'ಸೆಲ್ಫಿ ಅಪ್‌ಲೋಡ್ ಮಾಡಿ, ಸರತಿ ಸಾಲಲ್ಲಿ ನಿಲ್ಲುವುದು ಬಿಡಿ': ಚುನಾವಣಾ ಆಯೋಗದ ಹೊಸ ಪ್ರಯೋಗ
ಬೆಂಗಳೂರು, ಮೇ. 08: ಭಾರತೀಯ ಚುನಾವಣಾ ಆಯೋಗ ಬೆಂಗಳೂರಿನ ಮತಗಟ್ಟೆಯಲ್ಲಿ ಮುಖ ಗುರುತಿಸುವ ತಂತ್ರಜ್ಞಾನವನ್ನು ಬಳಸಲಿದೆ. ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಈ ತಂತ್ರಜ್ಞಾನ ಬಳಸಲ್ಪಡುತ್ತಿದೆ. ಈ ವ್ಯವಸ್ಥೆಯನ್ನು ಒಂದು ಮತಗಟ್ಟೆಯಲ್ಲಿ ಪ್ರಾಯೋಗಿಕವಾಗಿ ನಡೆಸಲಾಗುವುದು ಎಂದು ಆಯೋಗ ಮಾಹಿತಿ ನೀಡಿದೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಳಿ ಅರಮನೆ ರಸ್ತೆಯಲ್ಲಿರುವ ಸರ್ಕಾರಿ ರಾಮನಾರಾಯಣ ಚೆಲ್ಲರಾಂ ಕಾಲೇಜಿನ ಕೊಠಡಿ ಸಂಖ್ಯೆ 2 ರಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ.

ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ..?
ಈ ಮತಗಟ್ಟೆಯಲ್ಲಿ ಮತದಾರರು ಚುನಾವಣಾ ಆಯೋಗದ ಚುನಾವಣ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ತಮ್ಮ ಮತದಾರರ ಫೋಟೋ ಗುರುತಿನ ಚೀಟಿ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಒಟಿಪಿಯನ್ನು ಹಾಕಿದ ಬಳಿಕ ಅವರು ಅಪ್ಲಿಕೇಶನ್ ಮೂಲಕ ಸೆಲ್ಫಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
ಮತದಾರರು ಮತಗಟ್ಟೆಯನ್ನು ತಲುಪಿದ ನಂತರ, ಪರಿಶೀಲನೆಗಾಗಿ ಅವರು ಮುಖ ಗುರುತಿಸುವಿಕೆ ಸ್ಕ್ಯಾನಿಂಗ್‌ಗೆ ಒಳಗಾಗುತ್ತಾರೆ. ಆಯೋಗದ ಡೇಟಾಬೇಸ್‌ನೊಂದಿಗೆ ಫೋಟೋ ಹೊಂದಾಣಿಕೆಯಾಗಿದ್ದರೆ, ಮತದಾರರು ಯಾವುದೇ ದಾಖಲೆಗಳನ್ನು ಒದಗಿಸುವ ಅಗತ್ಯವಿಲ್ಲದೆ ಅವರು ಮತ ಚಲಾವನೆ ಮಾಡಬೇಕು. ಈ ವ್ಯವಸ್ಥೆಯಿಂದಾಗಿ ಅವರು ಸರತಿ ಸಾಲಿನಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ. ನಕಲಿ ಮತದಾನ ಮತ್ತು ಚುನಾವಣಾ ಅಕ್ರಮಗಳನ್ನು ತಡೆಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಶಿವಾಜಿ ನಗರದಲ್ಲಿನ ಈ ಬೂತ್ ಅನ್ನು ಪ್ರಾಯೋಗಿಕ ಯೋಜನೆಗಾಗಿ ನಾವು ಗುರುತಿಸಿದ್ದೇವೆ .ಏಕೆಂದರೆ ಇದು ಇತರ ಬೂತ್‌ಗಳಲ್ಲಿ ಸುಮಾರು 1,500 ಮತದಾರರಿಗೆ ಹೋಲಿಸಿದರೆ ಕೇವಲ 300 ಮತದಾರರನ್ನು ಹೊಂದಿದೆ. ಇದರ ಜೊತೆಗೆ ಸಿಇಒ ಕಚೇರಿಗೆ ಹತ್ತಿರದಲ್ಲಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಈ ಮತಗಟ್ಟೆಯಲ್ಲಿನ ಎಲ್ಲಾ ಮತದಾರರ ಮನೆಗಳಿಗೆ ಭೇಟಿ ನೀಡಿ ಹೊಸ ತಂತ್ರಜ್ಞಾನವನ್ನು ವಿವರಿಸುತ್ತಿದ್ದಾರೆ. ಇದು ಕಡ್ಡಾಯವಲ್ಲ ಮತ್ತು ಈ ಸೌಲಭ್ಯವನ್ನು ಆಯ್ಕೆ ಮಾಡಲು ಬಯಸದವರು ಸಾಂಪ್ರದಾಯಿಕ ಮಾರ್ಗವನ್ನು ಅನುಸರಿಸಬಹುದು. ಇದರ ಪ್ರಯೋಜನ ಪಡೆಯುವ ಮತದಾರರಿಗೆ ಪ್ರತ್ಯೇಕ ಸರತಿ ಸಾಲು ಇರುತ್ತದೆ ಎಂದು ಕರ್ನಾಟಕ ವಿಶೇಷ ಅಧಿಕಾರಿ (ಚುನಾವಣೆ) ಎವಿ ಸೂರ್ಯ ಸೇನ್" ಮನಿ ಕಂಟ್ರೋಲ್‌ಗೆ ತಿಳಿಸಿದ್ದಾರೆ.

" ಈ ಮುಖ ಗುರುತಿಸುವ ತಂತ್ರಜ್ಞಾನದಿಂದಾಗಿ ಇದು ಮತದಾನಕ್ಕೆ ಸರತಿ ಸಮಯವನ್ನು ಕಡಿತಗೊಳಿಸುತ್ತದೆ. ಎರಡು, ಕಡಿಮೆ ಮಾನವಶಕ್ತಿಯ ಅಗತ್ಯವಿದೆ. ಉದಾಹರಣೆಗೆ, ಒಂದು ಬೂತ್‌ನಲ್ಲಿ ನಾಲ್ಕು ಪೋಲಿಂಗ್ ಅಧಿಕಾರಿಗಳ ಬದಲಿಗೆ, ಕೇವಲ ಮೂವರನ್ನು ಮಾತ್ರ ನಿಯೋಜಿಸಬಹುದು. ಏಕೆಂದರೆ ಹೆಚ್ಚಿನ ಪರಿಶೀಲನೆಯ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
2020 ರಲ್ಲಿ, ತೆಲಂಗಾಣ ರಾಜ್ಯ ಚುನಾವಣಾ ಆಯೋಗವು ಮೇಡ್ಚಲ್ ಮಲ್ಕಾಜ್‌ಗಿರಿ ಜಿಲ್ಲೆಯ ಕೊಂಪಲ್ಲಿ ಪುರಸಭೆಯ 10 ಮತಗಟ್ಟೆಗಳಲ್ಲಿ (ಸ್ಥಳೀಯ ಸಂಸ್ಥೆ ಚುನಾವಣೆಗಳು) ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಿದೆ. ಆ ಸಂದರ್ಭದಲ್ಲಿ, ಚುನಾವಣಾ ಸಿಬ್ಬಂದಿ ಸ್ಮಾರ್ಟ್‌ಫೋನ್ ಬಳಸಿ ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸಿದರು ಮತ್ತು ಮತ ಚಲಾಯಿಸಲು ಅವಕಾಶ ನೀಡಿದ್ದರು.
ಆ್ಯಪ್ ಮೂಲಕ ಪಾರ್ಕಿಂಗ್ ಸ್ಥಳ, ಮತಗಟ್ಟೆಗಳಲ್ಲಿ ಸರತಿ ಸಾಲನ್ನು ಪರಿಶೀಲಿಸಿ
ಮತದಾರರು ಚುನಾವಣಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮತಗಟ್ಟೆಗಳ ಬಳಿ ಪಾರ್ಕಿಂಗ್ ಸ್ಥಳದ ಲಭ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ಇಸಿ ಅಧಿಕಾರಿಗಳು ತಿಳಿಸಿದ್ದಾರೆ. ಮತದಾರರು ಆ್ಯಪ್ ಮೂಲಕ ನೈಜ ಸಮಯದಲ್ಲಿ ಮತಗಟ್ಟೆಗಳಲ್ಲಿನ ಸರದಿ ಸಾಲಿನ ಸ್ಥಿತಿಯನ್ನು ಪರಿಶೀಲಿಸಬಹುದು. ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರು ಆ್ಯಪ್ ಮೂಲಕ ಮತಗಟ್ಟೆಗಳಲ್ಲಿ ಗಾಲಿಕುರ್ಚಿ ಸೌಲಭ್ಯವನ್ನು ಕೋರಬಹುದು.
ವಯಸ್ಸಾದ ಮತ್ತು ಅಂಗವಿಕಲ ಮತದಾರರಿಗೆ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ಸಹ ಆಯೋಗ ಮಾಡಿದೆ. ಆ್ಯಪ್ ಮತಗಟ್ಟೆಗಳು, ಸ್ಪರ್ಧಿಸುವ ಅಭ್ಯರ್ಥಿಗಳು, ಚುನಾವಣಾ ವೇಳಾಪಟ್ಟಿ, ಹಿಂದಿನ ಚುನಾವಣಾ ವಿವರಗಳು, ಅಧಿಕಾರಿಗಳ ಪಟ್ಟಿ, ಹತ್ತಿರದ ಪೊಲೀಸ್ ಠಾಣೆಯ ವಿವರಗಳು ಮತ್ತು ಆರೋಗ್ಯ ಸೌಲಭ್ಯಗಳ ವಿವರಗಳನ್ನು ಸಹ ಒದಗಿಸುತ್ತದೆ.
-
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್












Click it and Unblock the Notifications