ಪೋಷಕರೇ ಎಚ್ಚರ... ಬೆಂಗಳೂರಿನಲ್ಲಿವೆ 1,266 ಅನಧಿಕೃತ ಶಾಲೆಗಳು
ಬೆಂಗಳೂರು, ಡಿ. 24: ನಗರದಲ್ಲಿ ಅನಧಿಕೃತ ಶಾಲೆಗಳ ಸಂಖ್ಯೆ ಅತಿಯಾಗಿ ಹೆಚ್ಚುತ್ತಿದೆ ಎಂಬ ಆರೋಪ ಅನೇಕ ದಿನಗಳಿಂದ ಕೇಳಿಬಂದಿತ್ತು. ಅದೀಗ ನಿಜವಾಗಿದೆ. ಬೆಂಗಳೂರಿನಲ್ಲಿರುವ ಅನಧಿಕೃತ ಶಾಲೆಗಳು ಎಷ್ಟು ಗೊತ್ತೇ..? ಬರೋಬ್ಬರಿ 1,266.
ಇದು ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯೇ ನೀಡಿರುವ ವರದಿ. ಒಂದೆರಡು ದಿನಗಳ ಅವಧಿಯಲ್ಲಿಯೇ ಈ ಎಲ್ಲ ಶಾಲೆಗಳಿಗೂ ನೋಟಿಸ್ ಜಾರಿ ಮಾಡಬೇಕು. 10 ದಿನಗಳಲ್ಲಿ ಉತ್ತರವನ್ನೂ ಪಡೆಯಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಉಪ ನಿರ್ದೇಶಕರಿಗೆ ಇಲಾಖೆ ಸೂಚಿಸಿದೆ. [ಅನಧಿಕೃತ ಶಾಲೆಗಳ ವಿರುದ್ಧ ಕ್ರಿಮಿನಲ್ ಕೇಸ್]
ಅಲ್ಲದೆ, ಇಲಾಖೆ ಪಟ್ಟಿ ಮಾಡಿರುವ ಎಲ್ಲ ಅನಧಿಕೃತ ಶಾಲೆಗಳ ಹೆಸರನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

"ನೋಟಿಸ್‌ಗೆ ಶಾಲೆಗಳು ನೀಡುವ ಉತ್ತರದ ಆಧಾರದ ಮೇಲೆ ಅವುಗಳ ಮಾನ್ಯತೆ ಮುಂದುವರಿಸುವ ಅಥವಾ ರದ್ದುಪಡಿಸುವ ಕುರಿತು ನಿರ್ಧರಿಸಲಾಗುವುದು" ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮದ್ ಮೊಹ್ಸಿನ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಶಾಲೆಗಳು ಗಲ್ಲಿ ಗಲ್ಲಿಗಳಲ್ಲಿ ತಲೆ ಎತ್ತುತ್ತಿದ್ದರೂ ಯಾರೂ ವಿರೋಧಿಸಿರಲಿಲ್ಲ. ಶಾಲೆಯಲ್ಲಿ ಸೀಟ್ ಸಿಗುವುದೇ ಕಷ್ಟವಾಗಿರುವ ಈ ಸಂದರ್ಭದಲ್ಲಿ ಮಕ್ಕಳು ಕಲಿತರೆ ಸಾಕು ಎಂಬ ಧಾವಂತದಲ್ಲಿ ಪಾಲಕರಿದ್ದರು. ಅವಕಾಶ ಸಿಕ್ಕ ಶಾಲೆಯಲ್ಲಿ ಪೂರ್ವಾಲೋಚನೆ ನಡೆಸದೆ ಮಕ್ಕಳನ್ನು ಸೇರಿಸಿದ್ದರು. [ಅಕ್ರಮ ಶಾಲೆಗಳ ಮೇಲೆ ತೂಗುಗತ್ತಿ]
ಆದರೆ, ನಗರದ ವಿವಿಧ ಶಾಲೆಗಳಲ್ಲಿ ನಡೆದ ಲೈಂಗಿಕ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಇಲಾಖಾ ತನಿಖೆ ನಡೆಸಿದಾಗ ಅಕ್ರಮ ಶಾಲೆಗಳ ಬಣ್ಣ ಬಯಲಾಗಿತ್ತು.
ಎಲ್ಲಿ, ಎಷ್ಟು ಅನಧಿಕೃತ ಶಾಲೆ? :
- ಬೆಂಗಳೂರು ದಕ್ಷಿಣದಲ್ಲಿ ಒಟ್ಟು 798 ಶಾಲೆಗಳಿಗೆ ಅನುಮತಿ ಇಲ್ಲ. ಇವುಗಳಲ್ಲಿ 435 ಪೂರ್ವ ಪ್ರಾಥಮಿಕ, 44 ಸಿಬಿಎಸ್ಇ, ಐಸಿಎಸ್ಇ
- ಬೆಂಗಳೂರು ಉತ್ತರದಲ್ಲಿ 468 ಅನಧಿಕೃತ ಶಾಲೆಗಳಿವೆ. ಇವುಗಳಲ್ಲಿ 243 ಪೂರ್ವ ಪ್ರಾಥಮಿಕ, 93 ಸಿಬಿಎಸ್ಇ, ಐಸಿಎಸ್ಇ
-
ಬೆಂಗಳೂರು, ವಿದ್ಯಾಕಾಶಿ ಧಾರವಾಡದಲ್ಲಿ "ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್" ಆರಂಭ: ಬಜೆಟ್ನಲ್ಲಿ ಘೋಷಣೆ -
Karnataka Highways: 1846 ಕಿಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 5000 ಕೋಟಿ ರೂ ಘೋಷಣೆ -
ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು? -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ












Click it and Unblock the Notifications