ಅಂದು ಕರ್ನಾಟಕಕ್ಕೆ ಬಂದಿಲ್ಲ, ಈಗ ಬಂಗಾಳಕ್ಕೆ ಮೋದಿ ಹೋಗಿದ್ದು ಏಕೆ?
ಬೆಂಗಳೂರು, ಮೇ 22: ಅಂಫಾನ್ ಚಂಡಮಾರುತಕ್ಕೆ ಪಶ್ಚಿಮ ಬಂಗಾಳ ಸಂಪೂರ್ಣವಾಗಿ ತತ್ತರಗೊಂಡಿದೆ. ದಕ್ಷಿಣ ಹಾಗೂ ಉತ್ತರ ಬಂಗಾಳದಲ್ಲಿ ಹೆಚ್ಚು ಹಾನಿಯಾಗಿದ್ದು, ಇದುವರೆಗೂ ಸುಮಾರು 80ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.
Recommended Video
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ವೈಮಾನಿಕ ಪರೀಕ್ಷೆ ನಡೆಸಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ, ರಾಜ್ಯಪಾಲ ಜಗದೀಪ್ ಜೊತೆ ಪರಿಸ್ಥಿತಿ ಗಮನಿಸಿದ ಮೋದಿ, ತುರ್ತು ಪರಿಹಾರವಾಗಿ 1000 ಕೋಟಿ ಘೋಷಣೆ ಮಾಡಿದರು.
ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ಸೃಷ್ಟಿಸಿದ ಅನಾಹುತ ವೀಕ್ಷಣೆ ಮಾಡಲು ಖುದ್ದು ಮೋದಿ ಹೋಗಿದ್ದ ವಿಚಾರವನ್ನು ಮುಂದಿಟ್ಟು ನರೇಂದ್ರ ಮೋದಿ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಖಂಡಿಸಿದ್ದಾರೆ. ಮುಂದೆ ಓದಿ....

ಪಿಎಂ ಕಾರ್ಯವೈಖರಿಗೆ ಡಿಕೆಶಿ ಮೆಚ್ಚುಗೆ
ಅಂಫಾನ್ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ತುರ್ತು ಪರಿಹಾರ ಘೋಷಣೆ ಮಾಡಿರುವುದು ನನಗೆ ಸಂತಸ ತಂದಿದೆ ಎಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
|
ಅಂದು ಕರ್ನಾಟಕಕ್ಕೆ ಏಕೆ ಬರಲಿಲ್ಲ?
ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಭಾರಿ ದೊಡ್ಡ ಮಟ್ಟದ ಪ್ರವಾಹ ಉಂಟಾಗಿತ್ತು. 2019ರಲ್ಲಿ ಉಂಟಾದ ಪ್ರವಾಹದಿಂದ ಸಾವಿರಾರು ಜನ ಮನೆ ಕಳೆದುಕೊಂಡರು. ರೈತರು ಭೂಮಿ ಕಳೆದುಕೊಂಡರು. ಕೋಟ್ಯಾಂತರ ರೂಪಾಯಿ ನಷ್ಟ ಆಯಿತು. ಈ ವೇಳೆ ಪ್ರಧಾನಿ ಮೋದಿ ಅವರನ್ನು ವೈಮಾನಿಕ ಪರೀಕ್ಷೆ ಮಾಡಿ ಪರಿಹಾರ ಕೊಡಿ ಎಂದು ವಿಪಕ್ಷಗಳು ಒತ್ತಾಯಿಸಿದವು. ಆದರೆ, ಮೋದಿ ಬರಲಿಲ್ಲ. ಅಮಿತ್ ಶಾ ಬಂದು ಹೋಗಿದ್ದರು. ಇದೇ ವಿಚಾರವನ್ನು ಮುಂದಿಟ್ಟುಕೊಂಡ ಡಿಕೆಶಿ 'ಅಂದು ಕರ್ನಾಟಕಕ್ಕೆ ಪ್ರವಾಹ ಬಂದಾಗ ಮೋದಿ ಏಕೆ ಬರಲಿಲ್ಲ, ಮತ್ತು ಪರಹಾರ ಘೋಷಿಸಲು ತಿಂಗಳುಗಳೆ ತೆಗೆದುಕೊಂಡರು ಏಕೆ?' ಎಂದು ಟೀಕಿಸಿದ್ದಾರೆ.

ಮಲತಾಯಿ ಧೋರಣೆ ಅನ್ನೋದು ಇದೇ ಅಲ್ವಾ?
ಒಂದು ರಾಜ್ಯಕ್ಕೆ ಬೆಣ್ಣೆ ಮತ್ತೊಂದು ರಾಜ್ಯಕ್ಕೆ ಸುಣ್ಣ ಎಂಬಂತೆ ಬಿಜೆಪಿಯಿಂದ ಇಂತಹ ಮಲತಾಯಿ ಧೋರಣೆ ಏಕೆ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಡಿಕೆಶಿ ಅವರ ಈ ಟ್ವೀಟ್‌ಗೆ ನೆಟ್ಟಿಗರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮೋದಿ ಅವರ ಧೋರಣೆಯನ್ನು ಖಂಡಿಸಿದ್ದಾರೆ.

ಚುನಾವಣೆ ಸಮಯ!
ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳಕ್ಕೆ ದಿಢೀರ್ ಭೇಟಿ ಮತ್ತು ತುರ್ತು ಪರಿಹಾರದ ಹಿಂದೆ ರಾಜಕೀಯ ಲೆಕ್ಕಚಾರ ಇದೆ ಎಂಬ ಮಾತುಗಳು ಚರ್ಚೆಯಾಗುತ್ತಿದೆ. ಮತ್ತೊಂದೆಡೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹ ಮೋದಿ ಅವರ ಪರಿಹಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications