ಎಲೆಕ್ಟ್ರಿಕ್ ಆಟೋಗಳಿಗೆ 1ಲಕ್ಷ ರೂ. ಸಬ್ಸಿಡಿ
ಬೆಂಗಳೂರು, ಮಾರ್ಚ್ 29: ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಎಲೆಕ್ಟ್ರಿಕ್ ಆಟೋ ಖರೀದಿಗೆ ಸಹಾಯ ಧನ ನೀಡಲು ನಿರ್ಧರಿಸಿದೆ.
ಎಲೆಕ್ಟ್ರಿಕ್ ಆಟೋ ಖರೀದಿಸುವವರಿಗೆ 1ಲಕ್ಷದ ವರೆಗೆ ಸಹಾಯಧನ ನೀಡಲು ಹೊಸ ಪ್ರಸ್ತಾವನೆಯೊಂದನ್ನು ಹಣಕಾಸು ಇಲಾಖೆ ಮುಂದೆ ಸಾರಿಗೆ ಇಲಾಖೆ ಇರಿಸಿದೆ. ಹಣಕಾಸು ಇಲಾಖೆ ಪ್ರಸ್ತಾವಣೆಯನ್ನು ಪರಿಶೀಲಿಸುತ್ತಿದ್ದು, ವರ್ಷಾಂತ್ಯಕ್ಕೆ ಈ ಸೌಲಭ್ಯ ದೊರಕುವ ನಿರೀಕ್ಷೆ ಇದೆ.
ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಆಟೋ ಬೆಲೆ 3.10ಲಕ್ಷ ರೂ ಇದೆ. ಹೀಗಾಗಿ ಹೆಚ್ಚಿನ ಸಬ್ಸಿಡಿ ದೊರೆತಲ್ಲಿ ಚಾಲಕರೂ ಎಲೆಕ್ಟ್ರಿಕ್ ಆಟೋ ಖರೀದಿಗೆ ಮುಂದಾಗಲಿದ್ದಾರೆ. ಎಲೆಕ್ಟ್ರಿಕ್ ಚಾಲಿತ ಸಾರಿಗೇತರ ಮತ್ತು ಸಾರಿಗೆ ವಾಹನಗಳಿಗೆ ರಸ್ತೆ ತೆರಿಗೆ ಪಾವತಿಯಿಂದ ವಿನಾಯಿತಿಯನ್ನು ಸಾರಿಗೆ ಇಲಾಖೆ ನೀಡಿದೆ.

ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ ಚಾಲಿತ 7,185 ದ್ವಿಚಕ್ರ ವಾಹನ, 4364 ಲಘು ಮೋಟಾರು ವಾಹನ ಮತ್ತು 135 ಲಘು ಸರಕು ವಾಹನ ಸೇರಿ ಒಟ್ಟು 11,684 ವಾಹನಗಳಿವೆ. ಜತೆಯಲ್ಲಿ 17 ಇ-ರಿಕ್ಷಾ, 57 ಇ-ಕಾರ್ಟ್ ರಾಜ್ಯದಲ್ಲಿದೆ. 11,684 ಇ-ವಾಹನಗಳಲ್ಲಿ 6,275 ವಾಹನಗಳು ಬೆಂಗಳೂರಿನಲ್ಲಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿರ್ವಹಣೆ ವೆಚ್ಚ ಕಡಿಮೆ: ಎಲ್‌ಪಿಜಿ ಅಥವಾ ಪೆಟ್ರೋಲ್ ಆಟೋಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಆಟೋ ಇಂಧನ ವೆಚ್ಚ ಮತ್ತು ನಿರ್ವಹಣಾ ವೆಚ್ಚ ತೀರಾ ಕಡಿಮೆ ಎನ್ನುತ್ತಾರೆ ಪೀಸ್ ಇವಿ ಮೋಟಾರ್ಸ್ ಸಿಬ್ಬಂದಿ. ಎಲ್‌ಪಿಜಿ ಆಟೋದಲ್ಲಿ ನಿತ್ಯ 100 ಕಿ.ಮೀ ಎಂದರೂ ತಿಂಗಳಿಗೆ 5727ರೂ ಎಲ್‌ಪಿಜಿಗೆ ಖರ್ಚಾಗುತ್ತದೆ. ಅದೇ ಎಲೆಕ್ಟ್ರಿಕ್ ಆಟೋದಲ್ಲಿ ತಿಂಗಳಿಗೆ 1446 ರೂ ವಿದ್ಯುತ್ ಖರ್ಚಾಗಲಿದೆ.












Click it and Unblock the Notifications