Get Updates
Get notified of breaking news, exclusive insights, and must-see stories!

ಅನುದಾನ ರಹಿತ ಶಾಲೆಗಳ ಆವರಣದಲ್ಲಿ ಸಂಘಟನೆಗಳ ಪ್ರವೇಶ ನಿರ್ಬಂಧ

ಬೆಂಗಳೂರು, ಫೆಬ್ರವರಿ 17 : ಆರ್ ಟಿ ಐ ಹಾಗೂ ಸ್ವಯಂಘೋಷಿತ ಸಂಘಟನೆಗಳು ಶಾಲೆಗಳ ಆವರಣದೊಳಗೆ ಅತಿಕ್ರಮ ಪ್ರವೇಶ ಮಾಡುವುದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ಖಾಸಗಿ ಅನುದಾನರಹಿತ ಶಾಲೆಗಳ ಆವರಣವನ್ನು ಸೂಕ್ಷ್ಮ ಹಾಗೂ ಶೂನ್ಯ ಅಪರಾಧ ಪ್ರದೇಶವನ್ನಾಗಿಸಲು ರಾಜ್ಯ ಸರ್ಕಾರವು ಆರ್‌ಟಿಇ, ಆರ್‌ಟಿಐ ಹಾಗೂ ಸ್ವಯಂಘೋಷಿತ ಸಂಘಟನೆಗಳ ಅತಿಕ್ರಮ ಪ್ರವೇಶಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

ಖಾಸಗಿ ಶಾಲೆಗಳ ಆವರಣದೊಳಗೆ ಮಕ್ಕಳ ಪೋಷಕರಲ್ಲದೆ ಇತರೆ ವ್ಯಕ್ತಿಗಳ ಅತಿಕ್ರಮ ಪ್ರವೇಶವನ್ನು ನಿರ್ಬಂಧಿಸುವ ಸಂಬಂಧ ಪ್ರತ್ಯೇಕ ಸುರಕ್ಷತಾ ಕಾನೂನು ರಚಿಸಿ ಭದ್ರತೆ ಒದಗಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

Education Department sought restriction on entry for private schools

ಖಾಸಗಿ ಅನುದಾನರಹಿತ ಶಾಲೆಗಳಿಗೆ ಆರ್‌ಟಿಇ, ಆರ್‌ಟಿಐ ಹಾಗೂ ಎನ್‌ಜಿಒ ಅಥವಾ ಸ್ಥಳೀಯ ಸ್ವಯಂಘೋಷಿತ ಸಂಘಟನೆಗಳು ನಿಯಮಬಾಹಿರವಾಗಿ ಪ್ರವೇಶಿಸಿ ದಾಂಧಲೆ, ಬೆದರಿಕೆ ಹಾಗೂ ಮಾನನಷ್ಟ ಉಂಟು ಮಾಡುತ್ತಿವೆ.

ಇದರಿಂದ ಮಕ್ಕಳ ಹಕ್ಕು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿಶಾಲಾ ಆವರಣವನ್ನು ಸೂಕ್ಷ್ಮ ಹಾಗೂ ಶೂನ್ಯ ಅಪರಾಧ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿ ಸಲ್ಲಿಸಿದ ಮನವಿ ಮೇರೆಗೆ ಶಿಕ್ಷಣ ಸಚಿವರು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಈ ಪತ್ರ ಬರೆದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+