ಡಬ್ಬಿಂಗ್ ಮೇಲಿದ್ದ ನಿಷೇಧ ತೆರವು, ಮುಂದೇನು?
ಬೆಂಗಳೂರು, ಫೆ. 12: ಪರಭಾಷೆಯಲ್ಲಿನ ಜ್ಞಾನ ಮತ್ತು ಮನರಂಜನೆಯನ್ನು ಕನ್ನಡಿಗರು ಕನ್ನಡದಲ್ಲಿ ಪಡೆಯಲಾಗದಂತೆ ಮಾಡಿದ್ದ ಡಬ್ಬಿಂಗ್ ಮೇಲಿದ್ದ ನಿಷೇಧವನ್ನು ಭಾರತೀಯ ಸ್ಪರ್ಧಾ ಆಯೋಗ ಈಗಾಗಲೇ ತೆರವುಗೊಳಿಸಿದೆ. ಮುಂದೇನು? ಎಂಬ ಪ್ರಶ್ನೆಗೆ ಈ ಬಾರಿಯ ತಿಂಗಳ ಅಂಗಳ ಕಾರ್ಯಕ್ರಮದಲ್ಲಿ ಉತ್ತರ ಸಿಗಲಿದೆ.
ಕಾನೂನು ಬದ್ಧವಾಗಿ ಡಬ್ಬಿಂಗ್ ಮಾಡಬೇಕು ಅನ್ನುವವರಿಗೆ ಈಗ ಎಲ್ಲ ಆಯ್ಕೆಯೂ ಲಭ್ಯವಿದೆ. ಕನ್ನಡವನ್ನು ಕಟ್ಟಿ ಹಾಕಿ, ಕನ್ನಡಿಗರು ಕನ್ನಡದಿಂದಲೇ ದೂರವಾಗುವಂತೆ ಮಾಡುತ್ತಿದ್ದ ಡಬ್ಬಿಂಗ್ ಮೇಲಿನ ನಿಷೇಧ ಇನ್ನೇನು ಕೆಲ ಕಾಲದಲ್ಲಿ ತೆರವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಕಾನೂನು ಕೈಗೆತ್ತಿಕೊಂಡಾದರೂ ಡಬ್ಬಿಂಗ್ ತಡೆಯುತ್ತೇವೆ ಅನ್ನುವವರ ಅಬ್ಬರವೂ ಕುಗ್ಗಿದೆ.[ನಿರ್ಮಾಪಕರ ಹೋರಾಟದ ಹಿಂದಿನ ಲೆಕ್ಕಾಚಾರನೇ ಬೇರೆ!]

ಡಬ್ಬಿಂಗ್ ಹೊಸ್ತಿಲಲ್ಲಿ ಕನ್ನಡ ಸಮಾಜ ನಿಂತಿರುವ ಈ ಹೊತ್ತಿನಲ್ಲಿ ಡಬ್ಬಿಂಗ್ ಯಾಕೆ ಕನ್ನಡಕ್ಕೆ ಬೇಕು, ಭಾಷಾ ಹಮ್ಮುಗೆಯ ಒಂದು ಸಾಧನವಾಗಿ ಡಬ್ಬಿಂಗ್ ಅನ್ನು ಹಲವು ನುಡಿ ಜನಾಂಗಗಳು ಬಳಸಿಕೊಂಡಿರುವ ಬಗೆ ಹೇಗಿದೆ? ಮುಂದಿನ ದಿನಗಳಲ್ಲಿ ಡಬ್ಬಿಂಗ್ ಸಾಧ್ಯ ಮಾಡಬಹುದಾದ ಕನ್ನಡದ ಸಾಧ್ಯತೆಗಳೇನು? ಡಬ್ಬಿಂಗ್ ಅನ್ನು ಕನ್ನಡವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಬಳಸಿಕೊಳ್ಳುವ ಬಗೆಯೇನು? [ಸಿನಿಮಾ ಡಬ್ಬಿಂಗ್ ಕಲೆಯ ಭ್ರಷ್ಟಾಚಾರವಷ್ಟೇ: ಭೈರಪ್ಪ]
ಮುಂತಾದ ಪ್ರಶ್ನೆಗಳ ಸುತ್ತ ಈ ಬಾರಿಯ ತಿಂಗಳ ಅಂಗಳ ಕಾರ್ಯಕ್ರಮ ನಡೆಯಲಿದ್ದು, "ಡಬ್ಬಿಂಗ್ - ಕನ್ನಡಿಗರ ಆಯ್ಕೆ ಸ್ವಾತಂತ್ರ್ಯದ ಹಕ್ಕೊತ್ತಾಯ" ಹೊತ್ತಗೆಯ ಬರಹಗಾರರಾದ ಆನಂದ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. [ಡಬ್ಬಿಂಗ್ ವಿರೋಧಿಗಳಿಗೆ ಸಾಮಾನ್ಯ ಪ್ರೇಕ್ಷಕನ ಪ್ರಶ್ನೆ]
ಫೆಬ್ರವರಿ 14ರ ಬೆಳಿಗ್ಗೆ 11ರಿಂದ 12 ವರೆಗೆ ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಹೆಚ್ಚಿನ ವಿವರಕ್ಕೆ ಫೇಸ್ ಬುಕ್ಕಿನಲ್ಲಿರುವ ಇವೆಂಟ್ ಕೊಂಡಿ ನೋಡಿ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications