ನಕಲಿ ಡೆಬಿಟ್ ಕಾರ್ಡ್ ಸೃಷ್ಟಿಸಿ 3.17 ಲಕ್ಷ ವಂಚನೆ

ಬ್ಯಾಪ್ಟಿಸ್ಟ್ ಆಸ್ಪತ್ರೆಯ ವೈದ್ಯರೊಬ್ಬರ ಡೆಬಿಟ್ ಕಾರ್ಡನ್ನು ನಕಲು ಮಾಡಿದ್ದು ಸೈಬರ್ ಅಪರಾದ ವಿಭಾಗಕ್ಕೆ ದೂರು ನೀಡಿದ್ದಾರೆ. ದುಷ್ಕರ್ಮಿ ಇವರ ಕಾರ್ಡ್ನ್ನು ನಕಲು ಮಾಡಿ 371 ಸಲ ಹಣವನ್ನು ವರ್ಗ ಮಾಡಿದ್ದಾನೆ.
ಕೆನರಾ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ತೆರೆದಿದ್ದ ವೈದ್ಯೆ ಕಳೆದ ಒಂದು ವರ್ಷದಿಂದ ಖಾತೆಯಲ್ಲಿದ್ದ ಹಣವನ್ನು ಪರಿಶೀಲನೆ ಮಾಡಿರಲಿಲ್ಲ. ಜೊತೆಗೆ ಬ್ಯಾಂಕಿನಿಂದ ಹಣ ವರ್ಗವಾದ ಬಗ್ಗೆ ಅವರ ಮೊಬೈಲ್ಗೆ ಯಾವುದೇ ಮಾಹಿತಿ ಹೋಗುತ್ತಿರಲಿಲ್ಲ. ಆರೋಪಿ ಇದರ ಲಾಭ ಪಡೆದು ಆನ್ಲೈನ್ ಶಾಪಿಂಗ್ನಲ್ಲಿ ವಸ್ತು ಖರೀದಿಸಿದ್ದಾನೆ. ಅಷ್ಟೇ ಅಲ್ಲದೇ ವಿದ್ಯುತ್ ಬಿಲ್ ಸಹ ಪಾವತಿಸಿದ್ದಾನೆ.
ವೈದ್ಯೆ ಕಳೆದ ವಾರ ಖಾತೆಯನ್ನು ಪರಿಶೀಲಿಸಿದಾಗ ಹಣ ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಬ್ಯಾಂಕಿನ ಸಿಬ್ಬಂದಿಯವರನ್ನು ವಿಚಾರಿಸಿದಾಗ ಡೆಬಿಟ್ ಕಾರ್ಡ್ ಬಳಸಿ ಹಣ ವರ್ಗಾವಣೆಯಾಗಿದೆ ಎಂದು ತಿಳಿಸಿದ್ದಾರೆ.[ಸೈಬರ್ ಕ್ರೈಂ ಪಟ್ಟಿಯಲ್ಲಿ ಕರ್ನಾಟಕ ಟಾಪ್ 3]
ಡೆಬಿಟ್ ಕಾರ್ಡ್ ನಕಲು ಮಾಡಿದ್ದು ಹೀಗೆ: ವೈದ್ಯೆ ಒಂದು ವರ್ಷದ ಹಿಂದೆ ಮಳಿಗೆಯೊಂದರಲ್ಲಿ ಡೆಬಿಟ್ ಕಾರ್ಡ್ ಬಳಸಿ ವಸ್ತುವನ್ನು ಖರೀದಿಸಿದ್ದರು. ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸ್ಕಿಮ್ಮರ್ ಯಂತ್ರವನ್ನು ಬಳಸಿ ಡೆಬಿಟ್ ಕಾರ್ಡ್ನ ಮಾಹಿತಿಯನ್ನು ಕಲೆ ಹಾಕಿದ್ದಾನೆ. ಬಳಿಕ ಎಂಎಸ್ಆರ್ ಸಾಫ್ಟ್ವೇರ್, ಎಂಬೋಸರ್ ಸಾಧನದ ಮೂಲಕ ನಕಲಿ ಡೆಬಿಟ್ ಕಾರ್ಡ್ ಮುದ್ರಿಸಿ ವಂಚನೆ ಎಸಗಿದ್ದಾನೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಮತ್ತು ಮೈಸೂರಿನಲ್ಲಿ ಆರೋಪಿ ಡೆಬಿಟ್ಕಾರ್ಡ್ನ್ನು ಬಳಸಿದ್ದು ವಾಣಿಜ್ಯ ಮಳಿಗೆಯಲ್ಲಿರುವ ಸಿಸಿ ಕ್ಯಾಮೆರಾದ ಮೂಲಕ ಆತನ ಚಹರೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Click it and Unblock the Notifications
