Get Updates
Get notified of breaking news, exclusive insights, and must-see stories!

'Economic Survey 2026: ದೇಶದ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ'

ಬೆಂಗಳೂರು: ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರ್ಥಿಕ ಸಮೀಕ್ಷೆ ವರದಿ ಹೊರಗೆ ಬಂದಿದೆ. ಭಾರತವು ಕಳೆದ ಕೊವಿಡ್ ನಂತರದ ವರ್ಷಗಳಲ್ಲಿ ಆರ್ಥಿಕವಾಗಿ ಬೆಳೆಯಲು ಹೇಗೆ ಸಾಧ್ಯವಾಗಿದೆ ಎಂಬುದನ್ನು ಈ ವರದಿ ಸ್ಪಷ್ಟವಾಗಿ ತಿಳಿಸಿದೆ. ಮುಂದಿನ ವರ್ಷ ಶೇಕಡಾ 7.4 ರಷ್ಟು ಆರ್ಥಿಕ ಬೆಳವಣಿಗೆ ಆಗುತ್ತಿರುವುದು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಣಯಗಳೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2026 (Union Budget 2026) ಮುನ್ನ ಭಾರತ ಆರ್ಥಿಕ ಸಮೀಕ್ಷೆ 2025-2026 (Economic Survery 2026) ಬಿಡುಗಡೆ ಮಾಡಿದ್ದಾರೆ. ಇದರ ಕುರಿತು ಬಸವರಾಜ ಬೊಮ್ಮಾಯಿ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ.

Economic Survery 2026 Centre s Economic Policies Are Reason for Economic Growth Basavaraj Bommai

ಇಡೀ ಜನಗತ್ತಿನಲಿ ಆರ್ಥಿಕ ಸಂಕಷ್ಟ ಇರುವಂಥ ಸಂದರ್ಭದಲ್ಲಿ ಭಾರತದಲ್ಲಿ ಆರ್ಥಿಕ ಬೆಳವಣಿಗೆ ಆಗುತ್ತಿರುವುದು ದೇಶ ಬೆಳವಣಿಗೆ ಹೊಂದುತ್ತಿರುವುದು ಕಾಣುತ್ತದೆ. ಕಳೆದ ವರ್ಷ ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ಯಲ್ಲಿ ಸುಧಾರಣೆ ತಂದಿರುವುದರಿಂದ ಜನರ ಕೈಯಲ್ಲಿ ಹಣ ಬರುತ್ತಿರುವುದರಿಂದ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ. ಅದೇ ರೀತಿ ಕಳೆದ ವರ್ಷ ಕೇಂದ್ರ ಬಜೆಟ್ ನಲ್ಲಿ ತೆರಿಗೆ ಕಡಿತ ಮಾಡಿ ಇನ್ ಕಮ್ ಟ್ಯಾಕ್ಸ್ ರಿಯಾಯಿತಿ ನೀಡಿರುವುದನ್ನು ಜನರು ಸದುಪಯೋಗ ಪಡೆಸಿಕೊಂಡಿದ್ದು, ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ ಎಂದು ತಿಳಿಸಿದರು.

ತಗ್ಗಿದ ವಿತ್ತೀಯ ಕೊರತೆ, ಆರ್ಥಿಕ ಸಮತೋಲನ

ಇನ್ನೂ ವಿತ್ತಿಯ ಕೊರತೆ 9.2 ಇದ್ದಿದ್ದು 4.4 ಗೆ ಇಳಿದಿರುವುದು ಆರ್ಥಿಕ ನಿರ್ವಹಣೆಯಲ್ಲಿ ಸಮತೋಲನ ಕಾಯ್ದು ಕೊಂಡಿರುವುದನ್ನು ತೋರಿಸುತ್ತದೆ. ಅದೇ ರೀತಿ ಹಣದುಬ್ಬರ ಕಡಿಮೆಯಾಗಿ ಬೆಲೆ ಏರಿಕೆ ನಿಯಂತ್ರಣದಲ್ಲಿದ್ದು ಆರ್ಥಿಕ ಬಳವಣಿಗೆಯಾಗಿರುವುದು ಒಳ್ಳೆಯ ಲಕ್ಷಣ ಕೂಡ. ಅದೇ ರೀತಿ ವಿದೇಶಿ ಬಂಡವಾಳ ಕೂಡ ಹೆಚ್ಚಳವಾಗಿದೆ. ಭಾರತವು ಇತ್ತೀಚೆಗೆ ಯುರೋಪಿಯನ್ ಟ್ರೇಡ್ ಯೂನಿಯನ್ ಜೊತೆ ಒಪ್ಪಂದ ಮುಂಬರುವ ಅಮೇರಿಕ ಜೊತೆಗಿನ ಒಪ್ಪಂದ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಬಲ ತುಂಬುವುದು ಈಗಾಗಲೇ ವರದಿಯಲ್ಲಿ ಹೇಳಲಾಗಿದೆ ಎಂದರು.

ಇದರಿಂದ ಕಳೆದ ಹಲವಾರು ವರ್ಷಗಳಲ್ಲಿ ಆರ್ಥಿಕ ಮೂಲಭೂತ ಸೌಕರ್ಯಗಳಿಗೆ ಸರ್ಕಾರ ಹೂಡಿಕೆ ಮಾಡಿದೆ. ಅದರ ಲಾಭ ಬರುವಂತ ದಿನಗಳಲ್ಲಿ ಆಗುತ್ತದೆ ಎನ್ನುವ ನಿರೀಕ್ಷೆ ಈ ರಿಪೋರ್ಟ್ ನಲ್ಲಿ ಇರುವುದರಿಂದ ಒಂದು ಸದೃಢವಾಗಿರುವ ಆರ್ಥಿಕ ನಿರ್ವಹಣೆ ಮತ್ತು ಆರ್ಥಿಕ ಬೆಳವಣಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಬಲ ನಾಯಕತ್ವದಿಂದ ಎನ್ನುವುದು ಸ್ಪಷ್ಟವಾಗಿದೆ. ಇದು ಹೀಗೆ ಭವಿಷ್ಯದ ದಿನಗಳಲ್ಲಿ ಮುಂದುವರೆದರೆ ಭಾರತ ಜಗತ್ತಿನ ಮೂರನೇ ಆರ್ಥಿಕ ಶಕ್ತಿ ಆಗುವ ಸಾಧ್ಯತೆ ಇದೆ. ಇದು ಒಳ್ಳೆಯ ಬೆಳವಣಿಗೆ ಎಂದು ಅವರಿ ವಿವರಿಸಿದರು.

ಜಿಡಿಪಿ 6.8 ರಿಂದ 7.2ರಷ್ಟು ಬೆಳವಣಿಗೆ ನಿರೀಕ್ಷೆ

ಜನವರಿ 29ರಂದು ಸಂಸತ್ ಜಂಟಿ ಅಧಿವೇಶನ ಆರಂಭವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳಗ್ಗೆ ತಮ್ಮ ಭಾಷಣ ಮುಗಿಸಿದರು. ಮಧ್ಯಾಹ್ನ ಫೆಬ್ರವರಿ 1ರಂದು ಭಾನುವಾರ ಕೇಂದ್ರ ಬಜೆಟ್ ಮಂಡನೆ ಆಗಲಿದೆ. ಅದಕ್ಕು ಮುನ್ನ ಆರಂಭವಾದ ಅಧಿವೇಶನದಲ್ಲಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆ 2026 ಮಂಡಿಸಿದ್ದಾರೆ. 2025-26ರಲ್ಲಿ ಭಾರತದ ಜಿಡಿಪಿಯು 7.4ರಷ್ಟಿತ್ತು. ಇದು ಮುಂದಿನ 2026-27ರಲ್ಲಿ 6.8 ರಿಂದ 7.2ರಷ್ಟು ಬೆಳೆಯಲಿದೆ ಎಂದು ತಿಳಿಸಲಾಗಿದೆ. ಈ ಆರ್ಥಿಕ ಸಮೀಕ್ಷೆ ವರದಿಯನ್ನು ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರ್ ನೇತೃತ್ವದ ತಂಡವು ತಯಾರಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+