ಹೆದ್ದಾರಿಗಳಲ್ಲಿ ಇನ್ನು ಎಲೆಕ್ಟ್ರಾನಿಕಲ್ ಟೋಲ್ ಪೇ ವ್ಯವಸ್ಥೆ

ಬೆಂಗಳೂರಿನಲ್ಲಿ ಭಾರತೀಯ ಕೈಗಾರಿಕಾ ಮಹಾ ಒಕ್ಕೂಟ ಹಮ್ಮಿಕೊಂಡಿರುವ ರಸ್ತೆ ಕಾಮಗಾರಿ ಉತ್ಪನ್ನಗಳ ಸಮ್ಮೇಳನ 'ಎಕ್ಸಕಾನ್-2013' ಉದ್ಘಾಟಿಸಿ ಬುಧವಾರ ಮಾತನಾಡಿದ ಅವರು, ಪ್ರೀಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಮೊಬೈಲ್, ಡೆಬಿಟ್- ಕ್ರೆಡಿಟ್ ಕಾರ್ಡ್, ಆನ್‌ಲೈನ್, ನೆಟ್ ಬ್ಯಾಂಕಿಂಗ್ ಮೂಲಕ ಟೋಲ್ ಪಾವತಿಸುವ 'ಎಲೆಕ್ಟ್ರಾನಿಕಲ್ ಟೋಲ್ ಪೇ' ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.
ಪ್ರಯಾಣಿಕರು ಸಂಚಾರ ದಟ್ಟಣೆಯಿಂದ ಪಾರಾಗಲು ಟೋಲ್ ರಸ್ತೆಗಳನ್ನು ಬಳಸುತ್ತಾರೆ. ಆದರೆ, ಟೋಲ್ ಕೇಂದ್ರಗಳ ಬಳಿ ರಸ್ತೆ ಬಳಕೆ ಶುಲ್ಕ ಪಾವತಿ ಮಾಡಲು ಕಾಯಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್ ಟೋಲ್ ಪೇ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಿದ್ದು, ಮೂರು ತಿಂಗಳಿನಲ್ಲಿ ಇದು ಅನುಷ್ಠಾನಗೊಳ್ಳಲಿದೆ ಎಂದು ಹೇಳಿದರು.
ಟೋಲ್ ಪಾವತಿ ಹೇಗೆ : ಎಲೆಕ್ಟ್ರಾನಿಕ್ ಟೋಲ್ ಪೇ ಮಾಡಲು ಮೊಬೈಲ್‌ನಲ್ಲಿ ಎಂ-ಟೋಲ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ, ಅದರಲ್ಲಿ ತಮ್ಮ ಎಲ್ಲಾ ಸ್ವ ವಿವರಗಳನ್ನು ನೋಂದಾಯಿಸಬೇಕು. ನೆಟ್‌ಬ್ಯಾಂಕಿಂಗ್‌ನಲ್ಲಿ ತಾವು ಪ್ರಯಾಣಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ, ಪ್ರಯಾಣದ ದೂರ ಹಾಗೂ ಟೋಲ್‌ಗೇಟ್‌ಗಳ ವಿವರಗಳನ್ನು ನೋಂದಾಯಿಸಬೇಕು. ನಂತರ ಈ ಹೆದ್ದಾರಿ ಪ್ರವೇಶಿಸುತ್ತಿದ್ದಂತೆ ಬ್ಯಾಂಕ್ ಖಾತೆಯಿಂದ ಟೋಲ್ ಕಡಿತಗೊಳ್ಳುತ್ತದೆ ಎಂದು ಸಚಿವರು ತಿಳಿಸಿದರು.
ಟೋಲ್ ಪ್ಲಾಜಾದಲ್ಲಿರುವ ಸರ್ವರ್‌ಗಳು 800 ಮೀಟರ್ ದೂರದಿಂದಲೇ ಮೊಬೈಲ್ ಅನ್ನು ಗ್ರಹಿಸಲಿವೆ. ವಾಹನ ಟೋಲ್‌ಗೇಟ್ ಬಳಿ ತಲುಪಿಸಿದಾಗ ಗೇಟ್ ತನ್ನಿಂದ ತಾನೇ ತೆರೆದುಕೊಳ್ಳುತ್ತದೆ. ಈ ವ್ಯವಸ್ಥೆಯ ಜಾರಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮೂರು ತಿಂಗಳಲ್ಲಿ ಯೋಜನೆ ಜಾರಿಯಾಗುವ ಸಾಧ್ಯತೆಯಿದೆ ಎಂದರು.












Click it and Unblock the Notifications