• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಕೆಶಿ ಮತ್ತೊಬ್ಬ ಸಿದ್ಧಾರ್ಥ ಆಗಬಾರದು, ಬೆಂಬಲ ನೀಡಿ: ನಂಜಾವಧೂತ ಸ್ವಾಮೀಜಿ

|

ಬೆಂಗಳೂರು, ಸೆಪ್ಟೆಂಬರ್ 11: ಡಿಕೆ ಶಿವಕುಮಾರ್ ಮತ್ತೊಬ್ಬ ಸಿದ್ಧಾರ್ಥ ಆಗಬಾರದು ಹಾಗಾಗಿ ಅವರನ್ನು ಬೆಂಬಲಿಸಿ ಎಂದು ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಬಂಧನದ ವಿರುದ್ಧವಾಗಿ ಒಕ್ಕಲಿಗ ಸಮುದಾಯದವರು ಬುಧವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಿದ್ಧಾರ್ಥ ಅವರಿಗೆ ಬಂದಂತಹ ಪರಿಸ್ಥಿತಿ ಡಿಕೆ ಶಿವಕುಮಾರ್ ಅವರಿಗೆ ಬರಬಾರದು ಹಾಗಾಗಿ ಅವರನ್ನು ಬೆಂಬಲಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಕಾನೂನಿಗೆ ಒಕ್ಕಲಿಗ, ಲಿಂಗಾಯಿತ ಎಲ್ಲರೂ ಒಂದೇ: ಸಚಿವ ಶ್ರೀರಾಮುಲು

ಡಿಕೆ ಶಿವಕುಮಾರ್ ಅವರನ್ನು ನಾಳೆಯೇ ಬಿಡುಗಡೆ ಮಾಡಿ ಎಂದು ನಾವು ಕೇಳುತ್ತಿಲ್ಲ, ನ್ಯಾಯಾಂಗವು ಅವರ ಕೈ ಬಿಡುವುದಿಲ್ಲ ಎಂಬ ನಂಬಿಕೆಯೂ ಇದೆ.

ಆದರೆ ಸಿದ್ಧಾರ್ಥ ಅವರ ಜೀವನದಂತೆ ಡಿಕೆ ಶಿವಕುಮಾರ್ ಅವರ ಬದುಕು ಆಗಬಾರದು, ಅವರ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬುವುದಕ್ಕೆ ನಾವು ಇಲ್ಲಿಗೆ ಬಂದಿದ್ದೇವೆ ಎಂದರು.

ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೆ ತೊಂದರೆಯಾದರೂ ಕೂಡ ನಾವು ಒಂದಾಗಿ ನಿಲ್ಲುತ್ತೇವೆ, ಇದು ದುರುದ್ದೇಶದಿಂದ ಕೂಡಿರದ, ಪಕ್ಷಾತೀತವಾದ ಹೋರಾಟ, ಯಾರ ವಿರುದ್ಧವೂ ಹೋರಾಡುತ್ತಿಲ್ಲ, ನಮ್ಮ ನೋವನ್ನು ವ್ಯಕ್ತಿಪಡಿಸುವುದಕ್ಕಾಗಿ ಹೋರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.

English summary
Nanjavaduta swamiji has said that DK Shivakumar should not be another Siddhartha so support him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X