ನಮ್ಮ ಮೆಟ್ರೋ ಫೀಡರ್ ಸೇವೆಗೆ ಎಲೆಕ್ಟ್ರಿಕ್ ಬಸ್: ವಿಶೇಷತೆ ಏನು?

ಬೆಂಗಳೂರು, ಫೆಬ್ರವರಿ 12: ನಮ್ಮ ಮೆಟ್ರೋ ಫೀಡರ್ ಸೇವೆಗೆ ಇನ್ನುಮುಂದೆ ಎಲೆಕ್ಟ್ರಿಕ್ ಬಸ್ ಸೇವೆ ಲಭ್ಯವಾಗಲಿದೆ.

ಇದಕ್ಕೆ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನಿಂದ 50 ಕೋಟಿ ರೂ. ಅನುದಾನ ದೊರೆಯಲಿದೆ.ಬಿಎಂಟಿಸಿ ಮಾತೃ ಸಂಸ್ಥೆಯಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬಿಎಂಟಿಸಿ ಪರವಾಗಿ ಗುತ್ತಿಗೆ ಮಾದರಿಯಡಿ 90 ಎಲೆಕ್ಟ್ರಿಕ್ ಬಸ್ ಪಡೆಯುವ ಸಂಬಂಧ ಟೆಂಡರ್ ಆಹ್ವಾನಿಸಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷಾಂತ್ಯದ ವೇಳೆಗೆ ರಾಜಧಾನಿಯಲ್ಲಿ ಎಲೆಕ್ಟ್ರಿಕ್ ಬಸ್ ಮೆಟ್ರೋ ಫೀಡರ್ ಸೇವೆ ಲಭ್ಯವಾಗಲಿದೆ.ಗುತ್ತಿಗೆ ಮಾದರಿಯಡಿ ಪಡೆಯಲು ಉದ್ದೇಶಿಸಿರುವ 90 ಎಲೆಕ್ಟ್ರಿಕ್ ಬಸ್‌ಗಳು 9 ಮೀಟರ್ ಉದ್ದವಿರಲಿದ್ದು 35 ಆಸನಗಳ ವ್ಯವಸ್ಥೆ ಹೊಂದಿರಲಿದೆ.

ಈ ಬಸ್‌ಗಳಲ್ಲಿ ಏಕ ದ್ವಾರ ಮಾತ್ರ ಇರಲಿದ್ದು , ಹವಾನಿಯಂತ್ರಿತ ವ್ಯವಸ್ಥೆ ಇರುವುದಿಲ್ಲ. ಆದರೆ, ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ, ಸ್ಪೀಕರ್, ಪ್ಯಾಸೆಂಜರ್ ಡಿಸ್‌ಪ್ಲೇ ಬೋರ್ಡ್ , ಆಂಪ್ಲಿಫೈಯರ್, ಪ್ಯಾನಿಕ್ ಬಟನ್ ವ್ಯವಸ್ಥೆ ಇರಲಿದೆ.

 ಬಸ್‌ನ ಉದ್ದ, ಸಾಮರ್ಥ್ಯವೆಷ್ಟು?

ಬಸ್‌ನ ಉದ್ದ, ಸಾಮರ್ಥ್ಯವೆಷ್ಟು?

ಮೆಟ್ರೋ ನಿಲ್ದಾಣದ ಸುತ್ತ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಗೊಳ್ಳಲಿದೆ. ಬಸ್‌ 9 ಮೀಟರ್ ಉದ್ದವಿರಲಿದೆ. 35 ಆಸನ ಸಾಮರ್ಥ್ಯ ಹೊಂದಿರಲಿದೆ. 10-15 ಕಿ.ಮೀ ಮೆಟ್ರೋ ನಿಲ್ದಾಣದ ಸುತ್ತ ಸೇವೆ ಲಭ್ಯವಿರಲಿದೆ.

 ನಿರ್ವಹಣೆ ಹೊಣೆ ಕಂಪನಿಯೇ ಹೊರಬೇಕು

ನಿರ್ವಹಣೆ ಹೊಣೆ ಕಂಪನಿಯೇ ಹೊರಬೇಕು

ಬಿಎಂಟಿಸಿಗೆ ಎಲೆಕ್ಟ್ರಿಕ್ ಬಸ್ ಸೇವೆ ಹೊಸದಾಗಿರುವುದರಿಂದ ಗುತ್ತಿಗೆ ಮಾದರಿಯಲ್ಲಿ ಬಸ್ ಪಡೆದು ಕಾರ್ಯಾಚರಣೆಗೊಳಿಸಲು ತೀರ್ಮಾನಿಸಲಾಗಿದೆ. ಆರಂಭದಲ್ಲಿ 10 ವರ್ಷಗಳಿಗೆ ಗುತ್ತಿಗೆ ನೀಡಿ ಬಳಿಕ ಕಂಪನಿಯ ಸೇವೆ ಉತ್ತಮವಾಗಿದ್ದರೆ ಮತ್ತೆರೆಡು ವರ್ಷ ವಿಸ್ತರಣೆಗೆ ಅವಕಾಶವಿದೆ.

 ಗುತ್ತಿಗೆ ಪಡೆಯುವ ಕಂಪನಿಗಳ ಕಲಸವೇನು?

ಗುತ್ತಿಗೆ ಪಡೆಯುವ ಕಂಪನಿಗಳ ಕಲಸವೇನು?

ಗುತ್ತಿಗೆ ಪಡೆದುಕೊಳ್ಳುವ ಕಂಪನಿ ಬಸ್‌ಗಳ ಪೂರೈಕೆ ಜತೆಗೆ ಕಾರ್ಯಾಚರಣೆ ಹಾಗೂ ನಿರ್ವಹಣೆ ಮಾಡಬೇಕು. ಬಿಎಂಟಿಸಿಯು ಚಾರ್ಜಿಂಗ್ ಘಟಕಗಳಿಗೆ ವಿದ್ಯುತ್ ಪೂರೈಸಲಿದೆ. ಗುತ್ತಿಗೆ ವೇಳೆ ಪ್ರತಿ ಕಿ.ಮೀಗೆ ನಿಗದಿಯಾಗುವ ದರವನ್ನು ಕಂಪನಿಗೆ ಭರಿಸಲಿದೆ.

 ಫೇಮ್ ಯೋಜನೆಯಡಿ 300 ಎಲೆಕ್ಟ್ರಿಕ್ ಬಸ್

ಫೇಮ್ ಯೋಜನೆಯಡಿ 300 ಎಲೆಕ್ಟ್ರಿಕ್ ಬಸ್

ಕೇಂದ್ರದ ಫೇಮ್ ಯೋಜನೆಯ ಎರಡನೇ ಹಂತದ ಅನುದಾನ ಬಳಸಿಕೊಂಡು ಗುತ್ತಿಗೆ ಮಾದರಿಯಡಿ 300 ಎಲೆಕ್ಟ್ರಿಕ್ ಬಸ್ ಪಡೆಯಲು ಮರು ಟೆಂಡರ್ ಕರೆಯಲಾಗಿದೆ. ಈ ಹಿಂದೆ ಕರೆಯಲಾಗಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದ ಎರಡು ಕಂಪನಿಗಳ ಪೈಕಿ ಅಂತಿಮವಾಗಿ ಟೆಂಡರ್‌ನಲ್ಲಿ ಒಂದು ಕಂಪನಿ ಮಾತ್ರ ಉಳಿದಿತ್ತು. ಈ ಕಂಪನಿಯು ದುಬಾರಿ ಮೊತ್ತಕ್ಕೆ ಬಿಡ್ ಮಾಡಿದ್ದರಿಂದ ಟೆಂಡರ್ ರದ್ದುಗೊಳಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+