E Khata: ಆಸ್ತಿದಾರರಿಗೆ ಗುಡ್‌ನ್ಯೂಸ್: ಇ - ಖಾತಾಗೆ ಹೆಚ್ಚಿನ ಶುಲ್ಕ ಬೇಡ, ರಾಜ್ಯ ಸರ್ಕಾರ ಹೇಳಿದ್ದೇನು ?
E Khata: ಬೆಂಗಳೂರಿನಲ್ಲಿ ಇ -ಖಾತಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮತ್ತೊಂದು ಮಹತ್ವದ ಸಂದೇಶವನ್ನು ಹಂಚಿಕೊಂಡಿದೆ. ಕರ್ನಾಟಕದಲ್ಲಿ ಎಲ್ಲಾ ಆಸ್ತಿಗಳಿಗೂ ಇ - ಖಾತಾ ನೀಡುವುದನ್ನು ಪ್ರಾರಂಭಿಸಿ ಈಗಾಗಲೇ ಒಂದು ವರ್ಷಕ್ಕೂ ಹೆಚ್ಚು ಅವಧಿ ಆಗಿದೆ. ಆದರೆ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಶೇ 30ರಷ್ಟು ಆಸ್ತಿಗಳಿಗೂ ಇ ಖಾತಾ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರವಾರೂ ಎಲ್ಲಾ ಆಸ್ತಿಗಳಿಗೂ ಇ - ಖಾತಾ ನೀಡುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಇದೀಗ ಇ - ಖಾತಾ ದರದ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಲಾಗಿದೆ.
ಆಸ್ತಿದಾರರಿಗೆ ಆಸ್ತಿ ಮಾರಾಟದಲ್ಲಿ ಮೋಸವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ಆಸ್ತಿ ಖರೀದಿ ಮತ್ತು ತೆರಿಗೆಯ ವಿಚಾರದಲ್ಲಿ ಲೋಪವಾಗಬಾರದು ಎನ್ನುವ ಕಾರಣಕ್ಕೆ ಇ ಖಾತಾ ಪರಿಚಯಿಸಲಾಗಿದೆ. ಆದರೆ ಕೆಲವು ಮಧ್ಯವರ್ತಿಗಳು ಹಾಗೂ ಕೆಲವು ಸರ್ಕಾರಿ ಅಧಿಕಾರಿಗಳು ಇ - ಖಾತಾ ಮಾಡಿಕೊಡುವುದಕ್ಕೆ ಹೆಚ್ಚುವರಿ ಹಣ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪವಿದ್ದು. ರಾಜ್ಯ ಸರ್ಕಾರ ಮತ್ತೊಮ್ಮೆ ಆದೇಶ ಹೊರಡಿಸಿದೆ.

ಇ - ಖಾತಾಗೆ ಪಾವತಿಸಬೇಕಾದ ಮೊತ್ತ ಹಾಗೂ ಯಾರಿಗೂ ಹೆಚ್ಚಿನ ಮೊತ್ತವನ್ನು ಪಾವತಿಸಬೇಡಿ ಎಂದು ಸರ್ಕಾರ ಹೇಳಿದೆ. ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವೆಯನ್ನು ಪಡೆಯುವುದಕ್ಕೆ (ಬಿಬಿಎಂಪಿಗೆ 125 ರೂಪಾಯಿ ಮತ್ತು ಬೆಂಗಳೂರು ಒನ್‌ಗೆ ಸೇವಾ ಶುಲ್ಕ 45 ರೂಪಾಯಿ ಹಾಗೂ ಪ್ರತಿ ಪುಟದ ಸ್ಕ್ಯಾನ್‌ಗೆ 5 ರೂಪಾಯಿ) ಪಾವತಿ ಮಾಡಿದರೆ ಸಾಕು.
ಜನಸೇವಕರ ಮೂಲಕ ನಿಮ್ಮ ಮನೆ ಬಾಗಿಲಿಗೆ ಇ ಖಾತಾ ಪಡೆಯುವುದಕ್ಕೆ (ಬಿಬಿಎಂಪಿಗೆ 125 ಹಾಗೂ ಜನಸೇವಕ ಶುಲ್ಕ 45 + 115 = 160 ಹಾಗೂ ಪ್ರತಿ ಪುಟದ ಸ್ಕ್ಯಾನ್‌ಗೆ 5 ರೂಪಾಯು) ಪಾವತಿ ಮಾಡಿದರೆ ಸಾಕು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿದೆ.
ಬೆಂಗಳೂರಿನಲ್ಲಿ ಮಾತ್ರ ಯಾಕೆ: ಇನ್ನು ಬೆಂಗಳೂರಿನಲ್ಲಿ ಇ ಖಾತಾ ಮೇಳಕ್ಕೆ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ ಇ ಖಾತಾ ಮೇಳವನ್ನು ಎಲ್ಲಾ ವಲಯಗಳಲ್ಲೂ ಆಯೋಜನೆ ಮಾಡಲಾಗುತ್ತಿದೆ. ಆದರೆ ಬೆಂಗಳೂರಿನ ಕೆಲವು ಭಾಗದಲ್ಲಿ ಮಾತ್ರ ಯಾಕೆ ಇ ಖಾತಾ ಮೇಳ ನಮ್ಮ ಭಾಗದಲ್ಲಿ ಯಾಕೆ ಮಾಡುತ್ತಿಲ್ಲ ಎಂದು ಕರ್ನಾಟಕದ ವಿವಿಧ ಭಾಗದ ಜನ ಪ್ರಶ್ನೆ ಮಾಡುತ್ತಿದ್ದಾರೆ.
ಬಿ - ಖಾತಾ ಗೊಂದಲ ಇನ್ನೊಂದು ತಿಂಗಳಲ್ಲಿ ಪೂರ್ಣ: ಇನ್ನು ಇ - ಖಾತಾದೊಂದಿಗೆ ಬಿ ಖಾತಾದಲ್ಲಿನ ಗೊಂದಲಗಳು ಸಹ ಇನ್ನೊಂದು ವಾರದಲ್ಲಿ ಇತ್ಯಾರ್ಥವಾಗುವ ಸಾಧ್ಯತೆ ಇದೆ. ಆಗಸ್ಟ್ ಎರಡನೇ ವಾರದ ವೇಳೆಗೆ ಬಿ ಖಾತಾಗೆ ಎ ಖಾತಾ ನೀಡುವ ತಂತ್ರಾಂಶವನ್ನು ಅಭಿವೃದ್ಧಿ ಮಾಡುವುದಾಗಿ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications