ಕಪಿಲ್ ದೇವ್ ಶೀಘ್ರ ಚೇತರಿಸಿಕೊಳ್ಳಲಿ: ಸುರೇಶ್ ಕುಮಾರ್

ಬೆಂಗಳೂರು, ಅ. 25: ದೇಶಕ್ಕೆ ಮೊದಲ ಕ್ರಿಕೆಟ್ ವರ್ಲ್ಡ್‌ ತಂದುಕೊಟ್ಟ ಕ್ರಿಕೆಟ್ ದಂತಕತೆ ಕಪಿಲ್ ದೇವ್ ಅವರಿಗೆ ಲಘು ಹೃದಯಾಘಾತವಾಗಿದೆ. ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರು ನವದೆಹಲಿಯ ಆಸ್ಪತ್ರೆಯಲ್ಲಿ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಭಾರತಕ್ಕೆ ಮೊಟ್ಟ ಮೊದಲ ಕ್ರಿಕೆಟ್ ವರ್ಲ್ಡ್‌ ಕಪ್ ತಂದುಕೊಡುವಲ್ಲಿ ಕಪಿಲ್ ದೇವ್ ಅವರ ಕೊಡುಗೆಯ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಅರಿಯದ ವಿಚಾರವಲ್ಲ.

ಒಂದರ್ಥದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಿ ಕ್ರಿಕೆಟ್‌ ಜಗತ್ತಿನ ಅತಿದೊಡ್ಡ ಸಾಧನೆಯನ್ನು ಮಾಡಿದ್ದು ಕ್ರಿಕೆಟ್ ಇತಿಹಾಸದಲ್ಲಿ ಅಚ್ಛಳಿಯದ ದಾಖಲೆ ಆಗಿ ಉಳಿದಿದೆ. ಅಂತಹ ಡೇರ್ ಡೆವಿಲ್ ಕಪಿಲ್ ದೇವ್ ಇದೀಗ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. 61 ವರ್ಷಗಳ ಕಪಿಲ್ ದೇವ್ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ವಿವಿಧ ಕ್ಷೇತ್ರಗಳ ಗಣ್ಯರು, ಕ್ರಿಕೆಟ್ ಅಭಿಮಾನಿಗಳು ಹಾಗೂ ಕಪಿಲ್ ದೇವ್ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

 Education Minister S Suresh Kumar wishes Cricketer Kapil Dev a speedy recovery

Recommended Video

      India China Border : ಇವರು ಬುದ್ದಿ ಕಲಿಯಲ್ಲಾ | Oneindia Kannada

      ರಾಜ್ಯ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರೂ ಕಪಿಲ್ ದೇವ್ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿದ್ದಾರೆ. 1983 ರಲ್ಲಿ ವಿಶ್ವಕಪ್ ಗೆದ್ದಾಗಿನ ಹುಮ್ಮಸ್ಸೇ ಇಂದೂ ಸಹ! ಬೇಗ ಗುಣಮುಖರಾಗಿ ಹಲವಾರು ವರ್ಷ ಮಾರ್ಗದರ್ಶನ ನೀಡಿ ಎಂದು ಸುರೇಶ್ ಕುಮಾರ್ ಅವರು ಪ್ರಾರ್ಥಿಸಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+