Namma metro: ಇಲ್ಲಿವರೆಗೂ ಮೆಟ್ರೋದಲ್ಲಿ ಪ್ರಯಾಣಿಸಿದರ ಸಂಖ್ಯೆ ಎಷ್ಟು ಕೋಟಿ ಗೊತ್ತಾ?-ಮಾಹಿತಿ ತಿಳಿಯಿರಿ

ಬೆಂಗಳೂರು, ಜನವರಿ, 24: ಬೆಂಗಳೂರಿನ ನಮ್ಮ ಮೆಟ್ರೋ ದಿನದಿಂದ ದಿನಕ್ಕೆ ಜನಮನ್ನಣೆ ಪಡೆಯುವ ಮೂಲಕ ಪ್ರಯಾಣಿಕರ ಅನುಕೂತೆಗೆ ತಕ್ಕಂತೆ ವಿಸ್ತರಣೆ ಆಗುತ್ತಲೇ ಇದೆ. ನಗರದ ಬಹುತೇಕ ಮಂದಿ ಮೆಟ್ರೋ ರೈಲನ್ನೇ ಅವಲಂಬಿಸಿದ್ದಾರೆ. ಹಾಗಾದರೆ ಆರಂಭವಾದಾಗಿನಿಂದಲೂ ಬೆಂಗಳೂರಿನ ಈ ನಮ್ಮ ಮೆಟ್ರೋದಲ್ಲಿ ಕಳೆದ 2023ರ ಡಿಸೆಂಬರ್‌ವರೆಗೂ ಎಷ್ಟು ಕೋಟಿ ಪ್ರಯಾಣಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಂಗಳೂರು ಕ್ಷಿಪ್ರ ಸಾರಿಗೆ ವ್ಯವಸ್ಥೆಯಾದ ನಮ್ಮ ಮೆಟ್ರೋದಲ್ಲಿ ಡಿಸೆಂಬರ್‌ 29, 2023ರ ವೇಳೆಗೆ 100 ಕೋಟಿ ಪ್ರಯಾಣಿಕರು ಪ್ರಯಾಣ ಮಾಡಿದ್ದು, ಇದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ (BMRCL)ನ ಮಹತ್ವದ ಸಾಧನೆಯಾಗಿದೆ. ನಮ್ಮ ಮೆಟ್ರೋ ಎಂಜಿ ರಸ್ತೆ ಮತ್ತು ಬೈಯಪ್ಪನ ಹಳ್ಳಿ ನಡುವೆ 6.7 ಕಿಲೋ ಮೀಟರ್‌ ದೂರದವರೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

Do You know how many passengers have travelled in Bengaluru Namma Metro Since its Inception

2011ರ ಅಕ್ಟೋಬರ್‌ 20ರಿಂದ ನಮ್ಮ ಮೆಟ್ರೋ ವಾಣಿಜ್ಯ ಸಂಚಾರ ಆರಂಭಿಸಿದ್ದು, ಕಳೆದ ಡಿಸೆಂಬರ್‌ 29ಕ್ಕೆ 100 ಕೋಟಿಗೂ ಅಧಿಕ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಇನ್ನು ಜನವರಿಯಲ್ಲಿ ಈವರೆಗೆ ಸರಿಸುಮಾರು 1.40 ಕೋಟಿಗೂ ಅಧಿಕ ಪ್ರಯಾಣಿಕರು ಸಂಚಾರ ಮಾಡಿದ್ದಾರೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ ಆರಂಭವಾದ ಪ್ರಾರಂಭಿಕ ವರ್ಷದಲ್ಲಿ ಸರಾಸರಿ 33,152 ಪ್ರಯಾಣಿಕರು ಪ್ರತಿದಿನ ಸೇವೆಗಳನ್ನು ಪಡೆದುಕೊಂಡಿದ್ದಾರೆ. ಬಿಎಂಆರ್‌ಸಿಎಲ್‌ ಕಳೆದ 12 ವರ್ಷಗಳಲ್ಲಿ ವಾರ್ಷಿಕವಾಗಿ ಸರಾಸರಿ 5.5 ಕಿಲೋ ಮೀಟರ್‌ ನೆಟ್‌ವರ್ಕ್‌ ಅನ್ನು ವಿಸ್ತರಿಸಿದೆ. ಪ್ರಸ್ತುತ ನಮ್ಮ ಮೆಟ್ರೋ 56 ನಿಲ್ದಾಣಗಳೊಂದಿಗೆ 74 ಕಿಲೋ ಮೀಟರ್‌ ವ್ಯಾಪಿಸಿರುವ ಕಾರ್ಯಾಚರಣೆಯ ಜಾಲವನ್ನು ಹೊಂದಿದೆ.

ಡಿಸೆಂಬರ್‌ 2023ರ ಹೊತ್ತಿಗೆ ಸರಾಸರಿ 6.1 ಲಕ್ಷ ಪ್ರಯಾಣಿಕರು ಪ್ರತಿದಿನ ಮೆಟ್ರೋ ಸೇವೆಯನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ ದೈನಂದಿನ ಆದಾಯವು 3.8 ಲಕ್ಷದಿಂದ 1.5 ಕೋಟಿಗೆ ಜಿಗಿತವನ್ನು ಕಂಡಿದೆ. ಬಿಎಂಆರ್‌ಸಿಎಲ್‌ ಅಂಕಿಅಂಶಗಳ ಪ್ರಕಾರ, ಬೈಯಪ್ಪನಗಹಳ್ಳಿಯನ್ನು ಮೈಸೂರು ರಸ್ತೆಯೊಂದಿಗೆ ಸಂಪರ್ಕಿಸುವ ಮೆಜೆಸ್ಟಿಕ್‌ ಇಂಟರ್‌ಚೇಂಜ್‌ ಅನ್ನು ತೆರೆದ ನಂತರ, 20216-17ರ ಆರ್ಥಿಕ ವರ್ಷದಲ್ಲಿ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ 1 ಲಕ್ಷ ಮೀರಿದೆ.

ಇನ್ನು ಕೊರೊನಾ ಹಿನ್ನೆಲೆ 2019-20ರಲ್ಲಿ 4.9ದಿಂದ 2020-21ರಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ 95,841ಕ್ಕೆ ಇಳಿಕೆಗೆ ಕಾರಾಣವಾಯಿತು. ಆದರೂ 2021-22ರಲ್ಲಿ ಚೇತರಿಕೆ ಕಂಡುಬಂದಿದ್ದು, ಪ್ರಯಾಣಿಕರ ಸಂಖ್ಯೆ 2.3 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು ಶಂಕರ್‌ ಎಸ್ ಅವರು ಬಿಎಂಆರ್‌ಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ 2011ರಿಂದ ಕಾರ್ಯಾಚರಣರಣೆಗಳು ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದು, ಇಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಸ್ತುತ ಇದೀಗ ಪ್ರತಿ ದಿನವೂ ಸುಮಾರು 300 ಟ್ರಿಪ್‌ಗಳನ್ನು ಎರಡೂ ಮಾರ್ಗಗಳಲ್ಲಿ ನಿರ್ವಹಿಸಲಾಗುತ್ತದೆ. ವಿಶೇಷವಾಗಿ ಮೆಜೆಸ್ಟಿಕ್‌ನಲ್ಲಿ ನಿಲ್ದಾಣದ ದಟ್ಟಣೆಯನ್ನು ನಿರ್ವಹಿಸಲು ಪೀಕ್‌ ಸಮಯದಲ್ಲಿ ಶಾರ್ಟ್‌-ಲೂಪ್‌ ರೈಲುಗಳನ್ನು ನಿಯೋಜಿಸಲಾಗಿದೆ. 400 ಆರಂಭಿಕ ಕಾರ್ಯಾಚರಣೆ ಸಿಬ್ಬಂದಿಯೊಂದಿಗೆ ಬಿಎಂಆರ್‌ಸಿಎಲ್‌ ನೆಟ್‌ವರ್ಕ್‌ನ ಬೆಳವಣಿಗೆಯೊಂದಿಗೆ 1,800 ಉದ್ಯೋಗಿಗಳಿಗೆ ವಿಸ್ತರಿಸಿದೆ.

ಚಲ್ಲಘಟ್ಟದಿಂದ ಕಾಡುಗೋಡಿಗೆ (ವೈಟ್‌ಫೀಲ್ಡ್‌) ಸಂಪೂರ್ಣ ನೇರಳೆ ಮಾರ್ಗವನ್ನು ತೆರೆದ ನಂತರ, ಪೀಕ್‌ ಸಮಯದಲ್ಲಿ ಹೆಚ್ಚುವರಿ ರೈಲುಗಳಿಗೆ ಪ್ರಯಾಣಿಕರ ಬೇಡಿಕೆಯಾಗಿದೆ. ಆದರೂ ಪ್ರಸ್ತುತ ಬೇಡಿಕೆಗಳನ್ನು ಪೂರೈಸಲು ಅಸ್ತಿತ್ವದಲ್ಲಿರುವ ವೇಳಾಪಟ್ಟಿಗಳು ಸಮರ್ಪಕವಾಗಿವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+