ಬೆಂಗಳೂರಿನಲ್ಲಿರುವ ಬೈಜು ರವೀಂದ್ರನ್ ಮನೆ, ಕಚೇರಿಗಳಲ್ಲಿ ಇಡಿ ಶೋಧ
ಬೆಂಗಳೂರು ಏಪ್ರಿಲ್ 29: ಫೆಮಾ ಉಲ್ಲಂಘನೆ ಆರೋಪದ ಮೇಲೆ ಬೈಜು ರವೀಂದ್ರನ್ ಮತ್ತು ಅವರ ಕಂಪನಿಯ ಮೇಲೆ ಇಂದು ಇಡಿ ದಾಳಿ ಮಾಡಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ನಿಬಂಧನೆಗಳ ಅಡಿಯಲ್ಲಿ ಬೈಜು ರವೀಂದ್ರನ್ ಮತ್ತು ಅವರ ಕಂಪನಿ ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ದಾಳಿ ಮಾಡಿದೆ. ಬೆಂಗಳೂರಿನ ಮೂರು ಕಡೆ (2 ವ್ಯಾಪಾರ ಸ್ಥಳ ಮತ್ತು 1 ವಸತಿ) ಇಡಿ ಶೋಧ ನಡೆಸಿದೆ.

ಕಂಪನಿಯು ಬೈಜುಸ್ ಹೆಸರಿನಲ್ಲಿ ಜನಪ್ರಿಯ ಆನ್‌ಲೈನ್ ಶಿಕ್ಷಣ ಪೋರ್ಟಲ್ ಅನ್ನು ನಡೆಸುತ್ತಿದೆ. ಖಾಸಗಿ ವ್ಯಕ್ತಿಗಳಿಂದ ಬಂದ ವಿವಿಧ ದೂರುಗಳ ಆಧಾರದ ಮೇಲೆ ಕಂಪನಿ ವಿರುದ್ಧ ತನಿಖೆ ಆರಂಭಿಸಲಾಗಿದೆ. ಪರಿಶೀಲನೆ ವೇಳೆ ವಿವಿಧ ದೋಷಾರೋಪಣೆಯ ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ.
ಎಡ್-ಟೆಕ್ ಯುನಿಕಾರ್ನ್ 2011-2023ರ ಅವಧಿಯಲ್ಲಿ ₹28,000 ಕೋಟಿಗಳಷ್ಟು (ಅಂದಾಜು) ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಸ್ವೀಕರಿಸಿದೆ ಎಂದು ದಾಖಲೆಗಳು ಬಹಿರಂಗಪಡಿಸಿವೆ. ಇದಲ್ಲದೆ, ಕಂಪನಿಯು ಇದೇ ಅವಧಿಯಲ್ಲಿ ವಿದೇಶಿ ನೇರ ಹೂಡಿಕೆಯ ಹೆಸರಿನಲ್ಲಿ ಸುಮಾರು ₹9,754 ಕೋಟಿಗಳನ್ನು ವಿವಿಧ ವಿದೇಶಿ ನ್ಯಾಯವ್ಯಾಪ್ತಿಗಳಿಗೆ ರವಾನೆ ಮಾಡಿದೆ.
ಬೈಜೂಸ್ ಮತ್ತು ಅವರ ಸಂಸ್ಥೆ ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್ ವಿದೇಶಿ ನ್ಯಾಯವ್ಯಾಪ್ತಿಗೆ ರವಾನೆಯಾದ ಮೊತ್ತ ಸೇರಿದಂತೆ ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚಗಳ ಹೆಸರಿನಲ್ಲಿ ಸುಮಾರು ₹944 ಕೋಟಿ ಬುಕ್ ಮಾಡಿದೆ. ಅಲ್ಲದೆ, ಕಂಪನಿಯು 2021 ರಿಂದ ತನ್ನ ಹಣಕಾಸು ವೈಹಿವಾಟ ಸಿದ್ಧಪಡಿಸಿಲ್ಲ ಮತ್ತು ಖಾತೆಗಳ ಲೆಕ್ಕಪರಿಶೋಧನೆ ಮಾಡಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಡಿ ನಡೆಸಿದ ತನಿಖೆಯ ಸಂದರ್ಭದಲ್ಲಿ, ಸಂಸ್ಥಾಪಕ ಬೈಜು ರವೀಂದರನ್‌ಗೆ ಹಲವಾರು ಸಮನ್ಸ್‌ಗಳನ್ನು ನೀಡಲಾಗಿದೆ. ಹೆಚ್ಚಿನ ತನಿಖೆ ಪ್ರಕ್ರಿಯೆಯಲ್ಲಿದೆ.
ಈ ಹಿಂದೆ ಶೈಕ್ಷಣಿಕ ತಂತ್ರಜ್ಞಾನ ಕಂಪನಿಯಾದ ಬೈಜೂಸ್ ತನ್ನ ಕೋರ್ಸ್‌ಗಳನ್ನು ಖರೀದಿಸುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆಮಿಷವೊಡ್ಡುವ ಮೂಲಕ ಅಕ್ರಮದಲ್ಲಿ ತೊಡಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ರಾಷ್ಟ್ರೀಯ ಆಯೋಗ(ಎನ್‌ಸಿಪಿಸಿಆರ್) ಬೈಜೂಸ್ ಸಿಇಒಗೆ ಸಮನ್ಸ್ ಜಾರಿ ಮಾಡಿತ್ತು.
ಓಡಾ ಕ್ಲಾಸ್ ಆ್ಯಪ್ ಮೂಲಕ ಆನ್‌ಲೈನ್ ಶಿಕ್ಷಣವನ್ನು ಒದಗಿಸುವ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಶುಕ್ರವಾರ ಬೆಂಗಳೂರಿನ ಎರಡು ಸ್ಥಳಗಳಲ್ಲಿ ಹುಡುಕಾಟ ನಡೆಸಿತ್ತು. ED ಪ್ರಕಾರ, ಕಂಪನಿಯು 100 ಪ್ರತಿಶತ ಚೀನೀ ಪ್ರಜೆಗಳ ಒಡೆತನದಲ್ಲಿದೆ ಮತ್ತು ಕೇಮನ್ ದ್ವೀಪಗಳಲ್ಲಿ ನಿಯಂತ್ರಣ ಕಂಪನಿಯನ್ನು ಹೊಂದಿರುವ ಘಟಕಗಳ ಸಂಕೀರ್ಣ ವೆಬ್‌ನ ಭಾಗವಾಗಿದೆ ಎಂದು ಹುಡುಕಾಟದ ಸಮಯದಲ್ಲಿ ಬಹಿರಂಗಪಡಿಸಲಾಯಿತು.
ಕಂಪನಿಯ ನಿರ್ದೇಶಕರು ಚೀನಾದ ಪ್ರಜೆ ಲಿಯು ಕ್ಯಾನ್ ಮತ್ತು ಭಾರತೀಯ ಪ್ರಜೆ ವೇದಾಂತ್ ಹಮಿರ್ವಾಸಿಯಾ ಅವರಿಗೆ ಸಂಸ್ಥೆಯ ವ್ಯವಹಾರಗಳ ಮೇಲೆ ಯಾವುದೇ ನಿಯಂತ್ರಣ ಹೊಂದಿಲ್ಲ ಎಂದು ಇಡಿ ಹೇಳಿದೆ. ಇಡಿ ಪ್ರಕಾರ, ಕಂಪನಿಯು ಭಾರತದಲ್ಲಿ ನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕ್ ಖಾತೆಗಳಲ್ಲಿ ಚೀನಾದ ನಿರ್ದೇಶಕರು ಅಧಿಕೃತ ಸಹಿದಾರರಾಗಿದ್ದಾರೆ ಮತ್ತು ಖಾತೆಗಳನ್ನು ಚೀನಾದಿಂದ ಆನ್‌ಲೈನ್‌ನಲ್ಲಿ ನಿರ್ವಹಿಸಲಾಗುತ್ತಿದೆ.












Click it and Unblock the Notifications