ದೊಡ್ಡನೆಕ್ಕುಂದಿ ಮೇಲ್ಸೇತುವೆ ಶೀಘ್ರ ವಾಹನ ಸಂಚಾರಕ್ಕೆ ಮುಕ್ತ

ಬೆಂಗಳೂರು, ಮಾರ್ಚ್ 13: ದೊಡ್ಡನೆಕ್ಕುಂದಿ ಬಳಿ ಬಿಡಿಎ ನಿರ್ಮಿಸಿರುವ ಫ್ಲೈ ಓವರ್ ಶೀಘ್ರದಲ್ಲಿ ಉದ್ಘಾಟನೆಯಾಗಲಿದ್ದು, ಈಗಾಗಲೇ ಪರೀಕ್ಷಾ ಸಂಚಾರಕ್ಕಾಗಿ ವಾಹನಗಳ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗಿದೆ.

ಬಾಗ್ಮನೆ ಟೆಕ್ ಪಾರ್ಕ್ ಬಳಿ ಉಂಟಾಗುತ್ತಿದ್ದ ವಾಹನ ದಟ್ಟಣೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಬಿಡಿಎ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. 2017ರ ಏಪ್ರಿಲ್ ನಲ್ಲಿ ಒಂದು ಬದಿಯ ಫ್ಲೈ ಓವರ್ ವಾಹನ ಸಂಚಾರಕ್ಕೆ ಮುಕ್ತವಾಗಿತ್ತು. ಇದೀಗ ಮತ್ತೊಂದು ಬದಿಯ ಮೇಲುರಸ್ತೆಯ ಕಾಮಗಾರಿಯೂ ಪೂರ್ತಿಯಾಗಿದ್ದು, ಮುಂದಿನ ವಾರದಲ್ಲಿ ಉದ್ಘಾಟನೆಯಾಗಲಿದೆ.

2015ರಲ್ಲಿ ಬಿಡಿಎ ಈ ಮೇಲು ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಿತ್ತು. ಈ ವೇಳೆ ಸ್ಥಳೀಯ ನಿವಾಸಿಗಳಿಂದ ಸಂಚಾರ ದಟ್ಟಣೆ ನಿವಾರಣೆ ಕುರಿತ ಸಲಹೆಗಳನ್ನು ಕೂಡ ಪಡೆದುಕೊಂಡಿತ್ತು. ಅದರಂತೆ ಕಾಮಗಾರಿಯನ್ನು ನಡೆಸಿದ್ದು, ಎರಡೂ ಪಥ ಸಂಚಾರಕ್ಕೆ ಮುಕ್ತವಾದರೆ ಈ ಪ್ರದೇಶದ ಟ್ರಾಫಿಕ್ ಜಾಮ್ ಗೆ ಪರಿಹಾರ ಸಿಗಲಿದೆ.

Doddanekundi flyover will open soon

ಸದ್ಯ ಫ್ಲೈ ಓವರ್ ನ ಕಾಮಗಾರಿ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ವಿದ್ಯುತ್ ಕಂಬಗಳು ಹಾಗೂ ಬೀದಿ ದೀಪಗಳ ಅಳವಡಿಕೆ ಕೆಲಸ ನಡೆಯುತ್ತಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಹಲವು ವರ್ಷಗಳ ಸಮಸ್ಯೆ: ಪೀಕ್ ಅವರ್ ನಲ್ಲಿ ಹೆಚ್ಚು ವಾಹನಗಳು ಈ ರಸ್ತೆಯ ಮೂಲಕ ಬರುತ್ತಿದ್ದ ಕಾರಣ ಇಲ್ಲಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ಅದಕ್ಕೆ ಪರಿಹಾರವಾಗಿ ಫ್ಲೈ ಓವರ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, 2015ರಲ್ಲಿ ಕಾಮಗಾರಿ ಆರಂಭವಾದ ಬಳಿಕ ಸಮಸ್ಯೆ ಇನ್ನಷ್ಟು ಹೆಚ್ಚಾಗಿತ್ತು. ಸುಮಾರು ಎರಡೂವರೆ ವರ್ಷ ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರು ತೊಂದರೆ ಎದುರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+