ರಾಜ್ಯದ ಪ್ರಮುಖ ನಗರಗಳಲ್ಲಿ ಇ ರಿಕ್ಷಾ ಓಡಾಟ!

ಬೆಂಗಳೂರು, ಮೇ 4 - ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಬೀದಿಗಿಳಿಸಲು ಪರಿಸರ ಮಾಲಿನ್ಯ
ನಿಯಂತ್ರಣ ಮಂಡಳಿ ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ಪರಿಸರ ಇಲಾಖೆ ಮುಖ್ಯಸ್ಥ ಡಾ. ವಾಮನಾಚಾರ್ಯ ಹೇಳಿದ್ದಾರೆ.

ಇನ್ನೊಂದು ವರ್ಷದಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಇ ಆಟೋರಿಕ್ಷಾಗಳು ಬೀದಿಗಿಳಿಯಲಿವೆ ಎಂದು ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ. ವಾಮನಾಚಾರ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೆಲವು ಆಟೋ ಕಂಪನಿಗಳು ಇಂಥ ರಿಕ್ಷಾಗಳನ್ನು ಸಿದ್ದಪಡಿಸುತ್ತಿವೆ. ಏಕ ಕಾಲಕ್ಕೆ ರಸ್ತೆಗಿಳಿಯಲಿವೆ. ಇದರಿಂದ ನಗರ ಪ್ರದೇಶಗಳಲ್ಲಿನ ಪರಿಸರ ಮಾಲಿನ್ಯ ಕಾಪಾಡಲು ಸಹಕಾರಿಯಾಗುತ್ತವೆ.

ಪರಿಸರ ಮಾಲಿನ್ಯದಿಂದ ಪ್ರಮುಖ ನಗರ, ಪಟ್ಟಣ ಪ್ರದೇಶಗಳಲ್ಲಿ ಅಸ್ತಮಾ ಕಾಯಿಲೆಯಿಂದ ನರಳುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ನಗರ ಪ್ರದೇಶಗಳಲ್ಲಿನ ವಾಹನಗಳಿಂದ ಹೊರ ಹೊಮ್ಮುವ ಹೊಗೆಯನ್ನು ತಡೆಯಲು ಹತ್ತು ಹಲವು ಕ್ರಮ ಕೈಗೊಳ್ಳಲಾಗಿದೆ ಎಂದರು.

Electric Autos to ply in Bengaluru, Mysuru in Karnataka

ಜೊತೆಗೆ ದ್ವಿಚಕ್ರ ವಾಹನಗಳಿಗಿರುವ ಹಾರ್ನ್‌ಗಳನ್ನು ಕಿತ್ತು ಹಾಕುವ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ ಆದೇಶ ಹೊರ ಬೀಳಲಿದೆ. ದ್ವಿಚಕ್ರ ವಾಹನಗಳಲ್ಲಿ ಹಾರ್ನ್ ಬಳಕೆಯಿಂದ ಮಿತಿ ಮೀರಿದ ಶಬ್ದ ಮಾಲಿನ್ಯವಾಗುತ್ತಿದೆ. ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ ಎಂದರು.

ಬೆಂಗಳೂರು ಮೆಟ್ರೋ ರೈಲು ಸಂಚರಿಸುವ ಜಾಗಗಳಿಂದ ಸಮೀಪದಲ್ಲಿರುವ ಬಸ್ ನಿಲ್ದಾಣಗಳಿಗೆ ತೆರಳಲು ವಿದ್ಯುತ್ ಚಾಲಿತ ಆಟೋ, ಮಿನಿ ಬಸ್ ಸೇರಿದಂತೆ ಹಲವು ಬಗೆಯ ವಾಹನಗಳನ್ನು ಬಳಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿರುವುದಾಗಿ ಅವರು ಸ್ಪಷ್ಟ ಪಡಿಸಿದರು.

ನಗರ, ಪಟ್ಟಣ ಪ್ರದೇಶಗಳಲ್ಲಿ ಪರಿಸರ ಮಾಲಿನ್ಯದಿಂದ ಉಸಿರಾಟದ ಸಮಸ್ಯೆಗೆ ಹೆಚ್ಚಿನ ಜನ ತುತ್ತಾಗುತ್ತಿದ್ದಾರೆ. ಯುವಕ, ಯುವತಿಯರಿಗೆ ಹತ್ತರಿಂದ ಹದಿನೈದನೇ ವರ್ಷದಲ್ಲಿ ಗಂಟಲು ಶಕ್ತಿಯುತವಾಗುವ ಸಂದರ್ಭ. ಆದರೆ, ಪರಿಸರ ಮಾಲಿನ್ಯದ ಪರಿಣಾಮವಾಗಿ ಬೆಂಗಳೂರು ಒಂದರಲ್ಲಿಯೇ ಶೇ. 36ರಷ್ಟು ಯುವ ಜನ ಸಂಕಷ್ಟಕ್ಕೊಳಗಾಗಿದ್ದಾರೆ ಎಂದರು.

ಉಸಿರಾಟದ ತೊಂದರೆಯಿಂದ ಇವರೆಲ್ಲ ಬಳಲುತಿದ್ದಾರೆ. ಹೀಗಾಗಿ ಪರಿಸರ ಮಾಲಿನ್ಯ ನಿಯಂತ್ರಿಸುವ ಸಂಬಂಧ ಏನೇನು ಮಾಡಲು ಸಾಧ್ಯವಿದೆಯೋ ಆ ಎಲ್ಲ ಅಂಶಗಳ ಕುರಿತು ಸರ್ಕಾರಕ್ಕೆ ವಿವರ ನೀಡಿದ್ದೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+