲಿ ಒಂದೊಂದು ಘಟಕ ಸ್ಥಾಪನೆಯಾಗಲಿದ್ದು, ಒಮ್ಮೆ ತಲಾ ಮೂರು ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳ ಚಾರ್ಜಿಂಗ್ ಗೆ ಅವಕಾಶವಿದೆ. ಟೆಂಡರ್ ಬಿಡ್ ದಾಖಲೆ ಫೆ.22ಕ್ಕೆ ಕೊನೆಯ ದಿನವಾಗಿರುತ್ತದೆ.

ನೂರು ಚಾರ್ಜಿಂಗ್ ಕೇಂದ್ರಗಳನ್ನು ಹೊರತುಪಡಿಸಿ ಬೆಸ್ಕಾಂ ತನ್ನ ನಾನಾ ವಿಭಾಗ, ಉಪ ವಿಭಾಗಗಳಲ್ಲಿ 12 ಚಾರ್ಜಿಂಗ್ ಘಟಕಗಳ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆಗೆ ವೇಗ ನೀಡಿದೆ.












Click it and Unblock the Notifications