Get Updates
Get notified of breaking news, exclusive insights, and must-see stories!

B - Khata: ಇ - ಖಾತಾ & ಬಿ - ಖಾತಾದಲ್ಲಿ ಭಾರೀ ಸಂಕಷ್ಟ: ಕೋಟ್ಯಾಂತರ ರೂಪಾಯಿ ಸ್ಟಾಂಪ್ ಡ್ಯೂಟಿ ನಷ್ಟ!

B - Khata: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಪ್ರಾಪರ್ಟಿಗೆ ಸಂಬಂಧಿಸಿದಂತೆ ಇ ಖಾತಾ ಕಡ್ಡಾಯ ಮಾಡಲಾಗಿದೆ. ಆಸ್ತಿಗಳ ಖರೀದಿ ಹಾಗೂ ಮಾರಾಟದಲ್ಲಿ ಯಾವುದೇ ಲೋಪ ಅಥವಾ ಮೋಸವಾಗಬಾರದು ಎನ್ನುವ ಉದ್ದೇಶದಿಂದ ಇ ಖಾತಾ ಕಡ್ಡಾಯ ಮಾಡಲಾಗಿದೆ. ಆದರೆ ಇದೀಗ ಬಿ ಖಾತಾದಿಂದ ಎ ಖಾತಾ ಹಾಗೂ ಇ ಖಾತಾ ಮಾಡಿಸಿಕೊಳ್ಳುವುದು ಹಲವು ಆಸ್ತಿದಾರರಿಗೆ ಇನ್ನೂ ಸಂಕಷ್ಟವಾಗಿದೆ. ಹೀಗಾಗಿ, ಹಲವು ಆಸ್ತಿದಾರರು ಇ ಖಾತಾ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಬೆಂಗಳೂರಿನ ರಿಯಲ್ ಎಸ್ಟೇಟ್‌ಗೂ ಇದು ಸಂಕಷ್ಟ ತಂದೊಡ್ಡಿದೆ. ಅದರ ವಿವರ ಇಲ್ಲಿದೆ.

ಬೆಂಗಳೂರಿನ ಸಾವಿರಾರು ಜನ ಆಸ್ತಿದಾರರಿಗೆ ಇನ್ನೂ ಇ ಖಾತಾ ಸಂಕಷ್ಟವನ್ನು ತಂದೊಡ್ಡಿದೆ. 340 ಅಪಾರ್ಟ್‌ಮೆಂಟ್ ಸಂಕೀರ್ಣಗಳಿಗೆ ಸೇರಿದ ಸುಮಾರು 18,000 ಫ್ಲಾಟ್ ಖರೀದಿದಾರರು ತಮ್ಮ ಆಸ್ತಿಗಳನ್ನು ನೋಂದಾಯಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅವರಿಗೆ ಇ-ಖಾತಾಗಳನ್ನು ನೀಡಿಲ್ಲ ಎಂದು ಹೇಳಲಾಗಿದೆ. ಕೆಲವರು ಬಿಲ್ಡರ್‌ಗಳಿಗೆ ಆರಂಭಿಕ ಠೇವಣಿಗಳನ್ನು ಪಾವತಿಸಿದ್ದಾರೆ. ಕೆಲವರು ಭಾಗಶಃ ಪಾವತಿಸಿದ್ದಾರೆ ಮತ್ತು ಕೆಲವರು ಗರಿಷ್ಠ ಮೊತ್ತವನ್ನು ಪಾವತಿಸಿದ್ದಾರೆ ಎಂದು ಹೇಳಲಾಗಿದೆ.

E-Khata and B-Khata Chaos Crores Lost in Stamp Duty Real Estate Hit Hard

ಜಿಬಿಎ ಡೆವಲಪರ್‌ಗಳಿಗೆ ಇ-ಖಾತಾಗಳನ್ನು ನೀಡದ ಕಾರಣ, ನೋಂದಣಿಗಳು ಅನಿಶ್ಚಿತ ಸ್ಥಿತಿ ತಲುಪಿದೆ. ಇನ್ನು ಮುಖ್ಯವಾಗಿ ಇ-ಖಾತಾಗಳನ್ನು ಪಡೆಯುವವರೆಗೆ ತಮ್ಮ ಆಸ್ತಿಗಳನ್ನು ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ. ಈ ವಿಳಂಬದಿಂದಾಗಿ ಆಸ್ತಿ ಖರೀದಿದಾರರು ಮತ್ತು ಬಿಲ್ಡರ್‌ಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ ಸಾವಿರಾರು ಕೋಟಿ ರೂಪಾಯಿಗಳ ಆದಾಯವು ಸ್ಟಾಂಪ್ ಡ್ಯೂಟಿಯ ರೂಪದಲ್ಲಿ ರಾಜ್ಯದ ಬೊಕ್ಕಸಕ್ಕೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.

ಕಳೆದ ಒಂದು ವರ್ಷದಿಂದಲೂ ಬಿ ಖಾತಾ ಹಾಗೂ ಇ ಖಾತಾದಲ್ಲಿ ಗೊಂದಲ ಮುಂದುವರಿದಿದೆ. ಸರ್ಕಾರ ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲವೊಂದು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆಯಾದರೂ ಅದು ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಬೆಂಗಳೂರಿನಲ್ಲಿ ಮಾತ್ರವೇ 1 ಲಕ್ಷ ಅರ್ಜಿಗಳು ಇ - ಖಾತಾಗಳಿಗೆ ಸಲ್ಲಿಸಲ್ಪಟ್ಟಿವೆ ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಮಾರು 50 ಪ್ರತಿಶತ ಅರ್ಜಿಗಳನ್ನು ವಿವಿಧ ಕಾರಣಗಳಿಗಾಗಿ ತಿರಸ್ಕರಿಸಲಾಗಿದೆ ಮತ್ತು ಉಳಿದ 50 ಪ್ರತಿಶತ ಅರ್ಜಿದಾರರಿಗೆ ಇ-ಖಾತಾಗಳನ್ನು ನೀಡಲಾಗುತ್ತಿದೆ. ತಿರಸ್ಕರಿಸಲಾದ 50 ಪ್ರತಿಶತದಲ್ಲಿ, ಸುಮಾರು 10 ರಿಂದ 15 ಪ್ರತಿಶತ ಅರ್ಜಿಗಳನ್ನು ಜಿಬಿಎ ಸಿಬ್ಬಂದಿ ತಮಗೆ ತಿಳಿದಿರುವ ಕಾರಣಗಳಿಗಾಗಿ ತಿರಸ್ಕರಿಸಿದ್ದಾರೆ, ಇ-ಖಾತಾ ನೀಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸಿದ್ದರೂ ಸಹ ಕೆಲವೊಂದು ತಿರಸ್ಕೃತವಾಗಿವೆ ಎಂದು ಹೇಳಲಾಗಿದೆ.

ಬಿ - ಖಾತಾಗೆ ಅರ್ಜಿಗಳೇ ಇಲ್ಲ!

ಇನ್ನು ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಿ ಖಾತಾದಿಂದ ಎ ಖಾತಾಗೆ ರಾಜ್ಯ ಸರ್ಕಾರವು ಅನುಮತಿ ಮಾಡಿಕೊಟ್ಟಿದೆ. ಆದರೆ ಬೆಂಗಳೂರಿನಲ್ಲಿ ಬಿ ಖಾತಾಗೆ ಅರ್ಜಿಗಳೇ ಸಲ್ಲಿಕೆಯಾಗುತ್ತಿಲ್ಲ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬಿ ಖಾತಾದಿಂದ ಎ ಖಾತಾ - ಖಾತಾ ಪರಿವರ್ತನೆಗೆ ಭಾರೀ ಶುಲ್ಕ ನಿಗದಿ ಮಾಡಿರುವುದೇ ಮುಖ್ಯ ಕಾರಣ ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+