ದೊಮ್ಮಲೂರಿನ ಗಾರ್ಬೇಜ್ ಸ್ಟ್ರೀಟ್ ಈಗ ಅಜ್ಜ-ಅಜ್ಜಿ ರಸ್ತೆ!

ಬೆಂಗಳೂರು, ಏಪ್ರಿಲ್ 04: ಗಾರ್ಬೇಜ್ ಸ್ಟ್ರೀಟ್ ಎಂದೇ ಹೆಸರು ಪಡೆದಿದ್ದ ದೊಮ್ಮಲೂರಿನ ರಸ್ತೆಯನ್ನು ಇದೀಗ ಅಭಿವೃದ್ಧಿಪಡಿಸಲಾಗಿದ್ದು ಅದಕ್ಕೆ ಅಜ್ಜ ಅಜ್ಜಿ ರಸ್ತೆ ಎಂದು ನಾಮಕರಣ ಮಾಡಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ದೊಮ್ಮಲೂರಿನ ಈ ರಸ್ತೆಯಲ್ಲಿ ಎಲ್ಲಿ ನೋಡಿದರೂ ತ್ಯಾಜ್ಯವೇ ಗೋಚರಿಸುತ್ತಿತ್ತು. ಅಲ್ಲಿನ ಸ್ಥಳೀಯರಿಗೆ ಇದೇ ದೊಡ್ಡ ತಲೆನೋವಾಗಿತ್ತು. ಇದೀಗ ತೊಂದರೆ ನಿವಾರಣೆಯಾಗಿದ್ದು, ಅಲ್ಲಿನ ಸುಮಾರು 250ಮೀಟರ್ ರಸ್ತೆಯನ್ನು ಹೊಸದಾಗಿ ನಿರ್ಮಿಸಲಾಗಿದೆ.

ಕೋಬಲ್ ಸ್ಟೋನ್ ಬಳಸಿ ಅಭಿವೃದ್ಧಿಪಡಿಸಲಾಗಿದೆ. ರಸ್ತೆಯಲ್ಲಿ ಎಲ್ ಇ ಡಿ ಲೈಟ್ ಗಳನ್ನು ಅಳವಡಿಸಲಾಗಿದ್ದು. ರೆಸಿಡೆಂಟ್ಸ್ ಆಫ್ ವೆಲ್ ಪೇರ್ ಅಸೋಸಿಯೇಷನ್ ಸದಸ್ಯರು ಏ.8ರಂದು ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತವಾಗಿಸಲು ಆಲೋಚನೆ ನಡೆಸಿದ್ದಾರೆ.

Domlurs garbage street becomes Ajja Ajji Road

ದೊಮ್ಮಲೂರಿನ ಒಂದನೇ ಅಡ್ಡರಸ್ತೆಯನ್ನು ಇದೀಗ ಅಜ್ಜ ಅಜ್ಜಿ ರಸ್ತೆಯೆಂದು ನಾಮಕರಣ ಮಾಡಲಾಗಿದೆ. ನಗರೋತ್ಥಾನ ಯೋಜನೆಯಡಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಹಲವಾರು ವರ್ಷಗಳಿಂದ ಸಾರ್ವಜನಿಕ ಕೆಂಗಣ್ಣಿಗೆ ಕಾರಣವಾಗಿತ್ತು. 2016ರಲ್ಲಿ ಸ್ಥಳೀಯರೆಲ್ಲರೂ ಸೇರಿ ರಸ್ತೆಯನ್ನು ಶುಚಿಗೊಳಿಸಲಾಯಿತು.

ದೊಮ್ಮಲೂರು ನಿವಾಸಿಗಳು, ರೆಸಿಡೆಂಟ್ಸ್ ಆಫ್ ವೆಲ್ ಫೇರ್ ಅಸೋಸಿಯೇಷನ್ ಹಾಗೂ ಅಗ್ಲಿ ಇಂಡಿಯನ್ ಸಹಯೋಗದೊಂದಿಗೆ ರಸ್ತೆ ನಿರ್ಮಿಸಲಾಯಿತು ಎಂದು ದೊಮ್ಮಲೂರಿನ ನಿವಾಸಿ ಎಸ್.ಕೆ. ನಾಯರ್ ತಿಳಿಸಿದ್ದಾರೆ.

ಎಲ್ಲರ ಪರಿಶ್ರಮದಿಂದ ಅಲ್ಲಿ ಸುತ್ತಮುತ್ತಲಿರುವ ಸಾಕಷ್ಟು ರಸ್ತೆಗಳು ಶುಚಿಯಾಗಿವೆ. ಈ ರಸ್ತೆಯಲ್ಲಿ ವಾಹನಗಳಿಗೆ ಅವಕಾಶವಿಲ್ಲ, ಹಿರಿಯ ನಾಗರಿಕರಿಗಾಗಿಯೇ ನಿರ್ಮಿಸಲಾಗಿದೆ ಶೀಘ್ರದಲ್ಲೇ ಈ ವಿಚಾರ ಕುರಿತು ಫಲಕವನ್ನು ಅಳವಡಿಸಲಾಗುತ್ತದೆ ಎಂದು ಗೀತಾ ವಾಸುದೇವ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+