E-khata Good News: ಅಂತಿಮ ಇ- ಖಾತಾದ ಸರಳ ವಿಧಾನ ಇಲ್ಲಿದೆ, ಗೊತ್ತಾಗದಿದ್ದರೆ ಏನ್ಮಾಡ್ಬೇಕು ನೋಡಿ

ಇ - ಖಾತಾಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ರಾಜ್ಯ ಸರ್ಕಾರವು ಸರಳೀಕರಣಗೊಳಿಸುತ್ತಲ್ಲೇ ಇದೆ. ಇದೀಗ ಅಂತಿಮ ಇ - ಖಾತಾಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಹಂಚಿಕೊಳ್ಳಲಾಗಿದೆ. ಬೆಂಗಳೂರಲ್ಲಿ ಬಿಬಿಎಂಪಿಯು (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ) ಇದೀಗ ಅಂತಿಮ ಇ- ಖಾತದ ಪ್ರಕ್ರಿಯೆಯನ್ನು ಸ್ಟೆಪ್‌ ಟು ಸ್ಟೆಪ್‌ ಹಂಚಿಕೊಂಡಿದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಲ್ಲಿ ಆಸ್ತಿ ಹೊಂದಿದ್ದಾರೆ ಹಾಗೂ ಇ - ಖಾತಾ ಬೇಕಾದರೆ, ಅದರ ಅಂತಿಮ ವಿಧಾನಗಳನ್ನು ಹೇಗೆ ಅನುಸರಿಸಬೇಕು ಎಂದು ಅತ್ಯಂತ ಸರಳ ವಿಧಾನಗಳನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಂಚಿಕೊಂಡಿದೆ. ಅಂತಿಮ ಇ - ಖಾತಾದ ಸರಳ ವಿಧಾನಗಳು ಇಲ್ಲಿವೆ.

E- katha Here is the simple procedure for final e-katha if you don t know what to do

ಬಿಬಿಎಂಪಿ ಅಂತಿಮ ಇ-ಖಾತಾವನ್ನು ಪಡೆಯಲು ಈ ಸರಳ ವಿಧಾನವನ್ನು ಅನುಸರಿಸಿ.

* ಇದಕ್ಕೆ ಮೊದಲು ಆನ್‌ಲೈನ್‌ನಲ್ಲಿ https://BBMPeAasthi.karnataka.gov.in ನಲ್ಲಿ ವಾರ್ಡ್‌ವಾರು ಇ-ಖಾತಾ ಪಟ್ಟಿಯಿಂದ ನಿಮ್ಮ ಕರಡು ಇ-ಖಾತಾ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

* ಸ್ವತ್ತಿನ ಆಸ್ತಿ ತೆರಿಗೆ ರಶೀದಿಯಿಂದ ನಿಮ್ಮ ವಾರ್ಡ್ ಹೆಸರು ಮತ್ತು ಸಂಖ್ಯೆಯನ್ನು ತಿಳಿದುಕೊಳ್ಳಿ

* ಅಂತಿಮ ಇ-ಖಾತಾ ಪಡೆಯಲು ಈ ನಿರ್ದಿಷ್ಟ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಿ/ಅಪ್‌ಲೋಡ್ ಮಾಡಿ. ಆ ನಿರ್ದಿಷ್ಟ ಮಾಹಿತಿಗಳು ಈ ರೀತಿ ಇವೆ.

1) ಸ್ವತ್ತಿನ ಆಸ್ತಿತೆರಿಗೆ ಅರ್ಜಿ ಸಂಖ್ಯೆಯ 10-ಅಂಕಿಗಳನ್ನು ದಾಖಲಿಸಿ.

2) ಮಾಲೀಕರ ಆಧಾರ್ ಆಧಾರಿತ eKYC (ಇ-ಖಾತಾ ನಲ್ಲಿರುವ ಎಲ್ಲಾ ಮಾಲೀಕರು eKYC ಮಾಡಬೇಕಾಗಿದೆ. ಒಂದೊಮ್ಮೆ ಮಾಲೀಕರ ಬಳಿ ಆಧಾರ್ ಕಾರ್ಡ್‌ ಇಲ್ಲದಿದ್ದರೆ) ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಪಾಸ್‌ಪೋರ್ಟ್ ಅಥವಾ ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅನ್ನು ಬಳಸಿ ದೃಢೀಕರಿಸಿಕೊಳ್ಳಬಹುದಾಗಿದೆ.

3) ಮಾಲೀಕರು ಆಸ್ತಿಯನ್ನು ಪಡೆದ ನೋಂದಾಯಿತ ಪತ್ರ ಸಂಖ್ಯೆ (ಕ್ರಯ/ದಾನ ಪತ್ರ ಇತ್ಯಾದಿ) (ಕಾವೇರಿ ತಂತ್ರಾಂಶದಿಂದ ನೋಂದಾಯಿತ ಪತ್ರ ಮಾಹಿತಿಯನ್ನು ಪಡೆಯಲಾಗುವುದು) ದಾಖಲಿಸಬೇಕು.

4) ಆಸ್ತಿಯ ಹಕ್ಕು ನಿರೂಪಿಸುವ ನೋಂದಾಯಿತ ಪತ್ರವು, ನೋಂದಣಿ ದಿನಾಂಕದ ಒಂದು ದಿನದ ಹಿಂದಿನಿಂದ ದಿ: 18.10.2024 ರವರೆಗೆ ಆಸ್ತಿಯ ಋಣಭಾರ ಪ್ರಮಾಣಪತ್ರ ಇರಬೇಕು.

5) ಆಸ್ತಿಯ ಮಾಲೀಕರು, ಆಸ್ತಿಯ ಹೊರಗೆ ಹಾಗೂ ಮುಂದೆ ನಿಂತಿರುವ ಆಸ್ತಿಯ ಪೋಟೋ. 6) BESCOM 10-ಅಂಕಿಯ Acc ID (BESCOM ಬಿಲ್ ನೋಡಿ & ಖಾಲಿ ಭೂಮಿಗೆ ಕಡ್ಡಾಯವಲ್ಲ). 7) BWSSB (ಐಚ್ಛಿಕ) ವಿವರ ಬೇಕಾಗಿರುತ್ತದೆ.

ಈ ಎಲ್ಲಾ ಮಾಹಿತಿ ಹಾಗೂ ದಾಖಲೆಗಳು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ, ಸಲ್ಲಿಸಬೇಕು. ಎಲ್ಲಾ ದಾಖಲೆಗಳು ಸಹ ಸಮರ್ಪಕವಾಗಿದ್ದರೆ, ಒಂದೇ-ದಿನದಲ್ಲಿ ಅಂತಿಮ ಇ-ಖಾತಾ ಸಿಗಲಿದೆ. ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳನ್ನು ಸಹ ಭೇಟಿ ಮಾಡಬೇಕು.

ತಿಳಿಯದಿದ್ದರೆ ಏನು ಮಾಡಬೇಕು: ಒಂದೊಮ್ಮೆ ಮನೆ ಮಾಲೀಕರಿಗೆ ಆನ್‌ಲೈನ್‌ನ ಮೂಲಕ ಈ ವಿಧಾನಗಳು ತಿಳಿಯದೆ ಇದ್ದರೆ. ಇಲ್ಲವೇ ಸವಾಲಾಗಿ ಪರಿಣಮಿಸಿದರೆ ಮತ್ತು ನೀವು ನಿಮ್ಮ ಎಲ್ಲಾ ದಾಖಲೆಗಳು ಮತ್ತು ತಹಲ್‌ವರೆಗಿನ ಋಣಭಾರ ಪ್ರಮಾಣಪತ್ರದೊಂದಿಗೆ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಬಹುದು. ಕಚೇರಿಯ ಸಹಾಯ ಸಿಬ್ಬಂದಿಯು ನಿಮಗೆ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಮತ್ತು ಒಂದು ದಿನದಲ್ಲಿ ನಿಯಮಗಳ ಪ್ರಕಾರ ನಿಮಗೆ ಅಂತಿಮ ಇ-ಖಾತಾಯನ್ನು ಪಡೆಯುವ ನಿಟ್ಟಿನಲ್ಲಿ ಸಹಾಯ ಮಾಡಲಿದ್ದಾರೆ.

ಬಿಬಿಎಂಪಿಯಿಂದ ವಿಶೇಷ ಸೂಚನೆ: ಉಪ-ನೋಂದಣಾಧಿಕಾರಿ ಕಚೇರಿಯಲ್ಲಿ ತುರ್ತು ಆಸ್ತಿ ನೋಂದಣಿ ಇಲ್ಲದೆ ಇರುವವರು, ಬಿಬಿಎಂಪಿ ಹಿಂಬರಹದ (ಕಚೇರಿಗೆ ಹೋಗುವ ಅನಿವಾರ್ಯತೆ ಇಲ್ಲದಿದ್ದರೆ) ಮೂಲಕ ನಿರ್ದಿಷ್ಟವಾಗಿ ಸೂಚಿನೆಯ ಹೊರತು ಅಂತಿಮ ಇ-ಖಾತಾವನ್ನು ಪಡೆಯಲು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಬರದಂತೆ ಬಿಬಿಎಂಪಿ ಮನವಿ ಮಾಡಿದೆ.

ಈ ರೀತಿಯ ಪ್ರಕರಣಗಳಲ್ಲಿ ಅಗತ್ಯಕ್ಕೆ ಅನುಕೂಲದ ಸಮಯದಲ್ಲಿ ಅಂತಿಮ ಇ-ಖಾತಾವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹು. ಅಂತಹ ಸಂದರ್ಭಗಳಲ್ಲಿ ಋಣಭಾರ ಪ್ರಮಾಣಪತ್ರ (EC) ಅಗತ್ಯವನ್ನು ಕೈಬಿಡಲಾಗಿದೆ ಎಂದೂ ಬಿಬಿಎಂಪಿ ಹೇಳಿದೆ. ಇ - ಖಾತಾ ಹಾಗೂ ಅಂತಿಮ ಈ ಖಾತಾದ ಯಾವುದೇ ಪ್ರಶ್ನೆಗಳು, ಗೊಂದಲಗಳು ಅಥವಾ ಸಮಸ್ಯೆಗಳಿಗಾಗಿ 1533ಕ್ಕೆ ಕರೆ ಮಾಡಬಹುದು ಅಥವಾ [email protected] ಗೆ ಇಮೇಲ್ ಮಾಡಬಹುದು ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+